ಕನ್ನಡದ ಸಮುದ್ರಂ ಸಿನಿಮಾ ನಿರ್ಮಾಪಕರು ಛಾಯಾಗ್ರಾಹಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೌದು, ಚನ್ನಮ್ಮನ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ, ತಮ್ಮ ನಿರ್ಮಾಣದ ‘ಸಮುದ್ರಂ’ ಚಿತ್ರದ ಚಿತ್ರೀಕರಣ ಮಾಡಿರುವ ಹಾರ್ಡ್ ಡಿಸ್ಕ್ ಕೊಡದೆ ಮತ್ತು ಹಾಡ್ಸ್ ಡಿಸ್ಕ್ ಕೊಡುವಂತೆ ಕೇಳಿದರೆ ಛಾಯಾಗ್ರಾಹಕ ರಿಶಿಕೇಷ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕಿಬ ನ ರಾಜಲಕ್ಷ್ಮಿ ದೂರು ನೀಡಿದ್ದಾರೆ.
ಈ ಪ್ರಕರಣ ಕುರಿತಂತೆ ಸಿನಿಮಾ ನಾಯಕಿ ಅನಿತಾಭಟ್ ಸ್ಪಷ್ಟನೆ ನೀಡಿದ್ದಾರೆ.
‘ಆರಂಭದಲ್ಲಿ ನಾವೆಲ್ಲ ಸೇರಿ ಈ ಸಿನಿಮಾ ಶುರು ಮಾಡಿದ್ದೆವು. ಮೊದಲು ನಿರ್ಮಾಣಕ್ಕೆ ಕೈ ಹಾಕಿದ್ದೆವು. ನಂತರ ಸ್ವಲ್ಪ ಹಣದ ಸಮಸ್ಯೆ ಎದುರಾಯ್ತು. ಹಾಗಾಗಿ ನಿರ್ದೇಶಕ ರಾಘವ ಮಹರ್ಷಿ ಅವರು ರಾಜಲಕ್ಷ್ಮಿ ಎಂಬುವರನ್ನು ಪರಿಚಯಿಸಿದರು. ಆಗ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಆದರೆ, ರಾಜಲಕ್ಷ್ಮಿ ನಾನೇ ನಿರ್ಮಾಣ ಮಾಡುತ್ತೇನೆ ಎಂದರು. ಅದಕ್ಕೂ ನಾವು ಒಪ್ಪಿ, ಹಾಗಾದರೆ ನಾವು ಈವರೆಗೆ ಶೂಟಿಂಗ್ ಗೆ ಮಾಡಿರುವಶ ಖರ್ಚನ್ನು ಕೊಡಿ ಅಂದಾಗ ಅವರು ಈವರೆಗೂ ಹಣ ಹಿಂದಿರುಗಿಸಿಲ್ಲ.
ಸಿನಿಮಾದಲ್ಲಿ ಕೆಲಸ ಮಾಡಿದ ‘ಟೆಕ್ನಿಷನ್ ಗೆ ಕೊಡಬೇಕಾದ ಹಣ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ. ಕ್ಯಾಮೆರಾಮೆನ್ ರಿಶಿಕೇಷ್ ಅವರಿಗೂ ದುಡ್ಡು ಕೊಡಬೇಕು. ಹಾಗಾಗಿ ಇಬ್ಬರ ಮಧ್ಯೆ ಸ್ವಲ್ಪ ಮನಸ್ತಾಪವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ತೊಂದರೆ ಮಾಡಿದ್ದಾರೆ. ಈ ವಿಚಾರದಲ್ಲಿ ಕ್ಯಾಮೆರಾಮೆನ್ ಅವರದು ತೊಂದರೆಯಿಲ್ಲ.
ನಿರ್ಮಾಪಕಿ ರಾಜಲಕ್ಷ್ಮಿ ಅವರ ವಿರುದ್ಧ ನಾವೂ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡಿದ್ದೆವು. ಸಿನಿಮಾ ರಿಲೀಸ್ ಆದ ನಂತರ ಹಣ ಕೊಡುವುದಾಗಿ ಅವರು ಹೇಳಿದರು. ಆದರೆ, ಈಗ ನೋಡಿದರೆ ಹೀಗೆ ದೂರು ನೀಡಿದ್ದಾರೆ. ಇದು ಎಷ್ಟು ಸರಿ? ಎಂದಿದ್ದಾರೆ ಅನಿತಾ ಭಟ್.
ಸಿನಿಮಾ ನಿರ್ದೇಶಕರನ್ನು ಬಿಟ್ಟು, ಸಿನಿಮಾಟೋಗ್ರಾಫರ್ ಹೇಗೆ ಹಾರ್ಡ್ ಡಿಸ್ಕ್ ಇಟ್ಟುಕೊಳ್ಳಲು ಆಗುತ್ತೆ ? ಹಣಕಾಸಿನ ವಿಷಯದಲ್ಲಿ ಮನಸ್ತಾಪ ಆಗಿದೆ. ನಾನ ಇಲ್ಲಿ ನಟಿಸಿದ್ದೇನೆ. ನಿರ್ಮಾಪಕಿಯೂ ಆಗಿದ್ದೇನೆ. ಆ ಸಿನಿಮಾದ ಬಿಡುಗಡೆಗೆ ಬೇಕಾದ ಎಲ್ಲ ಸಹಾಯವನ್ನು ಈಗಲೂ ನಾನು ಮಾಡಲು ಸಿದ್ದಳಿದ್ದೇನೆ. ಆದರೆ, ತಂಡದ ಮಧ್ಯೆ ಹೀಗೆಲ್ಲ ಒಡಕು ತರುವುದು ಎಷ್ಟು ಸರಿ ಎಂಬುದು ಅನಿತಾ ಭಟ್ ಮಾತು.