ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಅವರು ಕೆಲಸ ನಿಮಿತ್ತ ಬ್ಯಾಂಕಾಕ್ ಗೆ ತೆರಳಿದ್ದರು. ನಿನ್ನೆ ಸಂಜೆ 5 ಗಂಟೆಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತೀವ್ರ ಹೃದಯಾಘಾತದಿಂದಾಗಿ
ಇಂದು (ಆ.7) ನಿಧನರಾಗಿದ್ದಾರೆ.
ನಿನ್ನೆ ರಾತ್ರಿಯೇ ವಿಜಯ ರಾಘವೇಂದ್ರ ಅವರು ಬ್ಯಾಂಕಾಕ್ ಗೆ ತೆರಳಿದ್ದರು. ಈಗ ವಿಷಯ ತಿಳಿಯುತ್ತಿದ್ದಂತೆಯೇ ವಿಜರಾಘವೇಂದ್ರ ಅವರ ಕುಟುಂಬ ಕೂಡ ಬ್ಯಾಂಕಾಕ್ ಗೆ ತೆರಳಲಿದೆ.
ಈಗಾಗಲೇ ಬ್ಯಾಂಕಾಕ್ ಗೆ ತೆರಳಲು ಕುಟುಂಬ ರೆಡಿಯಾಗಿದೆ. ಇಂದು ರಾತ್ರಿ ಅಥವಾ ಬೆಳಗ್ಗೆ ಪಾರ್ಥಿವ ಶರೀರವನ್ನು ತರಲಾಗುವುದು.
ಮಲ್ಲೇಶ್ವರಂ ನಲ್ಲಿರುವ ಬಿ.ಕೆ.ಶಿವರಾಮ್ ಅವರ ಮನೆಗೆ ಶ್ರೀ ಮುರಳಿ ತೆರಳಿದ್ದಾರೆ.
ಬ್ಯಾಂಕಾಕ್ ನಲ್ಲಿ ಸ್ಪಂದನಾ ಅವರು ತಮ್ಮ ಸ್ನೇಹಿತೆಯರ ಜೊತೆ ಶಾಪಿಂಗ್ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಸದ್ಯ ಬ್ಯಾಂಕಾಕ್ ನತ್ತ ವಿಜಯರಾಘವೇಂದ್ರ ಅವರ ಕುಟುಂಬ ತೆರಳಲಿದೆ.