ಗನ್ಸ್ ಅಂಡ್‌ ರೋಸಸ್ ಸಿನಿಮಾಗೆ ವಿಜಯ್ ಪ್ರಕಾಶ್ ಹಾಡು

ಗಾಯಕ ವಿಜಯ್ ಪ್ರಕಾಶ್, “ಗನ್ಸ್ ಅಂಡ್ ರೋಸಸ್” ಚಿತ್ರದ ಹಾಡೊಂದನ್ನು ‌ಹಾಡಿದ್ದಾರೆ. ಶರಣ್ ಕುಮಾರ್ ಅವರು ಬರೆದಿರುವ “108 ಗೆ ಫೋನ್ ಮಾಡೋ ಶಿಷ್ಯ. ಸಾವು ಬದುಕಿನ ಮಧ್ಯೆ ಹೋರಾಡೋ ವಿಷ್ಯ” ಎಂಬ ಹಾಡನ್ನು ವಿಜಯ್ ಪ್ರಕಾಶ್ ಅವರು ಹಾಡಿದ್ದು, ಇತ್ತೀಚೆಗೆ ಹೊಸಕೆರೆಹಳ್ಳಿಯ ದ್ವಾರ ಸ್ಟುಡಿಯೋದಲ್ಲಿ ಧ್ವನಿಮುದ್ರವಾಯಿತು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

ರಾಜಕೀಯದಲ್ಲಿ ಸಕ್ರಿಯರಾಗಿರುವ ಉದ್ಯಮಿ ಹೆಚ್ ಆರ್ ನಟರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಹೆಚ್ ಎಸ್ ಶ್ರೀನಿವಾಸ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಶರತ್ ಎಸ್ ಅವರದು. ಶಶಿಕುಮಾರ್ ಸಂಗೀತ ನಿರ್ದೇಶನ, ಆರ್ ಜನಾರ್ದನ್ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಕಥೆಗಾರರಾದ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ಯಶ್ಚಿಕ ನಿಷ್ಕಲ. ಶೋಭ್ ರಾಜ್, ಅವಿನಾಶ್, ಅಶ್ವಥ್ ನೀನಾಸಂ, ಹರೀಶ್, ಜೀವನ್ ರಿಚಿ, ಅರುಣಾ ಬಾಲರಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ‌.

Related Posts

error: Content is protected !!