ಮಾಸ್ಟರ್ ಆನಂದ್ ನಟನೆಯ ನಾ ಕೋಳಿಕ್ಕೆ ರಂಗ ನವೆಂಬರ್ 10ಕ್ಕೆ ಬಿಡುಗಡೆ

ಕನ್ನಡದಲ್ಲಿ ಪ್ರಾಣಿ ಪ್ರೀತಿಯ ಕಥೆಗಳು ಹೊಸದೇನಲ್ಲ. ಆ ಸಾಲಿಗೆ ಈಗ ಕೋಳಿ ಪ್ರೀತಿಯ ಕಥೆ ಕೂಡ ವಿಶೇಷವಾಗಿದೆ. ಅದು ನಾ ಕೋಳಿಕ್ಕೆ ರಂಗ ಸಿನಿಮಾ ಮೂಲಕ ಅನಾವರಣವಾಗುತ್ತಿದೆ.

ಹೌದು ಮಾಸ್ಟರ್ ಆನಂದ್ ಬಹಳ ದಿನಗಳ ಬಳಿಕ ಹೀರೋ ಆಗಿ ಕಾಣಿಸಿಕೊಂಡಿರುವ ಸಿನಿಮಾ ಇದು. ಅಂದಹಾಗೆ,
ಎಸ್.ಟಿ.ಸೋಮಶೇಖರ್ ನಿರ್ಮಿಸಿರುವ ಈ ಸಿನಿಮಾಗೆ
ಗೊರವಾಲೆ ಮಹೇಶ್ ನಿರ್ದೇಶನವಿದೆ.
ಇದೊದು ಗ್ರಾಮೀಣ ಭಾಗದ ಸೊಗಡಿನ ಕಥೆ ನವೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಮಾಸ್ಟರ್ ಆನಂದ್ ಹಾಗು ರಾಜೇಶ್ವರಿ ಈ ಸಿನಿಮಾದ ನಾಯಕ, ನಾಯಕಿ. ಇಲ್ಲಿ ಹಾಸ್ಯದ ಜೊತೆಗೆ ಸಂಬಂಧಗಳ ಮೌಲ್ಯವನ್ನು ಸಾರಲಾಗಿದೆ.

ಇದು ಕೊರೊನಾ ಸಂಕಷ್ಟಗಳನ್ನು ಎದುರಿಸಿ ನಿಂತಿರುವ ಚಿತ್ರ. ಹಾಗಾಗಿ ಬಿಡುಗಡೆ ಕಾಣುವುದು ತಡವಾಗಿದೆ. ಆದರೂ ಚಿತ್ರ ಗೆಲುವು ಕಾಣುವ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ. ಏಕೆಂದರೆ ಚಿತ್ರ ಎಲ್ಲಿಯೂ ಕೂಡ ಬೋರ್ ಎನಿಸುವುದಿಲ್ಲ ಎಂಬುದು ನಿರ್ಮಾಪಕ ಎಸ್.ಟಿ.ಸೋಮಶೇಖರ್ ಮಾತು.

ನನಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಅತೀವವಾದ ಗೌರವವಿತ್ತು. ಹಾಗಾಗಿ ಅವರ ಬಗ್ಗೆ ಹಠ ತೊಟ್ಟು ಹಾಡು ಮಾಡಿದೆವು. ಕೈಲಾಶ್ ಖೇರ್ ಹಾಡಿರುವ ಆ ಹಾಡು ಅತ್ಯುತ್ತಮ ವಾಗಿ ಮೂಡಿ ಬಂದಿದೆ ಮಾತ್ರವಲ್ಲ; ಈಗಾಗಲೇ ಜನಮನ ಗೆದ್ದಿದೆ ಎಂದರು.

ಇನ್ನು ವರನಟ ಡಾ.ರಾಜ್ ಕುಮಾರ್ ಅವರ ಮೇಲೆ ಅಭಿಮಾನ ಹಾಗಾಗಿ ಪುನೀತ್ ಸರ್ ಅವರಿಂದ ಒಂದು ಹಾಡು ಹಾಡಿಸಬೇಕೆಂದು ಮಾಡಿದ ಪ್ರಯತ್ನ ಕೂಡ ಯಶಸ್ಸು ಕಂಡಿತು. ದೇವರ ಮಗ ಅವರು ಮಾಸ್ಟರ್ ಆನಂದ್ ಅವರಿಗೆ ನೀವು ಹಾಡಬೇಕು ಎಂದ ತಕ್ಷಣವೇ ಒಪ್ಪಿ ಹಾಡಿದರು. ಅದು ನನ್ನ ಪುಣ್ಯ ಎಂದರು ನಿರ್ಮಾಪಕ ಸೋಮಶೇಖರ್.

ಚಿತ್ರವನ್ನು ಕಷ್ಟಪಟ್ಟು ಮಾಡಿದ್ದೇವೆ. ಈಗ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಬರಬೇಕಾಗಿದೆ. ಈಗ ಅದನ್ನು ಎದುರು ನೋಡುತ್ತಿದ್ದೇವೆ ಎಂದರು ನಿರ್ದೇಶಕ ಗೊರವಾಲೆ ಮಹೇಶ್.

ಮಾಸ್ಟರ್ ಆನಂದ್, ಇದು ತಮಗೆ ದಕ್ಕಿದ ಅಪೂರ್ವ ಅವಕಾಶವಾಗಿದೆ ಎಂದರು.

ಈ ಚಿತ್ರ ಮಾಡಿದ್ದು ಆಕಸ್ಮಿಕ. ಕೊರೊನಾ ಸಮಯದಲ್ಲಿ ಆರಂಭವಾದ ಸಿನಿಮಾ ಈಗ ಬಿಡುಗಡೆ ಕಾಣುತ್ತಿದೆ. ನಿರ್ಮಾಪಕರು ಸೇರಿದಂತೆ ತಂಡದ ಎಲ್ಲರೂ ಶ್ರಮಪಟ್ಟಿದ್ದಾರೆ. ನನ್ನ ಜೊತೆ ಕಾಮಿಡಿ ಕಿಲಾಡಿ ತಂಡವು ಪರಿಶ್ರಮ ಪಟ್ಟಿದೆ. ಹಾಗಾಗಿ ನಾನು ಎಲ್ಲರಿಗೂ ಕೃತಜ್ಞತೆ ಹೇಳುವೆ ಎಂದರು ಆನಂದ್.

ಹಿರಿಯ ನಟಿ ಭವ್ಯ ತಾಯಿಯಾಗಿ ಪಾತ್ರವನ್ನು ಕಾಣಿಸಿಕೊಂಡಿದ್ದಾರೆ. ಅವರು ಚಿತ್ರತಂಡದ ಜೊತೆಗಿನ ಅನುಭವಗಳನ್ನು ಹೇಳಿಕೊಂಡರು.

ಈ ಚಿತ್ರ ನನ್ನ ವೃತ್ತಿ ಬದುಕಿನ ಮೊದಲ ಚಿತ್ರವಾಗಿರುವುದು ನನ್ನ ಪುಣ್ಯ ಎಂದರು ಸಂಗೀತ ನಿರ್ದೇಶಕ ರಾಜು ಎಮ್ಮಿಗನೂರು.

ನಿರ್ಮಾಪಕ ಸೋಮಶೇಖರ್ ಅವರ ಪುತ್ರಿ ರಾಜೇಶ್ವರಿ ಸಿನಿಮಾ ಕುರಿತು ಮಾತನಾಡಿದರು.

Related Posts

error: Content is protected !!