ಕನ್ನಡ ಚಿತ್ರರಂಗದಲ್ಲಿ ಹೊಸ ನಾಯಕ ನಟರ ಆಗಮನ ಹೆಚ್ಚಾಗೆ ಇದೆ, ಈ ಸಾಲಿನಲ್ಲಿ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ನಾಯಕ ನಟ ವಿವಾನ್ ಕೆಕೆ ಕೂಡ ಒಬ್ಬರು,
ಇವರು ಮೂಲತಃ ಕೋಲಾರ ಜಿಲ್ಲೆಯವರು.
ತಂದೆ ಉದ್ಯಮಿ. ವಿವಾನ್ ಸಿವಿಲ್ ಇಂಜಿನಿಯರಿಂಗ್ ವ್ಯಾಸಂಗ ಮುಗಿಸಿದ ನಂತರ ಧೈರ್ಯಂ ಸರ್ವತ್ರ ಸಾಧನಂ ಚಿತ್ರದ ನಿರ್ದೇಶಕರಿಗೆ ಪರಿಚಯವಾಗಿ ಅವರ ಗರಡಿಯಲ್ಲೇ, ಕಳೆದ 4 ವರ್ಷದಿಂದ ಅಭಿನಯ, ನೃತ್ಯ, ಸಾಹಸ, ವಿಭಾಗಗಳಲ್ಲಿ ಪರಿಣಿತಿ ಪಡೆದು, ಧೈರ್ಯಂ ಸರ್ವತ್ರ ಸಾಧನಂ ಚಿತ್ರಕ್ಕೆ ನಾಯಕ ನಟನಾಗಿ ಆಯ್ಕೆ ಆಗಿದ್ದರ ಬಗ್ಗೆ ಹೇಳುತ್ತಾರೆ.
ಈ ನಡುವೆ ಸಿನಿಮಾದ ಆ ಪಾತ್ರಕ್ಕಾಗಿ, ಸತತ 5 ತಿಂಗಳು ಶೂಟಿಂಗ್ ಮಾಡುವ ಲೋಕೇಶನಲ್ಲೇ ವಾಸವಿದ್ದು ಅಲ್ಲಿನ, ಹಳ್ಳಿ ಜನರನ್ನು ಅರಿತು ಪಾತ್ರಕ್ಕಾಗಿ ತಯಾರಿಗೆ, ಮೇಕೆ ಮೇಯಿಸುವುದು, ಕೊಟ್ಟಿಗೆಯಲ್ಲಿ ಹಸು ಕಸ ಗುಡಿಸುವುದರಿಂದ ಹಿಡಿದು, ಕಾಡಿನಲ್ಲಿ ಅಭ್ಯಾಸಕ್ಕಾಗಿ ರಾತ್ರಿಯ ಹೊತ್ತು, ನಿರ್ದೇಶಕರ ಜೊತೆ ಕಾಡು ಪ್ರಾಣಿಗಳನ್ನು ನೋಡಲು ಹೋಗುತ್ತಿದ್ದರಂತೆ,
ಹೀಗೆ ತಯಾರಿ ನಡೆಸಿ, ಶೂಟಿಂಗ್ ಮಾಡುವಾಗ, ಅದರಲ್ಲೂ ಫೈಟಿಂಗ್ ಸೀನ್ ಮಾಡುವಾಗ ಅನೇಕ ಪೆಟ್ಟುಗಳಾಗಿ, ಸಾಕಷ್ಟು ಬಾರಿ ವಿಷ ಹಾವುಗಳಿಂದ ಪಾರಾಗಿದ್ದಾಗಿಯೂ ಹೇಳುವ ಅವರು, ಒಟ್ಟಾರೆ ಧೈರ್ಯಂ ಸರ್ವತ್ರ ಸಾಧನಂ ಚಿತ್ರಕ್ಕೆ ಧೈರ್ಯ ಮಾಡಿ ಅಭಿನಯಿಸಿ ಪಾತ್ರಕ್ಕೆ ದುಡಿದಿದ್ದಾಗಿ ನಾಯಕ ವಿವಾನ್ ತಿಳಿಸುತ್ತಾರೆ.
ಇದೆ ತಿಂಗಳು 23ಕ್ಕೆ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗುತ್ತಿದ್ದು, ನಾಡಿನ ಜನತೆ ಚಿತ್ರವನ್ನು ನೋಡಿ ನಮ್ಮ ಬೆನ್ನು ತಟ್ಟಿದರೆ, ಅದೇ ನಮಗೆ ಉತ್ತಮ ಪಲಿತಾಂಶ ಎನ್ನುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ವಿವಾನ್ ಕೆಕೆ ಗಟ್ಟಿಯಾಗಿ ನಿಲ್ಲಲು ಎಲ್ಲಾ ತಯಾರಿ ನಡೆಸುತ್ತಿದ್ದು, ಒಳ್ಳೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.