ರಾಕಿಭಾಯ್ ದರ್ಶನ ಯಾವಾಗ ? ಇದು ಕೆಜಿಎಫ್ ಪಾರ್ಟ್ -2 ಗಾಗಿ ಕಾದು ಕುಳಿತವರ ಮಿಲಿಯನ್ ಡಾಲರ್ ಪ್ರಶ್ನೆ. ಆ ಪ್ರಶ್ನೆಗೆ ಕೆಜಿಎಫ್ ಸಾರಥಿ ಉತ್ತರ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್- 2 ರಿಲೀಸ್ ಯಾವಾಗ ಎನ್ನುವ ಮಹಾನ್ ಕೌತುಕಕ್ಕೆ ಸಣ್ಣ ತೆರೆ ಎಳೆಯೋ ಕೆಲಸ ಮಾಡಿದ್ದಾರೆ.
ಕೆಜಿಎಫ್ ಚಾಪ್ಟರ್- 2 ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯೇ ಕಾದು ಕುಳಿತಿರುವ ಚಿತ್ರ. ರಾಕಿಯ ಅಬ್ಬರ ಆರ್ಭಟದ ಜೊತೆಗೆ ಅಧೀರನೊಟ್ಟಿಗಿನ ಕಾದಾಟವನ್ನು ನೋಡಲಿಕ್ಕೆ, ಚಿನ್ನದ ಸಾಮ್ರಾಜ್ಯದ ವೈಭೋಗವನ್ನು ಕಣ್ತುಂಬಿಕೊಳ್ಳೋದಕ್ಕೆ ಪ್ರೇಕ್ಷಕ ಮಹಾಷಯರು ಕಣ್ಣರಳಿಸಿ ಕಾಯ್ತಿದ್ದಾರೆ. ಅದರಂತೇ, ಜಗತ್ತಿನ ಎಲ್ಲಾ ಕೆಜಿಎಫ್ ಪ್ರೇಕ್ಷಕರಿಗೆ ನರಾಚಿಯ ದರ್ಶನ ಮಾಡಿಸಿ, ಚಿನ್ನದ ಸಾಮ್ರಾಜ್ಯಕ್ಕೆ ಕೊಂಡೊಯ್ಯಲಿಕ್ಕೆ ಸಿನಿಮಾ ಟೀಮ್ ಕೂಡ ಸಿದ್ದತೆ ಮಾಡಿಕೊಂಡಿದೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ರಾಕಿ ಅಖಾಡಕ್ಕೆ ಇಳಿಯೋದು ಗ್ಯಾಂಗ್ ಸ್ಟರ್ ಗಳಿಂದ ಆ ಜಾಗ ತುಂಬಿದಾಗ ಮಾತ್ರ.. ಶೀಘ್ರದಲ್ಲೇ ರಾಕಿ ದರ್ಶನದ ದಿವ್ಯ ದಿನವನ್ನ ಘೋಷಣೆ ಮಾಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ರಾಕಿಭಾಯ್ ಹೇಳಿಕೇಳಿ ಮಾನ್ಸ್ಟರ್. ಗ್ಯಾಂಗ್ ಕಟ್ಟಿಕೊಂಡು ಬರೋದಿಲ್ಲ. ಸಿಂಗಲ್ಲಾಗಿ ಅಖಾಡಕ್ಕಿಳಿಯೋ ಮಾನ್ ಸ್ಟರ್ ನ ಸ್ವಾಗತಿಸೋಕೆ ಗ್ಯಾಂಗ್ ಸ್ಟರ್ ಗಳು ರೆಡಿಯಿರಬೇಕು. ನೀಲ್ ಅವರ ಟ್ವೀಟ್ ನ ಸೂಕ್ಷ್ಮವಾಗಿ ಗಮನಿಸಿದರೆ
ಅರ್ಥ ಆಗುತ್ತೆ. ಗ್ಯಾಂಗ್ ಸ್ಟರ್ಸ್ ಅಂತ ಕರೆದಿರುವುದು ಯಾರಿಗೆ ಅಂತ. ಮಾನ್ ಸ್ಟರ್ ರಾಕಿಭಾಯ್ ಗಾಗಿ ಕಾದಿರುವ ಇಡೀ ಪ್ರೇಕ್ಷಕ ವಲಯಕ್ಕೆ ಪ್ರಶಾಂತ್ ಗ್ಯಾಂಗ್ ಸ್ಟರ್ಸ್ ಕಿರೀಟ ತೊಡಿಸಿದ್ದಾರೆ. ಹೀಗಾಗಿ, ಸಿನಿಮಾ ಹಾಲ್ ಯಾವಾಗ ಗ್ಯಾಂಗ್ ಸ್ಟಾರ್ಸ್ ಗಳಿಂದ ತುಂಬಿ ತುಳುಕುತ್ತೋ ಆಗ ರಾಕಿಭಾಯ್ ದರ್ಶನ ಆಗುತ್ತೆ ಎಂಬ ಸೂಚನೆ ಕೊಟ್ಟಿದ್ದಾರೆ.
ಚಿತ್ರಮಂದಿರ ಹೌಸ್ ಫುಲ್ ಆಗಬೇಕು ಅಂದರೆ ಸರ್ಕಾರ ದೊಡ್ಡ ಮನಸ್ಸು ಮಾಡಬೇಕು. 100 ಅಕ್ಯೂಪೆನ್ಸಿಗೆ ಅನುಮತಿ ಕೊಡಬೇಕು. ಅಷ್ಟಕ್ಕೂ, ಇನ್ನೂ ಚಿತ್ರಮಂದಿರ ಓಪನ್ ಮಾಡಲಿಕ್ಕೆ ಅವಕಾಶ ಸಿಕ್ಕಿಲ್ಲ. ಮೂರನೇ ಅನ್ ಲಾಕ್ ಪ್ರಕ್ರಿಯೆಯಲ್ಲಿ ಥಿಯೇಟರ್ ಆರಂಭಕ್ಕೆ ಅವಕಾಶ ಸಿಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಸಿನಿಮಾಮಂದಿ ಕಾತುರದಿಂದ ಕಾಯ್ತಿದ್ದಾರೆ.
ಒಂದು ವೇಳೆ ಥಿಯೇಟರ್ ಆರಂಭಿಸಲು ಅವಕಾಶ ಕೊಟ್ಟು 100% ಆಸನ ವ್ಯವಸ್ಥೆಗೆ ಅವಕಾಶ ನೀಡಿದರೆ ‘ಕೆಜಿಎಫ್ 2’ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಆ ಬಿಡುಗಡೆ ದಿನಾಂಕವನ್ನು ಪ್ರಶಾಂತ್ ನೀಲ್ ಸದ್ಯದಲ್ಲೇ ಅನೌನ್ಸ್ ಮಾಡಲಿದ್ದಾರೆ. ಅಲ್ಲಿವರೆಗೂ ವೇಯ್ಟ್ ಆಂಡ್ ಸೀ…