ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಹಾಗು ಪೃಥ್ವಿ ರಾಜ್ ಸುಕುಮಾರನ್, ಅಮಲಾಪಾಲ್ ಅಭಿನಯದ ಆಡು ಜೀವಿತಂ ಸಿನಿಮಾ ಬಿಡುಗಡೆ ದಿನಾಂಕವನ್ನು ನವೆಂಬರ್ 30 ರಂದು ಚಿತ್ರತಂಡ ಘೋಷಣೆ ಮಾಡಲಿದೆ.
ಬಹು ನಿರೀಕ್ಷೆ ಹುಟ್ಟಿಸಿರು ಈ ಸಿನಿಮಾದ ಪೋಸ್ಟರ್ಸ್ ಈಗಾಗಲೇ ಎಲ್ಲೆಡೆ ಮೆಚ್ಚುಗೆ ಪಡೆದಿವೆ. ಈ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಸಂಗೀತ ಸ್ಪರ್ಶವಿದೆ.
ಅಂದಹಾಗೆ ಈ ಆಡು ಜೀವಿತಂ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ.
ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವತ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.
ನಿರ್ದೇಶಕ ಬ್ಲೆಸ್ಸಿ ಅವರ ಹದಿನೈದು ವರ್ಷದ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಚಿತ್ರದ ಔಟ್ಪುಟ್ ಗಾಗಿ ದುಡಿದಿದೆ. ಈಗ ಚಿತ್ರ ತೆರೆಗೆ ಕಾಣಲು ಸಿದ್ಧವಿದ್ದು ಈ ಚಿತ್ರದ ರಿಲೀಸ್ ಡೇಟ್ ಅನ್ನು ನವೆಂಬರ್ 30ರಂದು ಚಿತ್ರತಂಡ ಪ್ರಕಟಿಸಲಿದೆ.
ಕಥೆ ಇಷ್ಟು…
ಬಹುನಿರೀಕ್ಷಿತ ಮಲಯಾಳಂ ಚಿತ್ರ ಆಡು ಜೀವಿತಂ (ಗೋಟ್ಲೈಫ್) ಬಿಡುಗಡೆಗೆ ಸಜ್ಜಾಗುತ್ತಿದೆ.
ನವೆಂಬರ್ 30 ರ ಸಂಜೆ 4 ಗಂಟೆಗೆ ಬಿಡುಗಡೆ ದಿನ ಘೋಷಣೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.
ಈ ಕುರಿತು ನಟ ಪೃಥ್ವಿರಾಜ್ ನಿರೀಕ್ಷೆಯ ಚಿತ್ರ ಇದಾಗಿದ್ದು, ಬ್ಲೆಸ್ಸಿ ನಿರ್ದೇಶನದ ಆಡುಜೀವಿತಂ 2008 ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು.
ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆಯನ್ನು ಮತ್ತು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುತ್ತಾರೆ.
ಪೃಥ್ವಿರಾಜ್ ನಜೀಬ್ ಪಾತ್ರ ನಿರ್ವಹಿಸಿದ್ದಾರೆ. ಮರುಭೂಮಿಯಲ್ಲಿ ಆಡುಗಳ ಹಿಂಡಿನ ಮಧ್ಯೆ ಪೃಥ್ವಿರಾಜ್ ಇರುವ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲೆಡೆ ಮೆಚ್ಚುಗೆ ಪಡೆದಿದೆ.
ಅಂದಹಾಗೆ, ಚಿತ್ರದ ನಜೀಬ್ ಪಾತ್ರಕ್ಕಾಗಿ ಪೃಥ್ವಿರಾಜ್ ಸಾಕಷ್ಟು ದೇಹವನ್ನು ದಂಡಿಸಿದ್ದಾರೆ. ಅವರು ಸಿನುಮಾಗಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಕಳೆದ ಚಿತ್ರ ಐದು ವರ್ಷಗಳಿಂದ ತಯಾರಾಗುತ್ತಿದೆ ಎಂಬುದು ವಿಶೇಷ.
ನಿರ್ಮಾಣ ಸಂಸ್ಥೆ ಕೂಡ ಸಾಕಷ್ಟು ಸಮಸ್ಯೆಗಳ ನಡುವೆ ಸಿನಿಮಾ ನಿರ್ಮಿಸಿದೆ. ಈ ವರ್ಷದ ಆರಂಭದಲ್ಲಿ, ಚಿತ್ರದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿತ್ತು.
ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತ, ಸುನಿಲ್ ಕೆ.ಎಸ್ ಅವರ ಕ್ಯಾಮೆರಾ ಕೈಚಳಕ, ರೆಸುಲ್ ಪೂಕುಟ್ಟಿ ಅವರ ಸೌಂಡ್ ಡಿಸೈನ್ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನ ಕೆಲಸವಿದೆ.