ಬಿಗ್ ಬಾಸ್ ಸೀಸನ್ 8 ಫಿನಾಲೆ ಹಂತಕ್ಕೆ ಬಂದಿದೆ. ಈಗಲೂ ಅಲ್ಲಿರುವ ಈ ಕ್ಯೂಟ್ ಜೋಡಿ, ತಮ್ಮ ಮೋಹಕ ನೋಟ, ಮುತ್ತಿನಂತಹ ಮಾತು, ಕಚಗುಳಿ ಇಡುವ ನಗುವಿನ ಮೂಲಕ ಕನ್ನಡ ಕಿರುತೆರೆಯ ಕೋಟ್ಯಾಂತರ ವೀಕ್ಷಕರ ಮನೆ ಗೆಲ್ಲುತ್ತಿದೆ. ಇವರಲ್ಲಿಯೇ ಒಬ್ಬರು ಫಿನಾಲೆಯ ವೇದಿಕೆ ಮೇಲೆ ನಿಂತು ಟ್ರೋಫಿ ಗೆಲ್ಲೋದು ಖಚಿತ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆಯೇ ಈ ಜೋಡಿಯ ಬಗ್ಗೆ ಬಿಗ್ ಬಾಸ್ ಮನೆಯಾಚೆ ಅಂದ್ರೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಬರುವಂತೆ ಮಾಡುವ ಹುನ್ನಾರವೊಂದು ಸೋಷಲ್ ಮೀಡಿಯಾದಲ್ಲಿ ನಡೆದಿದೆ. ಇತ್ತೀಚೆಗೆ ಅಂದರೆ ಒಂದು ವಾರದ ಹಿಂದೆ ನಟಿ ದಿವ್ಯಾ ಉರುಡುಗ ಅವರ ಜತೆಗೆ ಇನ್ನಾರೋ ಹುಡುಗ ಇದ್ದ ಒಂದು ಫೋಟೋ ವೈರಲ್ ಆಯಿತು. ಮತ್ತೊಂದೆಡೆ ಅರವಿಂದ್ ಕೆ.ಪಿ. ಜತೆಗೆ ಇನ್ನಾರೋ ಒಂದು ಹುಡುಗಿ ಜತೆಗಿದ್ದ ಫೋಟೋ ಕೂಡ ವೈರಲ್ ಆಯಿತು. ಇಷ್ಟು ದಿನ ಎಲ್ಲೂ ಹರಿದಾಡದ ಈ ಫೋಟೋಗಳು ಈಗೇಕೆ ಸೋಷಲ್ ಮೀಡಿಯಾದಲ್ಲಿ ಹರಿದಾಡಿದವು? ಈ ಫೋಟೋಗಳಲ್ಲಿ ಇದ್ದಂತೆ ದಿವ್ಯಾ ಉರುಡುಗ ಅವರಿಗೆ ಬ್ರಾಯ್ ಫ್ರೆಂಡ್ ಇದ್ದದ್ದು ನಿಜವೇ? ಅತ್ತ ಅರವಿಂದ್ ಕೆ.ಪಿ. ಅವರಿಗೆ ಒಬ್ಬ ಗರ್ಲ್ ಫ್ರೆಂಡ್ ಇದ್ದದ್ದು ನಿಜವೇ? ಸೋಷಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಇಂತಹ ಪ್ರಶ್ನೆಗಳು ಹುಟ್ಟಿದ್ದು ಅಷ್ಟೇ ಸಹಜ. ಆದರೆ ಅದರ ಹಿಂದಿನ ಅಸಲಿ ಕಹಾನಿ ಈಗ ಬಯಲಾಗಿದೆ.
ಒಂದು ಮೂಲಗಳ ಪ್ರಕಾರ ಈ ಫೋಟೋಗೆಳೆರೆಡು ಯಾರೋ ಕ್ರಿಯೇಟ್ ಮಾಡಿದ್ದೇ ಆಗಿದೆ. ಹಾಗೆಯೇ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಅಂದ್ರೆ ಬಿಗ್ ಬಾಸ್ ಮನೆಯೊಳಗಡೆ ಇರುವ ಒಬ್ಬ ಕಂಟೆಸ್ಟೆಂಡ್ ಪರವಾದ ವ್ಯಕ್ತಿಗಳೇ ಈ ಫೋಟೋಗಳನ್ನು ಎಡಿಟ್ ಮೂಲಕ ಕ್ರಿಯೇಟ್ ಮಾಡಿ, ಅರವಿಂದ್ ಹಾಗೂ ದಿವ್ಯಾ ಉರುಡುಗ ಜೋಡಿಯ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲು ಹೊರಟಿರುವ ಸಂಗತಿಯನ್ನು ಮೂಲಗಳು ಬಹಿರಂಗ ಪಡಿಸಿವೆ. ಸದ್ಯಕ್ಕೆ ಈ ಎಡಿಟ್ ಫೋಟೋ ಹಿಂದಿನ ಸೂತ್ರಧಾರಿ ಯಾರು ಅಂತ ಖಚಿತವಾಗಿ ಗೊತ್ತಿಲ್ಲ. ಆದರೆ ಅಲ್ಲಿರುವ ವ್ಯಕ್ತಿಯೇ ಈ ಎಡಿಟ್ ಫೋಟೋಗಳ ಹಿಂದಿನ ಸೂತ್ರಧಾರಿ ಎನ್ನುವ ಸುದ್ದಿ ಮಾತ್ರ ಹರಿದಾಡುತ್ತಲೇ ಇದೆ.