ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಪಕ್ಕದಲ್ಲಿ ನಿಲ್ಲಬೇಕು ಅಂತ ಕಾಯ್ತಿರುವವರು ಒಬ್ಬರಾ..ಇಬ್ಬರಾ…ಲೆಕ್ಕಾನೇ ಇಲ್ಲ ಬುಡು ಗುರು. ಅಪ್ಪು ಜೊತೆ ಆಕ್ಟ್ ಮಾಡೋದಕ್ಕೆ ಒಂದೇ ಒಂದು ಚಾನ್ಸ್ ಸಿಕ್ಕರೆ ಸಾಕು ಅಂತ ಅದೆಷ್ಟೋ ಹೀರೋಯಿನ್ಸ್ ಮನೆದೇವರಿಗೆ ಹರಕೆ ಬೇರೆ ಕಟ್ಟಿಕೊಂಡಿದ್ದಾರೆ. ಅಣ್ಣಾಬಾಂಡ್ಗೆ ಜೊತೆಯಾಗ್ಬೇಕು ಮುತ್ತಿನ ತೇರಲ್ಲಿ ದೊಡ್ಮನೆ ಹುಡುಗನ ಜೊತೆ ಮೆರವಣಿಗೆ ಹೊರಡಬೇಕು ಅಂತ ಕನಸು ಕಟ್ಟಿಕೊಂಡಿದ್ದಾರೆ. ಇಂತಹದ್ದೊಂದು ಕನಸಿನ ಸಾಕಾರಕ್ಕಾಗಿ ಜಿಮ್-ವರ್ಕೌಟ್-ಡಯಟ್ ಅಂತ ಫಿಗರ್ನ ಮೆಂಟೇನ್ ಮಾಡೋದಲ್ಲದೇ ಆಕ್ಟಿಂಗ್ನಲ್ಲಿ ಪರ್ಫೆಕ್ಟ್ ಆಗೋದಕ್ಕೆ ಬೆವರು ಸುರಿಸುತ್ತಿದ್ದಾರೆ. ಅಸಲಿಯತ್ತು ಹೀಗಿರುವಾಗ, ಯುವರತ್ನನ ಹವಾ ಹೃದಯ ಗೆದ್ದಿರುವಾಗ ಸೌತ್ ಸುಂದರಿ ನೋ ಅನ್ನೋದಕ್ಕೆ ಚಾನ್ಸ್ ಇದೆಯಾ ಸದ್ಯಕ್ಕಂತೂ ಗೊತ್ತಿಲ್ಲ.
ಕಳೆದ ಎರಡು ದಿನಗಳಿಂದ ಬಜಾರ್ನಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿರುವ `ಪವರ್’ ಹೀರೋಯಿನ್ ಮ್ಯಾಟರ್ ನಿಮ್ಮೆಲ್ಲರಿಗೂ ಗೊತ್ತಾಗಿರುತ್ತೆ. ಪವರ್ ಕಾಂಬಿನೇಷನ್ ಮತ್ತೆ ಒಂದಾಗುವ ಸುದ್ದಿ ಕೇಳಿ ಅಪ್ಪು ಫ್ಯಾನ್ಸ್ ಮಾತ್ರವಲ್ಲ ಗಾಂಧಿನಗರದ ಮಂದಿ ಕೂಡ ಥ್ರಿಲ್ಲಾಗಿದ್ದಾರೆ. ಪವರ್ ಜೋಡಿಯನ್ನು ಮತ್ತೆ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಆದರೆ, ದ್ವಿತ್ವ ಚಿತ್ರತಂಡ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಸೌತ್ ಸುಂದರಿ ಹೇಳಿದ್ದೇನು ಎಂಬದನ್ನು ಇನ್ನೂ ರಿವೀಲ್ ಮಾಡಿಲ್ಲ.
ಹೌದು, ದ್ವಿತ್ವ ಚಿತ್ರದ ನಾಯಕಿಯ ಬಗ್ಗೆ ಬಜಾರ್ನಲ್ಲಿ ಸಾಕಷ್ಟು ಚರ್ಚೆಗಳಾಗ್ತಿದೆ. ಸೌತ್ ಸುಂದರಿ ತ್ರಿಷಾ ಅಪ್ಪುಗೆ ಜೋಡಿಯಾಗಲಿದ್ದಾರೆ ಎನ್ನುವ ಸುದ್ದಿ ಟೂಪೀಸ್ ಧರಿಸಿಕೊಂಡು
ಸ್ಯಾಂಡಲ್ವುಡ್ ಅಂಗಳದಲ್ಲಿ ಹಲ್ಚಲ್ ಎಬ್ಬಿಸುತ್ತಿದೆ. `ಪವರ್’ ಚಿತ್ರದಲ್ಲಿ ಅಣ್ಣಾಬಾಂಡ್ಗೆ ಜತೆಯಾಗಿ ಕಿಕ್ಕೇರಿಸಿದ್ದ ತ್ರಿಷಾ ಮತ್ತೆ ದ್ವಿತ್ವ ಚಿತ್ರದಲ್ಲಿ ಅಪ್ಪು ಪಕ್ಕದಲ್ಲಿ ನಿಲ್ತಾರೆನ್ನುವ ಸುದ್ದಿ ಹಬ್ಬಿದೆ. ಅಂದ್ಹಾಗೇ, ತ್ರಿಷಾ ಜೊತೆ ಸಿಟ್ಟಿಂಗ್ ಕೂತು ಬೈಟು ಕಾಫಿ ಕುಡಿಯುತ್ತಾ ನಿರ್ದೇಶಕ ಪವನ್ ಕುಮಾರ್ ಕಥೆ ಹೇಳಿದ್ದಾರಂತೆ. ದ್ವಿತ್ವ ಕಥೆ ಕೇಳಿ ಥ್ರಿಲ್ಲಾಗಿರುವ ತ್ರಿಷಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರಂತೆ.
ಹಾಗಾದ್ರೆ ತ್ರಿಷಾ ಏನಂದ್ರು? ಓಕೆ ಅಂದರಂತಾ? ಪವರ್ ಬಗಲಲ್ಲಿ ನಿಲ್ತಾರಂತಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ ಯಾಕಂದ್ರೆ ಚಿತ್ರತಂಡ ಎಲ್ಲವನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಅಂದ್ಹಾಗೇ, ತ್ರಿಷಾ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ ಈ ಕಾರಣದಿಂದ ತ್ರಿಷಾ ಗ್ರೀನ್ ಸಿಗ್ನಲ್ ಕೊಡೋದಕ್ಕೆ ಹಿಂದೇಟು ಹಾಕ್ತಾರೋ ಅಥವಾ ಪವರ್ಗೋಸ್ಕರ ಜಿಗಿಜಿಗಿದು ಬರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ದೊಡ್ಮನೆ ಹುಡುಗನ ಪಕ್ಕದಲ್ಲಿ ನಿಲ್ಲೋದಕ್ಕೆ ನಾನ್ ಯಾವಾಗ್ಲೂ ರೆಡಿ ಅಂತ ಮಿಲ್ಕಿಬ್ಯೂಟಿ ತಮನ್ನಾ ಬಹಳ ದಿನದ ಹಿಂದೆಯೇ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಹೀಗಾಗಿ, ತ್ರಿಷಾ ನೋ ಅನ್ನೋದಕ್ಕೂ ಮೊದಲು ಕೊಂಚ ಯೋಚನೆ ಮಾಡಿದರೆ ಒಳ್ಳೆಯದು ಎಂಬುದು ಅಪ್ಪು ಫ್ಯಾನ್ಸ್ ಅಭಿಪ್ರಾಯ
ಉಳಿದಂತೆ ದ್ವಿತ್ವ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ಫಸ್ಟ್ ಟೈಮ್ ಪವನ್ಕುಮಾರ್-ಪವರ್ಸ್ಟಾರ್ ಜೊತೆಯಾಗ್ತಿದ್ದಾರೆ. ಪೋಸ್ಟರ್ನಿಂದಲೇ ಸಾಕಷ್ಟು ಕೂತೂಹಲಕ್ಕೆ ಕಾರಣವಾಗಿರುವ ದ್ವಿತ್ವ ಈಗ ಸಿನಿಮಾ ನಾಯಕಿ ವಿಚಾರಕ್ಕೆ ಸಾಕಷ್ಟು ಸುದ್ದಿಮಾಡ್ತಿದೆ. ಪುನೀತ್ ರಾಜ್ಕುಮಾರ್ ಅವರನ್ನು ಹೊರತುಪಡಿಸಿ ಉಳಿದ ತಾರಾಗಣದ ಬಗ್ಗೆ ಪವನ್ ಇನ್ನಷ್ಟೇ ರಿವೀಲ್ ಮಾಡ್ಬೇಕಿದೆ. ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದ್ದು `ದ್ವಿತ್ವ’ ಮೇಲೆ ನಿರೀಕ್ಷೆಗಳು ಗರಿಗೆದರಿವೆ.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ