ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ!
ಗಂಧದಗುಡಿ ಅರಗಿಣಿ ಯಾವುದರಲ್ಲಿ ಕಮ್ಮಿ ಗುರು.. ಕಣ್ಣರಳಿಸಿ ನೋಡಿ- ಗಡಿದಾಟೋದು ಬಿಡಿ, ಹೀಗಂತ ನಾವು ಹೇಳ್ತಿಲ್ಲ ಅವರ ಫ್ಯಾನ್ಸ್ ಹೇಳ್ತಿದ್ದಾರೆ. ಗಿಣಿಯ ಫ್ಯಾನ್ಸ್ಫಾಲೋಯರ್ಸ್ ಈ ರೀತಿಯಾಗಿ ಗುಡುಗುತ್ತಿರುವುದಕ್ಕೂ ಕಾರಣ ಇದೆ ಅದೇನು ಅಂತ ಹೇಳ್ತೀವಿ. ಅದಕ್ಕೂ ಮುನ್ನ ಅರಗಿಣಿಯ ಹವಾ ಕಥೆ ಕೇಳಿ.ಗಿಣಿ ಅಂದಾಕ್ಷಣ ನಿಮ್ಮೆಲ್ಲರ ಕಣ್ಮುಂದೆ ನಟಿ ರಾಗಿಣಿ ಬಂದು ನಿಲ್ತಾರೆ ಅಪ್ ಕೋರ್ಸ್ ನಿಲ್ಲಬೇಕು. ಚಂದನವನಕ್ಕೆ ಊರಿಗೊಬ್ಳೆ ಪದ್ಮಾವತಿ ಹೇಗೋ ಸ್ಯಾಂಡಲ್ ವುಡ್ ಗೆ ಒಬ್ಬರೇ ಗಿಣಿ ಅವರೇ ನಟಿ ರಾಗಿಣಿಯವರು. ಸೌಂದರ್ಯದ ಕಣಿಯಂ ತಿರುವ ಅರಗಿಣಿ ಮಾದಕ ನೋಟ ಮಾತ್ರವಲ್ಲ ಮನಮೋಹಕ ಅಭಿನ ಯ ದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಬೆಳ್ಳಿತೆರೆಯನ್ನೂ ಮೆಚ್ಚಿಸಿ ಬಿಗ್ ಸ್ಕ್ರೀನ್ ನಲ್ಲಿ ದಶಕ ಪೂರೈಸಿದ್ದಾರೆ.
ಈ ಹತ್ತು ವರ್ಷದ ಸಿನಿಜರ್ನಿಯಲ್ಲಿ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿದ್ದಾರೆ. ನಾಯಕನ ಜೊತೆ ಬರೀ ಮರಸುತ್ತು ವುದಲ್ಲದೇ ನಾಯಕಿ ಪ್ರಧಾನ ಸಿನಿಮಾ ಮೂಲಕ ಬೆಳ್ಳಿಪರದೆಯನ್ನು ಬೆಚ್ಚಿಸಿ, ಬಾಕ್ಸ್ ಆಫೀಸ್ ನ ಶೇಕ್ ಮಾಡಿದ್ದಾರೆ. ನಾಯಕಿಯಾಗಿ ತರಹೇವಾರಿ ಪಾತ್ರಗಳಿಗೆ ಜೀವತುಂಬಿ ಸಿಲ್ವರ್ಸ್ಕ್ರೀನ್ ಮೇಲೆ ದಿಬ್ಬಣ ಹೋಗಿ ಬಂದಿದ್ದಾರೆ. ಎಕ್ಸ್ ಪಿರಿಮೆಂಟ್ ಮಾಡುವ ಹೊತ್ತಲ್ಲಿ ಎಡವಿ ದ್ದಾರೆ, ಕೆಳಗೆ ಬಿದ್ದು ಮೇಲೇಳಲು ಒದ್ದಾಡಿದ್ದಾರೆ. ಚಾರ್ಮ್ ಉಳಿಸಿ ಕೊಳ್ಳೋದಕ್ಕೆ ಹಗಲು-ರಾತ್ರಿ ಕಷ್ಟಪಟ್ಟಿದ್ದಾರೆ.
ಯಾವುದೇ ಜರ್ನಿಯಲ್ಲಿ ಅಪ್ಸ್ ಅಂಡ್ ಡೌನ್ಸ್ ಇದ್ದೇ ಇರುತ್ತೆ. ಅಂತಹ ಜರ್ನಿಯ ಅನುಭವ ರಾಗಿಣಿಗೂ ಆಗಿದೆ. ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿರುವ ರಾಗಿಣಿ ಡ್ರಗ್ಸ್ ವಿಚಾರದಲ್ಲಿ ಜೈಲಿಗೆ ಹೋಗಬೇಕಾಗಿ ಬಂತು. ಅಲ್ಲಿಂದ ಬಂದ್ಮೇಲೆ ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇರಬಹುದಾಗಿತ್ತು ಆದರೆ ಅದಕ್ಕೆ ರಾಗಿಣಿ ಮನಸ್ಸು ಒಪ್ಪಲಿಲ್ಲ. ಹೀಗಾಗಿ, ಮತ್ತೆ ಸಾಮಾಜಿಕ ಕೆಲಸಕ್ಕೆ ಅಣಿಯಾದರು. ಕೊರೊನಾ ಸಂಕಷ್ಟದಿಂದ ನರಳುತ್ತಿದ್ದವರಿಗೆ ನೆರವಿನ ಹಸ್ತ ಚಾಚಿದರು ಅನ್ನಪೂರ್ಣೇಶ್ವರಿ ಎನಿಸಿಕೊಂಡರು. ನಟಿ ರಾಗಿಣಿಯ ಹೃದಯವಂತಿಕೆ ಹಾಗೂ ಸಮಾಜಮುಖಿ ಕೆಲಸಕ್ಕೆ ಅತ್ಯದ್ಬುತ ಪ್ರಶಸ್ತಿ ಕೂಡ ಸಿಗ್ತು.
ಇಷ್ಟೆಲ್ಲಾ ಹೇಳಿದ್ಮೇಲೆ ನಟಿ ರಾಗಿಣಿಯ ಹೊಸ ವರಸೆ ಹಾಗೂ ಅವರ ಅಭಿಮಾನಿಗಳ ಒಕ್ಕೊರಲ ಅಭಿಪ್ರಾಯವನ್ನು ನಿಮ್ಮ ಮುಂದೆ ಇಡಲೆ ಬೇಕು. ನಟಿ ರಾಗಿಣಿ ದ್ವಿವೇದಿ ಬದಲಾಗಿದ್ದಾರೆ. ಎಷ್ಟರ ಮಟ್ಟಿಗೆ ಅಂದರೆ ಬಜಾರ್ನಲ್ಲಿ ನಾವೇ ಸ್ಲಿಮ್ ಸುಂದರಿಯರು ಅಂತ ಮೆರೆಯುತ್ತಿ ದ್ದವರು ಕೂಡ ಅರಗಿಣಿಯ ಜಿರೋ ಸೈಜ್ ಫಿಗರ್ನ ನೋಡಿ ಹೊಟ್ಟೆ ಉರಿದು ಕೊಳ್ಳುತ್ತಿದ್ದಾರೆ. ಹೌದು, ಮೊದಲೇ ಸ್ಲಿಮ್ ಆಗಿದ್ದ ರಾಗಿಣಿ ಮೊಗದಷ್ಟು ಸ್ಲಿಮ್ ಆಗಿದ್ದಾರೆ. ಜಿಮ್-ವರ್ಕೌಟ್ನ ಬದಿಗಿಟ್ಟು ಯೋಗದ ಮೊರೆ ಹೋದ ರಾಗಿಣಿ ಭರ್ತಿ ಐದು ಕೆ.ಜಿ ತೂಕ ಇಳಿಸಿಕೊಂ ಡಿದ್ದಾರೆ. ಯೋಗ ಮಾಡಿ ದೈಹಿಕವಾಗಿ ಮತ್ತು ಮಾನಸಿ ಕವಾಗಿ ಸ್ಟ್ರಾಂಗ್ ಆಗಿದ್ದೇನೆಂದು ಸಿನಿಲಹರಿ ಜೊತೆ ಹೇಳಿಕೊಂಡಿದ್ದಾರೆ.
ನಟಿ ರಾಗಿಣಿ ತೂಕ ಇಳಿಸಿಕೊಂಡಿರುವುದು ಯಾವುದೋ ಸಿನಿಮಾಗಾಗಿ ಅಲ್ಲ ಫಿಸಿಕಲಿ ಫಿಟ್ ಆಗರ್ಬೇಕು ಹಾಗೂ ಹೆಲ್ತಿಯಾಗರ್ಬೇಕು ಎನ್ನುವ ಕಾರಣಕ್ಕೆ ಯೋಗದ ಮೊರೆ ಹೋಗಿದ್ದಾರೆ. ತಮ್ಮ ನೆಚ್ಚಿನ ನಾಯಕಿಯ ನಯಾ ಲುಕ್ನ ನೋಡಿದ ಅವರ ಫ್ಯಾನ್ಸು ನಮ್ಮ ಅರಗಿಣಿಗೆ ಏನ್ ಕಮ್ಮಿಯಾಗಿದೆ ಹೇಳ್ರಪ್ಪಾ? ಆರಡಿ ಹೀರೋಗೆ ಹೈಟ್ ಮ್ಯಾಚ್ ಮಾಡ್ತಾರೆ? ಜಿರೋ ಸೈಜ್ನ ಮೆಂಟೇನ್ ಮಾಡಿದ್ದಾರೆ, ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿಯೂ ಇದ್ದಾರೆ. ಇಷ್ಟೆಲ್ಲಾ, ಇದ್ದರೂ ಕೂಡ ನಮಗೆ ಗಿಲ್ಲಿ ಗರ್ಲ್ ಬೇಕು, ಕಿಕ್ ಸುಂದರಿನೇ ಆಗ್ಬೇಕು, ಮಲೆಯಾಳಂ ಕುಟ್ಟಿನೇ ಬೇಕು ಅಂತ ಯಾಕೇ ಹಠ ಮಾಡ್ತೀರಿ? ನಮ್ಮ ಇಂಡಸ್ಟ್ರಿಯ ಹೆಣ್ಣುಮಕ್ಕಳನ್ನು ಅದ್ಯಾಕೆ ಕಡೆಗಣಿಸ್ತೀರಿ ?ಕೋಟಿ ಕೋಟಿ ಸುರಿದು ಅದ್ಯಾಕೆ ಬೇರೆ ಭಾಷೆಯ ಬೆಡಗಿಯರನ್ನು ರತ್ನಗಂಬಳಿ ಹಾಕಿಕೊಂಡು ಕರೆತರುತ್ತೀರಿ? ನಮ್ಮಲ್ಲೇ ಗಿಲ್ಲಿಯಂಹ ಗರ್ಲ್ಸ್ ಇದ್ದಾರೆ, ಮಾದಕತೆ ತುಂಬಿರುವ ಅಭಿನಯದ ಮೂಲಕ ಕಿಕ್ಕೇರಿಸುವ ನಟಿಮಣಿಯರು ಇದ್ದಾರೆ. ಒಂದೇ ಒಂದು ಸೆಕೆಂಡ್ ಕಣ್ಣರಳಿಸಿ ನೋಡಿದ್ರೆ ನೀವ್ಯಾರು ಗಡಿದಾಟಲ್ಲ ಬರೆದಿಟ್ಟುಕೊಳ್ಳಿ ಹೀಗಂತಾರೇ, ಸಕಲ ಕನ್ನಡ ನಟಿಮಣಿಯರ ಅಭಿಮಾನಿ ದೇವರುಗಳು.
-ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ