ಈ ಸಿನಿಮಾ ದಂತಕಥೆಯಾಗಲಿ! ಮೋಷನ್ ಪೋಸ್ಟರ್ ರಿಲೀಸ್ ಮಾಡಿದ ಕ್ರೇಜಿ ಸ್ಟಾರ್


ಕನ್ನಡದಲ್ಲಿ ಈಗಾಗಲೇ ಅನೇಕ ಸದಭಿರುಚಿಯ ಸಿನಿಮಾಗಳು ಬಂದಿವೆ. ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರ್ ಇರುವ ಸಿನಿಮಾಗಳೂ ಸುದ್ದಿಯಾಗಿವೆ. ಈಗ ಕನ್ನಡ ಸಿನಿಮಾರಂಗದಲ್ಲಿ ಮತ್ತೊಂದು ‘ದಂತಕಥೆ’ ಶುರುವಾಗಲಿದೆ

ಹೌದು, ದಂತಕಥೆ ಸಿನಿಮಾ ಮೋಷನ್ ಪೋಸ್ಟರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅನಾವರಣಗೊಳಿಸುವುದರ ಜೊತೆಗೆ ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.

ಅಂದಹಾಗೆ, ದಂತಕಥೆ ಅಂದರೆ, ಅದೊಂದು, ಜಾನಪದ ಸಾಹಿತ್ಯದ ಪ್ರಾಕಾರ. ಇತಿಹಾಸದಲ್ಲಿ ನಡೆದ ಘಟನೆಯನ್ನು , ನಂಬಲಸಾಧ್ಯವಾದ ವಿಷಯ ಒಳಗೊಂಡಿರುವುದಕ್ಕೆ ದಂತಕಥೆ ಎನ್ನುತ್ತಾರೆ. ತಾರದ ಸಿನಿಮಾ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ದಂತಕಥೆ ಹುಟ್ಟಿಕೊಳ್ಳಲಿದೆ ಎಂಬುದು ವಿಶೇಷ.

ಈ ದಂತಕಥೆಗೆ ನಟ ರಘುಮುಖರ್ಜಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಸಿನಿಮಾದ ಮೋಷನ್ ಪೋಸ್ಟರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಿಡುಗಡೆ ಮಾಡಿದ್ದಾರೆ.

ಸಿನಿಮಾದಲ್ಲಿ ಯಶ ಶಿವಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿರುವುದ್ದಾರೆ.

ವಚನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಲ್ಮಿಡಿ ಪ್ರೊಡಕ್ಷನ್ ಹಾಗೂ ಜನರತ್ನ ಪ್ರೊಡಕ್ಷನ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ.

ಮೋಷನ್ ಪೋಸ್ಟರ್ ನ ಕೊನೆಯಲ್ಲಿ ” ಇನ್ವೆಸ್ಟಿಗೇಷನ್ ಶುರು ” ಎನ್ನುವ ಲೈನ್ ಸದ್ಯ ಕುತೂಹಲ ಮೂಡಿಸಿದೆ.
ಆದಷ್ಟು ಬೇಗ ದಂತಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ತಯಾರಿ ನಡೆಸಿದೆ.

Related Posts

error: Content is protected !!