ಚಿತ್ರೀಕರಣದ ವೇಳೆ ಗಾಯಗೊಂಡಿದ್ದ ಬಹುಭಾಷಾ ನಟ ಪ್ರಕಾಶ್ ಚೇತರಿಸಿಕೊಂಡಿದ್ದಾರೆ. ಹೈದ್ರಾಬಾದ್ ಆಸ್ಪತ್ರೆಯಲ್ಲಿ ಅವರಿಗೆ ಸರ್ಜರಿ ಯಶಸ್ವಿ ಆಗಿ ನಡೆದಿದೆ. ಈ ಕುರಿತು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಪ್ರಕಾಶ್ ರೈ ಕುತೂಹಲದ ಸ್ಟೇಟಸ್ ಹಾಕಿಕೊಂಡಿದ್ದಾರೆ.ʼ ಡೇವಿಲ್ ಈಸ್ ಬ್ಯಾಕ್, ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದೆ. ನನ್ನ ಆತ್ಮೀಯ ಗೆಳೆಯ ಡಾ.ಗುರು ರೆಡ್ಡಿ ಮತ್ತು ನಿಮ್ಮೆಲ್ಲರ ಪ್ರೀತಿ. ಪ್ರಾರ್ಥನೆಗೆ ಧನ್ಯವಾದಗಳು. ಶೀಘ್ರವೇ ಕೆಲಸಕ್ಕೆ ಹಾಜರಾಗುತ್ತೇನೆ ಅಂತ ಪ್ರಕಾಶ್ ರೈ ಟ್ವಿಟ್ ಮಾಡಿ ದ್ದಾರೆ. ಅವರ ಟ್ವಿಟ್ನಲ್ಲಿ ಕುತೂಹಲ ಮೂಡಿಸಿದ್ದು ಡೇವಿಲ್ ಈಸ್ ಬ್ಯಾಕ್ ಎನ್ನುವ ಪದ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಬೆಡ್ ಮೇಲೆ ಮಲಗಿ ಕಿರುನಗೆ ಬೀರುತ್ತಾ ಸ್ಪೆಲ್ಫಿಗೆ ಪೋಸು ನೀಡಿದ ಫೋಟೋ ದೊಂದಿಗೆ ಪ್ರಕಾಶ್ ರೈ ʼ ಡೇವಿಲ್ ಈಸ್ ಬ್ಯಾಕ್ʼ ಅಂತ ಯಾಕೆ ಹೇಳಿದ್ರು ಗೊತ್ತಾ ? ಅದಕ್ಕೆ ದೊಡ್ಡದಾದ ಕಾರಣವೊಂದಿದೆ. ಅದೇನು ಅಂತ ಹೇಳೋದಿಕ್ಕೂ ಮುನ್ನ ಪ್ರಕಾಶ್ ರೈ ಅಂದ್ರೆ ಉರಿದು ಬಿಳುವವರ ಬಗ್ಗೆ ಹೇಳ್ತೀವಿ ಕೇಳಿ.
ಪ್ರಕಾಶ್ ರೈ ಬರೀ ನಟ ಮಾತ್ರವೇ ಅಲ್ಲವೇ ಅಲ್ಲ, ಒಬ್ಬ ಆಕ್ಟಿವಿಸ್ಟ್ ಕೂಡ ಹೌದು. ನಟನಾಗಿ ಚಿತ್ರರಂಗದಲ್ಲಿ ಸಂಪಾದಿಸುವ ಸಂಭಾವನೆಯಲ್ಲಿ ಒಂದಷ್ಟು ಹಣವನ್ನು ಅರಂಭದಿಂದಲೂ ಸಾಮಾಜಿಕ ಸೇವೆಗಾಗಿ ಮೀಸ ಲಿಟ್ಟ ಹೃದಯವಂತ. ಅತಿವೃಷ್ಟಿ, ಅನಾವೃಷ್ಟಿ ಅಥವಾ ಇನ್ನಾವು ದೋ ಸಂಕಷ್ಟ ಅಂತ ರೈತರು, ಸಾಮಾನ್ಯ ಜನರು ಸಂಕಷ್ಟಗಳಲ್ಲಿ ಸಿಲುಕಿ ದಾಗ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಅವರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾ ಬಂದ ನಟ. ಅದರಲ್ಲೂ ಕೊರೋನಾ ಮೊದಲ ಅಲೆಯ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ನೂರಾರು ಜನರಿಗೆ ಆಹಾರ ಧಾನ್ಯ ನೀಡಿದರು. ಊಟ ಹಾಕಿದರು. ಅದೆಷ್ಟೋ ಜನರಿಗೆ ಆರ್ಥಿಕ ನೆರವು ನೀಡಿ, ಅವರವರ ಊರುಗಳಿಗೆ ತೆರಳುವಂತೆ ಮಾಡಿದರು. ಅದರ ಜತೆಗೆ ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಸದಾ ಕ್ರೀಯಾಶೀಲ ವಾಗಿರುವ ಮನಸು ಅವರದು. ಸರ್ಕಾರದ ಯಾವುದೇ ಜನವಿರೋಧಿ ನಿಲುವುಗಳನ್ನು ಖಂಡಾತುಂಡಾಗಿ ವಿರೋಧಿಸುತ್ತಲೇ ಬಂದಿದ್ದಾರೆ. ಅದರಲ್ಲೂ ಕೋಮುವಾದದ ವಿರುದ್ಧ ಪ್ರಬಲವಾದ ಧ್ವನಿ ಪ್ರಕಾಶ್ ರೈ ಅವರದ್ದು.
ಭಾರತೀಯ ಚಿತ್ರರಂಗದ ಮಟ್ಟಿಗೆ ಮೋದಿ ಅವರನ್ನು ಕಟುವಾಗಿ ಟೀಕಿಸಿದ ನಟರಾರು ಅಂತ ನೋಡಿದಾಗ ಮೊದಲ ಸಾಲಿಗೆ ನಿಲ್ಲುವ ಹೆಸರು ಪ್ರಕಾಶ್ ರೈ ಅವರದ್ದು. ಅದೇ ಕಾರಣಕ್ಕೆ ಬಿಜೆಪಿ ಬೆಂಬಲಿಗರು ಬಹುದೊಡ್ಡ ಪ್ರತಿರೋಧ ಹಾಗೂ ಟೀಕೆಗಳಿಗೆ ಗುರಿಯಾದರು ಪ್ರಕಾಶ್ ರೈ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಪ್ರಕಾಶ್ ರೈ ಒಬ್ಬ ಹಿಂದೂ ವಿರೋಧಿ, ಅವರು ಪಾಕಿಸ್ತಾನಕ್ಕೆ ಹೋಗುವುದೇ ಸೂಕ್ತ ಅಂತಲೂ ಒಂದು ಸಿದ್ದಾಂತದ ಜನ ಅವರನ್ನು ಜರಿದರು. ಒಂದು ಹಂತದಲ್ಲಿ ಅವರು ಅಭಿನಯಿಸುವ ಸಿನಿಮಾ ನಿಷೇಧಿಸಿ ಅಂದವರು ಇದ್ದಾರೆ. ಹಾಗೆಯೇ ಅವರಿಗೆ ಕನ್ನಡದಲ್ಲಿ ಸಿನಿಮಾ ಅವಕಾಶ ಕೊಡ್ಬೇಡಿ ಅಂತ ನಿರ್ಮಾಪಕರಿಗೆ ಒತ್ತಡ ತಂದವರು ಇದ್ದಾರೆ. ಇದೆಲ್ಲ ಯಾಕಂದ್ರೆ ಪ್ರಕಾಶ್ ರೈ ಒಬ್ಬ ವಾಸ್ತವವಾದಿ ಅನ್ನೋದು. ಸರ್ಕಾರಗಳ ಸುಳ್ಳು ಭರವಸೆಗಳು, ಜನ ವಿರೋಧಿ ಧೋರಣೆಗಳನ್ನು ಅವರು ವಿರೋಧಿ ಸುತ್ತಾರೆ ಎನ್ನುವುದಕ್ಕೆ. ಅದಿರಲಿ ಅದೆಲ್ಲ ಹಳೇ ಕಥೆ. ಈಗ್ಯಾಕೆ ಪ್ರಕಾಶ್ ರೈ ಡೇವಿಲ್ ಈಸ್ ಬ್ಯಾಕ್ ಅಂತ ಶಾಕ್ ಕೊಟ್ಟರು ಗೊತ್ತಾ ?
ಕಳೆದ ನಾಲ್ಕೈದು ದಿನಗಳ ಹಿಂದೆ ಪ್ರಕಾಶ್ ರೈ ಹೈದ್ರಾಬಾದ್ ಹೊರವಲಯದಲ್ಲಿ ತೆಲುಗು ಚಿತ್ರವೊಂದರ ಚಿತ್ರೀಕರಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆನ್ನುವ ಸುದ್ದಿ ಬಂದಾಗ, ಅದೇ ಅವರ ವಿರೋಧಿ ಪಡೆ ಸಂಭ್ರಮ ಆಚರಿಸಿತು. ಜತೆಗೆ ಸೋಷಲ್ ಮೀಡಿಯಾ ದಲ್ಲಿ ಮಾನವೀಯತೆ ಇಲ್ಲದ ಮೃಗಗಳ ಹಾಗೆ ಕಾಮೆಂಟ್ ಆಗಿ ತಮ್ಮ ವಿಕೃತ ಮನಸ್ಥಿತಿಗಳನ್ನು ತೋರಿದ್ದರು. ಸಹಜವಾಗಿಯೇ ಇವೆಲ್ಲ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿ ದೊಡ್ಡ ಸುದ್ದಿಯೂ ಆಗಿದ್ದವು. ತುಂಬಾ ಜನರು ಈ ಕೆಟ್ಟ ಕಾಮೆಂಟ್ ಗಳಿಗೆ ತಿರುಗೇಟು ನೀಡಿ, ಇದು ವಿಕೃತ ಮನಸಿನ ಅತಿರೇಕ ಅಂದಿದ್ದರು. ಇನ್ನು ಕೆಲವರು ಸಮರ್ಥಿಸಿಕೊಂಡು, ಪ್ರಕಾಶ್ ರೈ ಒಬ್ಬ ಹಿಂದೂ ವಿರೋಧಿ ಎಂಬುದಾಗಿ ವಿಜೃಂಭಿಸಿದ್ದರು. ಅದಕ್ಕೆಲ್ಲ ಉತ್ತರವೇ ಎನ್ನುವ ಹಾಗೆ ಗುರುವಾರ ವಷ್ಟೇ ನಟ ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಡೇವಿಲ್ ಬ್ಯಾಕ್ ಅಂತ ಗುಡುಗು ಮೂಲಕ ಶಾಕ್ ನೀಡಿದ್ದು ವಿಶೇಷ. ಕೊನೆಯದಾಗಿ ಒಂದು ಮಾತು, ಭಾರತೀಯ ಚಿತ್ರರಂಗದಲ್ಲಿಯೇ ಇವತ್ತು ದೊಡ್ಡ ಹೆಸರು ಮಾಡಿರುವ ಪ್ರಕಾಶ್ ರೈ ಅವರಂತಹ ಬಹುಭಾಷಾ ನಟ ಕನ್ನಡದವರು ಅನ್ನೋದೇ ನಮಗೆಲ್ಲ ಹೆಮ್ಮೆ. ಅಷ್ಟು ಮಾತ್ರವೇ ಅಲ್ಲ, ಸದಾ ಕನ್ನಡ ಕನ್ನಡ ಎನ್ನುತ್ತಲೇ ಯಾರಿಗೂ ಉಪಯೋ ಗವೇ ಇಲ್ಲದಂತೆ ತಾವಾಯಿತು, ತಮ್ಮ ಪಾಡಾಯಿತು ಅಂತ ಇರುವ ಕನ್ನಡದ ಅದೆಷ್ಟೋ ನಟರ ನಡುವೆ ಪ್ರಕಾಶ್ ರೈ ಸದಾ ಕ್ರಿಯಾಶೀಲವಾಗಿದ್ದು ನಟನೆ, ಕೃಷಿ, ಸಮಾಜ ಸೇವೆ ಹಾಗೂ ರಾಜಕೀಯ ಅಂತ ಪಾದಾರಸದಂತೆ ಹರಿದಾಡುತ್ತಲೇ ಇದ್ದಾರೆನ್ನುವುದಕ್ಕಾದರೂ ನಾವು ಅವರನ್ನು ಮೆಚ್ಚಲೇಬೇಕು.