ಸ್ಟಾರ್ ಡೈರೆಕ್ಟರ್- ಸ್ಟಾರ್ ನಟ- ಸ್ಟಾರ್ ರೈಟರ್! ಇದು ಆರ್.ಚಂದ್ರು ಸಿನಿಮಾ! ಸುದೀಪ್ ಹೀರೋ: ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್

ಮಗಧೀರ, ಬಾಹುಬಲಿ, ಆರ್ ಆರ್ ಆರ್ ದಂತಹ ಹಿಟ್ ಚಿತ್ರಗಳ ಕಥೆಗಾರ ವಿ .ವಿಜಯೇಂದ್ರ ಪ್ರಸಾದ್ ಅವರು ಕನ್ನಡದ ಪ್ರತಿಷ್ಠಿತ ಆರ್ ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದು, ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದಾರೆ. ಆರ್. ಚಂದ್ರು ಆಕ್ಷನ್ ಕಟ್ ಹೇಳಲಿದ್ದಾರೆ

ಆರ್. ಚಂದ್ರು ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ಆರ್.ಚಂದ್ರು ಸದಾ ಒಂದಿಲ್ಲೊಂದು ಸಾಹಸಕ್ಕೆ‌ ಕೈ ಹಾಕುತ್ತಲೇ ಇರುತ್ತಾರೆ. ಅಂದರೆ, ನಿರ್ದೇಶನದ ಜೊತೆ ನಿರ್ಮಾಣದಲ್ಲೂ ಸೈ ಎನಿಸಿಕೊಂಡವರು. ಮೊದಲ ಬಾಲ್ ನಲ್ಲೇ ಸಿಕ್ಸರ್ ಬಾರಿಸಿದಂತೆ ಮೊದಲ ನಿರ್ದೇಶನದ ಸಿನಿಮಾದಲ್ಲೇ ಭರ್ಜರಿ ಗೆಲುವು ಕಂಡವರು. ಅಷ್ಟೇ ಅಲ್ಲ, ಮೊದಲ ನಿರ್ಮಾಣದ ಸಿನಿಮಾ ಮೂಲಕವೂ ಯಶಸ್ಸು ಕಂಡಿದ್ದು ಎಲ್ಲರಿಗೂ ಗೊತ್ತು.

ತಮ್ಮ ಕನಸಿನ ಕಬ್ಜ ಸಿನಿಮಾ ಮೂಲಕ ಸುದ್ದಿಯಾದವರು. ಮೂವರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತೋರಿಸುವ ಮೂಲಕ ಸುದ್ದಿಯಾದವರು.. ಈಗ ಮತ್ತೊಂದು ಹೊಸ ಸುದ್ದಿ ಮೂಲಕ ಸದ್ದು ಮಾಡುತ್ತಿದ್ದಾರೆ.

ಹೌದು, ಆರ್.ಚಂದ್ರು ಕಬ್ಜ ಸಿನಿಮಾದಲ್ಲಿ ಉಪೇಂದ್ರ, ಶಿವರಾಜ್ ಕುಮಾರ್ ಜೊತೆ ಸುದೀಪ್ ಅವರನ್ನು ನಿರ್ದೇಶಿಸಿದ್ದರು. ಈಗ ಸುದೀಪ್ ಅವರಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಸೆಪ್ಟೆಂಬರ್ 2 ಸುದೀಪ್ ಅವರ ಹುಟ್ಟು ಹಬ್ಬ. ಹಾಗಾಗಿ ಶುಕ್ರವಾರ ಮಧ್ಯರಾತ್ರಿ ಸುದೀಪ್ ಅವರ ಹೊಸ ಚಿತ್ರ ಅನೌನ್ಸ್ ಮಾಡಲು ಆರ್.ಚಂದ್ರು ನಿರ್ಧರಿಸಿದ್ದಾರೆ.

ಮೂವರು ದಿಗ್ಗಜರ ಚಿತ್ರ!

ಈ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಇದೆ. ಈ ಮೂವರು ದಿಗ್ಗಜರು ಒಂದಾಗಿ ಮಾಡುತ್ತಿರುವ ಈ ಚಿತ್ರಕ್ಕೆ ಇಡೀ ಭಾರತವೇ ಕಾತುರದಿಂದ ಎದುರು ನೋಡುತ್ತಿದ್ದು, ಈ ವರ್ಷದ ಮೆಗಾ ಹಿಟ್ ಚಿತ್ರವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆರ್ ಸಿ ಸ್ಟುಡಿಯೋಸ್ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, 5 ದೊಡ್ಡ ದೊಡ್ಡ ಚಿತ್ರಗಳಿಗೆ ಈ ವರ್ಷ ಚಾಲನೆ ದೊರೆಯಲಿದೆ. ಆರ್. ಚಂದ್ರು ಅವರು ಏನೇ ಮಾಡಿದರು ವಿಶೇಷವಾಗಿರಲಿದ್ದು ಈ ಚಿತ್ರವೂ ಕೂಡ ಹಲವು ವಿಶೇಷತೆಗಳಿಂದ ಕೂಡಿರಲಿದೆ.

ಆರ್ ಸಿ ಸ್ಟುಡಿಯೋಸ್ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಿಚ್ಚನ ಹುಟ್ಟು ಹಬ್ಬವಾದ ಸೆಪ್ಟೆಂಬರ್ 2 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ.

ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಸೂಪರ್ ವೈಸಿಂಗ್, ಕಿಚ್ಚ ಸುದೀಪ್ ಅವರ ನಟನೆ ಮತ್ತು ಆರ್ ಚಂದ್ರು ಅವರ ನಿರ್ದೇಶನ ಇದಡ ಅಂದಮೇಲೆ ನಿರೀಕ್ಷೆ ಗ್ಯಾರಂಟಿ.

ವಿಜಯೇಂದ್ರ ಪ್ರಸಾದ್ ಅವರು 25ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದು, ಎಲ್ಲಾ ಚಿತ್ರಗಳು ಕೂಡ ಕಮರ್ಷಿಯಲ್ ಸಕ್ಸಸ್ ಕಂಡಿವೆ. ಆಂಧ್ರದ ಪ್ರತಿಷ್ಠಿತ ನಂದಿ ಮತ್ತು ಫಿಲಂ ಫೇರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಆರ್ ಸಿ ಸ್ಟುಡಿಯೋಸ್ ಸಂಸ್ಥೆಯು ಬಹುಕೋಟಿ ವೆಚ್ಚದಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮುರಿದು ಗ್ಲೋಬಲ್ ಮೂವಿ ಕಾನ್ಸೆಪ್ಟ್ ನೊಂದಿಗೆ ಇಂಡಿಯನ್ ಹ್ಯೂಜ್ ಬಜೆಟ್ ಚಿತ್ರವಾಗಲಿದೆ.

ಈ ಮೂಲಕ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ಕೂಡ ಗ್ಲೋಬಲ್ ಸಂಸ್ಥೆಯಾಗಿ ಯುವ, ಪ್ರತಿಭಾವಂತ ಮತ್ತು ಉದಯೋನ್ಮುಖ ಅವಕಾಶ ಕಲ್ಪಿಸಲಾಗುತ್ತಿದೆ.

ಕಿಚ್ಚನ ಹುಟ್ಟುಹಬ್ಬಕ್ಕೆ ಆರ್ ಸಿ ಸ್ಟುಡಿಯೋಸ್ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪಕ್ಕಾ ಆಗಿದೆ.

Related Posts

error: Content is protected !!