ಮೂನ್ ವೈಟ್ ಅಂತಾರಾಷ್ಟ್ರೀಯ ಚಿತ್ರೋತ್ಸವ: ಸುಧೀರ್ ಅತ್ತಾವರ್ ಅತ್ಯುತ್ತಮ ನಿರ್ದೇಶಕ; ಮೃತ್ಯೋರ್ಮ ಅತ್ಯುತ್ತಮ ಚಿತ್ರ ಸೇರಿ 4 ಪ್ರಶಸ್ತಿ ಮಡಿಲಿಗೆ

ಮುಂಬೈಯಲ್ಲಿ ಭಜನ್ ಸಾಮ್ರಾಟ್ ಅನೂಪ್ ಜಲೋಟ ಪ್ರಸ್ತುತಿಯ, ಐನಾಕ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಕತ್ವದ” ಮೂನ್ ವೈಟ್” ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಡೆದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಸುಧೀರ್ ಅತ್ತಾವರ್ ನಿರ್ದೇಶನದ “ಮ್ರತ್ಯೋರ್ಮ” ಕನ್ನಡ ಚಿತ್ರಕ್ಕೆ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸೇರಿದಂತೆ 4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

“ಅತ್ಯುತ್ತಮ ಚಿತ್ರ” ನಿರ್ಮಾಪಕ ತ್ರಿವಿಕ್ರಮ ಸಪಲ್ಯ,ಅತ್ಯುತ್ತಮ ನಟಿ” ಸ್ಮಿತ (ನಿವೇದಿತ), ಅತ್ಯುತ್ತಮ ಹಿನ್ನೆಲೆ ಗಾಯಕಿ ಸಾಧನ ಸರ್ಗಂ ಇದೇ ಚಿತ್ರಕ್ಕಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ರಾಕೇಶ್ ಅಡಿಗ ಅತ್ಯುತ್ತಮ ನಟ ನೋಮಿನೇಟ್ ಆಗಿದ್ದರು.


ಇದೇ ವೇಳೆ ಮಹಾರಾಷ್ಟ್ರ ರಾಜ್ಯಪಾಲರಾದ ರಮೇಶ್ ಬಯಾಸ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ನೀಡಿ ಬಾಲಿವುಡ್ ನ ಖ್ಯಾತ ಲಿರಿಸಿಸ್ಟ್ ಸಮೀರ್ ಅವರಿಗೆ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಿದರು. ಈ ಚಿತ್ರ ಒಟ್ಟು 5 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ನಾಮಿನೇಟ್ ಆಗಿತ್ತು. ಪ್ರಪಂಚದಾದ್ಯಂತ ಸುಮಾರು 110 ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದವು.



ಅಮೇರಿಕಾದ ಔಟ್ ಆಫ್ ದ ಸ್ಟೇಟ್- ಎ ಗೋಥಿಕ್ ರೊಮ್ಯಾನ್ಸ್, ,ವುಮನ್ ಇನ್ ದ ಮೇಸ್, ಚಿಲಿ ದೇಶದ “ಅಲ್ಮಾ”, ಸ್ಪೈನ ನ “ಡಿಗ್ನಿ ಡ್ಯಾಡ್”,ಲಿಥುವಾನಿಯಾದ “ಪುರ್ಗ” , ಹಾಂಕಾಂಗ್ ದೇಶದ “ಗ್ರಾಜ್ಯುಯೇಷನ್ ಭಾರತದ ಟಿಟು ಅಂಬಾನಿ, ಓಗೋ ಬಿದೇಶಿನಿ, ಮೊದಲಾದ ಚಿತ್ರಗಳು ಪ್ರಶಸ್ತಿಗಾಗಿ ಸೆಣಸಿದ್ದವು.

ಭಜನ್ ಸಾಮ್ರಾಟ್ ಅನೂಪ್ ಜಲೋಟ ,ಅಂಜನ್ ಶ್ರೀವಾತ್ಸವ್ ಗುಫಿ ಪೈಂಟಲ್, ಅರುಣ್ ಗೋವಿಲ್, ಖ್ಯಾತ ಗಾಯಕಿ ಡಾ ಜಸ್ಪಿಂದರ್ ನರೂಲ ಜ್ಯೂರಿಗಳಾಗಿದ್ದರು.

“ಮ್ರತ್ಯೋರ್ಮ” ಚಿತ್ರ ಈಗಾಗಲೇ ಮ್ಯಾಂಚೆಸ್ಟರ್ ಮತ್ತು ಕೆನ್ಯಾ ದೇಶದ ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆ ಯಾಗಿದೆ.

Related Posts

error: Content is protected !!