ತಾರಿಣಿ ಎಂಬ ಗರ್ಭಿಣಿಯ ಕಥೆ: ಮಮತಾ ರಾವತ್ ಹೈಲೆಟ್

ಇತ್ತೀಚಿಗೆ ಚಿತ್ರೀಕರಣ ಮುಗಿಸಿಕೊಂಡ ತಾರಿಣಿ ಚಿತ್ರ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. “ಶ್ರೀ ಗಜನಿ ಪ್ರೊಡಕ್ಷನ್ಸ್‌” ಲಾಂಛನದಲ್ಲಿ ಮೂಡಿಬಂದಿರುವ ಚಿತ್ರಕ್ಕೆ ಡಾ.ಸುರೇಶ್ ಕೋಟ್ಯಾನ್ ಚಿತ್ರಾಪು ರವರು ಬಂಡವಾಳ ಹೂಡಿದ್ದಾರೆ. ಸಿದ್ದು ಪೂರ್ಣಚಂದ್ರ ರವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಮಮತಾ ರಾವತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರು ಈ ಕಥೆಗಾಗಿಯೇ ಮಾನಸಿಕ ಪೂರ್ವತಯಾರಿ ಮಾಡಿಕೊಂಡು ಉತ್ತಮವಾಗಿ ನಟಿಸಿದ್ದಾರೆ. ಇದೊಂದು “ಗರ್ಭಿಣಿ” ಹೆಂಗಸಿನ ಕಥೆಯಾಧಾರಿತ ಚಿತ್ರವಾಗಿರುವುದರಿಂದ ಈ ಚಿತ್ರದಲ್ಲಿ “ಮಮತಾ ರಾಹುತ್” ರವರು ನಿಜ ಜೀವನದಲ್ಲು ಸ್ವತಃ ಗರ್ಭಿಣಿಯಾಗಿಯೇ ಮನೋಜ್ಞವಾಗಿ ನಟಿಸಿದ್ದಾರೆಂದು ಚಿತ್ರದ ನಿರ್ದೇಶಕರು ಹೇಳಿದ್ದಾರೆ. ಅವರದೇ ಮಗುವಿನ ದೃಶ್ಯವನ್ನು ಹುಟ್ಟಿದ ಕೂಡಲೇ ಸೆರೆಹಿಡಿಯಲಾಗಿದೆಯಂತೆ.

ಒಟ್ಟಾರೆ ನೈಜವಾಗಿ ಸಹಜವಾಗಿ ಎಲ್ಲಾ ಕಲಾವಿದರೂ ಕೂಡ ಅಭಿನಯಿಸಿದ್ದಾರೆ. ಉಳಿದಂತೆ ರೋಹಿತ್, ಭವಾನಿ ಪ್ರಕಾಶ್, ವಿಜಯ ಲಕ್ಷ್ಮಿ, ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು, ಸುಧಾ ಪ್ರಸನ್ನ, ಪ್ರಮಿಳಾ ಸುಬ್ರಹ್ಮಣ್ಯಂ, ಮಟಿಲ್ಡಾ ಡಿಸೋಜಾ, ದೀಪಿಕಾ ಗೌಡ, ತೇಜಸ್ವಿನಿ, ಶ್ವೇತಾ, ಮಂಜು, ಇನ್ನೂ ಮುಂತಾದ ನುರಿತ ಕಲಾವಿದರು ಅಭಿನಯಿಸಿದ್ದಾರೆ.

ನಾಗರತ್ನ ಕೆ.ಹೆಚ್ ವಸ್ತ್ರ ವಿನ್ಯಾಸ, ಅನಂತ್ ಆರ್ಯನ್ ಸಂಗೀತ, ದೀಪಕ್ ಸಿ ಎಸ್ ಸಂಕಲನ,
ರಾಜು ಹೆಮ್ಮಿಗೇಪುರ ಛಾಯಾಗ್ರಹಣ, ಬಸವರಾಜ್ ಆಚಾರ್ ಕೆ ಆರ್ ಕಲೆ, ಕಲರಿಂಗ್ ನಿಖಿಲ್ ಕಾರ್ಯಪ್ಪ, ಶ್ರೀ ರಾಮ್ ಶಬ್ದ ವಿನ್ಯಾಸ, ಪ್ರದೀಪ್ ಜಿ ಎಫೆಕ್ಟ್ಸ್, ಮುಂತಾದವರ ತಾಂತ್ರಿಕ ಬಳಗವಿದೆ.

Related Posts

error: Content is protected !!