ಕೊರಗಜ್ಜ ಶೂಟಿಂಗ್ ಸೆಟ್ ದಾಂಧಲೆ ಪ್ರಕರಣ: ದೈವ ನರ್ತಕರೆನ್ನುವರನ್ನು ಬಂಧಿಸದಿರಲು ನಿರ್ದೇಶಕ ಸುಧೀರ್ ಅತ್ತಾವರ ಮನವಿ

ಕಳಸದಲ್ಲಿ “ಕೊರಗಜ್ಜ” ಸಿನಿಮಾದ ಹಾಡಿನ ಸನ್ನಿವೇಷದ ಚಿತ್ರೀಕರಣದ ವೇಳೆ ಧಾಂದಲೆ ನಡೆಸಿದ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳನ್ನು ಬಂಧಿಸಿ ಕಳಸದ ಪೊಲೀಸ್ ಸ್ಟೇಷನ್ನಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.

ಕೇಸು ದಾಖಲಿಸುವ ಪ್ರಕ್ರಿಯೆ ವೇಳೆ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ ಸುಮಾರು 9.30ಕ್ಕೆ ಪೋನ್ ಮಾಡಿ ಆರೋಪಿಗಳನ್ನು ವಿಚಾರಣ ಖೈದಿಗಳಾಗಿಸಲು ಇ ಮೇಲ್ ನಲ್ಲಿ ದೂರು ನೀಡಲು ತಿಳಿಸಿದ್ದರು.

ಇದಕ್ಕೆ ಉತ್ತರವಾಗಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ದೈವ ನರ್ತಕರನ್ನು ಬಂಧಿಸದೆ ಅವರಿಗೆ ಬುದ್ದಿ ಹೇಳಿ ಬಿಟ್ಟು ಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದಾರೆ.

ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂ ಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವ “ಕತ್ತಲೆ” ಎನ್ನುವ ವ್ಯಕ್ತಿಯಾರು ಎನ್ನುವುದನ್ನು ಪತ್ತೆ ಹಚ್ಚಲು ಚಿತ್ರದ ನಿರ್ದೇಶಕರು ಮನವಿ ಮಾಡಿದ್ದಾರೆ.

Related Posts

error: Content is protected !!