ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಬೇಬಿ ಡಾಲ್ ಆದ್ಯಾ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ʼಕೋಟಿಗೋಬ್ಬ -3ʼ ಚಿತ್ರ ತಂಡ ಆದ್ಯಾಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದೆ. ಹಾಗೆಯೇ ಸಿಂಗಿಂಗ್, ಆಕ್ಟಿಂಗ್ ಜತೆಗೀಗ ಬ್ರಾಂಡ್ ಅಂಬಾಸಿಡರ್ ಆಗಿಯೂ ಮಿಂಚುತ್ತಿದ್ದಾರೆ. ಅವರ ಜರ್ನಿಯ ಒಂದು ಝಲಕ್ ಇಲ್ಲಿದೆ…
ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಬೇಬಿ ಡಾಲ್ ಆದ್ಯಾ, ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ಭಾನುವಾರ ಫ್ಯಾಮಿಲಿ ಜತೆಗೆ ಕೇಕ್ ಕತ್ತರಿಸಿ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ನಡುವೆ ಬೇಬಿ ಡಾಲ್ ಆದ್ಯಾಗೆ ʼಕೋಟಿಗೊಬ್ಬ-3ʼ ಚಿತ್ರ ತಂಡ ಸ್ಪೆಷಲ್ ಗಿಫ್ಟ್ ಕೊಟ್ಟಿದೆ. ಬಾಲ ನಟಿ, ಗಾಯಕಿ ಆದ್ಯಾಗೆ ಬರ್ತ್ ಡೇ ವಿಶ್ ಮಾಡಿ ಸ್ಪೆಷಲ್ ಪೋಸ್ಟರ್ ಲಾಂಚ್ ಮಾಡಿದೆ. ಸೋಷಲ್ ಮೀಡಿಯಾದಲ್ಲಿ ಈ ಪೋಸ್ಟರ್ ವೈರಲ್ ಆಗಿದೆ. ಅಭಿನಯ ಚಕ್ರವರ್ತಿ ಕಿಚ್ ಸುದೀಪ್ ಜತೆಗೆ ಬೇಬಿ ಡಾಲ್ ಆದ್ಯಾ ನಿಂತಿರೋ ಫೋಸ್ಟರ್ ಅದು. ಕಿಚ್ಚನ ಅಭಿಮಾನಿಗಳ ಜತೆಗೆ ಬೇಬಿ ಡಾಲ್ ಆದ್ಯಾ ಫ್ಯಾನ್ಸ್ ಕೂಡ ಅದನ್ನು ಕರುನಾಡಿನ ತುಂಬಾ ಹಂಚಿದ್ದಾರೆ. ಸಹಜವಾಗಿಯೇ ಇದು ಬಾಲ ನಟಿ ಆದ್ಯಾಗೂ ಖುಷಿ ತಂದಿದೆ.
ಸರಿಗಮಪ ಲಿಡ್ಲ್ ಚಾಂಪ್ಸ್ ರಿಯಾಲಿಟಿ ಶೋ ಮನೆ ಮಾತಾದ ಪುಟಾಣಿ ಆದ್ಯಾ, ಈಗ ಬಾಲ ನಟಿಯಾಗಿಯೂ ಮಿಂಚುತ್ತಿದ್ದಾರೆ. ಬಹುತೇಕ ಸ್ಟಾರ್ ಸಿನಿಮಾಗಳ ಮೂಲಕವೇ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಅದೃಷ್ಟ ಆದ್ಯಾಗೆ ಸಿಕ್ಕಿದೆ. ಉಪೇಂದ್ರ ಅಭಿನಯದ ʼಹೋಮ್ ಮಿನಿಸ್ಟರ್ʼ ಹಾಗೂ ಕಿಚ್ಚ ಸುದೀಪ್ ಅಭಿನಯದ ʼಕೋಟಿಗೊಬ್ಬ-೩ʼ ಚಿತ್ರದಲ್ಲಿ ಆದ್ಯಾ ಬಾಲ ನಟಿಯಾಗಿ ಅಭಿನಯಸಿದ್ದಾರೆ. ಇದಲ್ಲದೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ʼಭೀಮ ಸೇನ ನಳಮಹಾರಾಜʼ ಚಿತ್ರದಲ್ಲೂ ಆದ್ಯಾ ಅಭಿನಯಸಿದ್ದರು. ಆ ಚಿತ್ರ ಅಮೆಜಾನ್ ಪ್ರೈಂ ಮೂಲಕ ಈಗಾಗಲೇ ಪ್ರೇಕ್ಷಕರ ಮುಂದೆ ಬಂದಿದೆ. ಉಳಿದಂತೆ ಹೋಮ್ ಮಿನಿಸ್ಟರ್ ಹಾಗೂ ʼಕೋಟಿಗೊಬ್ಬ -3ʼ ಚಿತ್ರಗಳು ತೆರೆ ಕಾಣುವುದು ಬಾಕಿಯಿದೆ.
ಒಂದೆಡೆ ಸಿಂಗರ್ ಆಗಿ ದೊಡ್ಡ ಮಟ್ಟಕ್ಕೆ ಬೆಳೆಯುವ ಹಂಬಲ ಹೊತ್ತಿರುವ ಬಾಲಕಿ ಆದ್ಯಾ, ಈಗಾಗಲೇ ಎರಡು ಆಲ್ಬಂ ಸಾಂಗ್ಸ್ ಹೊರ ತಂದಿದ್ದಾರೆ. ಒಂದು ಆಲ್ಬಂ ಸಾಂಗ್ ನಲ್ಲಿ ಧ್ಬನಿ ನೀಡಿದ್ದರೆ, ಇನ್ನೊಂದನ್ನು ತಾವೇ ನಿರ್ಮಾಣ ಮಾಡಿ ಹೊರ ತಂದಿದ್ದಾರೆ. ಇದೇ ಮೊದಲ ಆದ್ಯತೆ ಆಗಿದ್ದರೂ, ಬಾಲ ನಟಿಯಾಗಿಯೂ ಆದ್ಯಾಗೆ ಬೇಡಿಕೆ ಹೆಚ್ಚಿದೆ. ಹೊಸಬರ ಅನೇಕ ಸಿನಿಮಾಗಳಲ್ಲಿ ಆದ್ಯಾ ಅಭಿನಯಿಸುವ ಆಫರ್ ಬಂದಿದ್ದರೂ, ಸದ್ಯಕ್ಕೆ ಚ್ಯೂಸಿ ಆಗಿದ್ದ ಸ್ಟಾರ್ ಸಿನಿಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆಗೀಗ ಬೇಬಿ ಡಾಲ್ ಆದ್ಯಾ ಜಾಹೀರಾತು ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ.
ಬ್ರೈಟ್ ಎಕ್ಸ್ಫರ್ಟ್ ಹೆಸರಿನ ಒಂದು ಹೊಸ ಕಂಪನಿಯ ಡಿಟರ್ಜೆಂಟ್ ಪ್ರಾಡಕ್ಟ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಬೇಬಿ ಡಾಲ್ ಆದ್ಯಾ. ಅಷ್ಟು ಮಾತ್ರವೇ ಅಲ್ಲ, ʼಅಶ್ವಿನಿ ನಕ್ಷತ್ರʼ ಸೀರಿಯಲ್ ಖ್ಯಾತಿಯ ನಟ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಕೂಡ ಇದರ ಬ್ರಾಂಡ್ ಅಂಬಾಸಿಡರ್. ಅವರೊಂದಿಗೆ ಆದ್ಯಾ ಕೂಡ ಇಲ್ಲಿ ಬ್ರಾಂಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ಪೋಷಕರಿಗೂ ಖುಷಿ ಕೊಟ್ಟಿದೆ.ʼ ನಾವು ಯಾವುದಕ್ಕೂ ಒತ್ತಾಯ ಮಾಡಿಲ್ಲ. ಸಿಂಗಿಂಗ್ ಆಕೆಯ ಆಸಕ್ತಿ. ಹಾಗೆಯೇ ನಟನೆಯೂ ಕೂಡ ಅವಳ ಪ್ರತಿಭೆಯಿಂದಲೇ ಸಿಕ್ಕ ಅವಕಾಶ. ಅದರ ಜತೆಗೆ ಈಗ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ. ಎಲ್ಲವೂ ಒಂದ್ರೀತಿ ಅವಾಗಿಯೇ ಬರುತ್ತಿವೆ. ಅದರ ಜತೆಗೆ ಎಜುಕೇಷನ್ ಕೂಡ ಇಂಪಾರ್ಟೆಂಟ್ ಅಲ್ವಾ? ಹಾಗಾಗಿ ಅವಕಾಶ ಇದೆ ಅಂತ ಯಾವುದಕ್ಕೂ ಒತ್ತಾಯ ಮಾಡೋದಿಲ್ಲʼ ಅಂತಾರೆ ಆದ್ಯಾ ಅವರ ತಾಯಿ ಅಶ್ವಿನಿ. ಸಿನಿಲಹರಿ ಕಡೆಯಿಂದ ಆದ್ಯಾ ಗೆ ಹುಟ್ಟು ಹಬ್ಬದ ಶುಭಾಶಯ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿ ಲಹರಿ