ಲಿಖಿತ್ ಶೆಟ್ಟಿ ಹುಟ್ದಬ್ಬಕ್ಕೆ ಫುಲ್ ಮೀಲ್ಸ್ ! ಸ್ಪೆಷಲ್ ಪೋಸ್ಟರ್ ಹೊರ ಬಂತು

ಹಿಂದೆ “ಸಂಕಷ್ಟಕರ ಗಣಪತಿ”, ಪಿ ಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣದ “ಫ್ಯಾಮಿಲಿ ಪ್ಯಾಕ್” ಚಿತ್ರಗಳ ಮೂಲಕ ಜನರಿಗೆ ಹತ್ತಿರವಾಗಿದ್ದ ನಾಯಕನಟ ಲಿಖಿತ್ ಶೆಟ್ಟಿ ‘ಫುಲ್ ಮೀಲ್ಸ್’ ಮೂಲಕ ನಟನೆಯೊಂದಿಗೆ ಪರಿಪೂರ್ಣ ನಿರ್ಮಾಪಕರೂ ಆಗಿದ್ದಾರೆ.

ಖುಷಿ ರವಿ, ತೇಜಸ್ವಿನಿ ಶರ್ಮ ನಾಯಯಕಿರರಾಗಿದ್ದು, ಪ್ರಮುಖ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್,. ಚಂದ್ರ ಕಲಾ ಮೋಹನ್, ರಾಜೇಶ್ ನಟರಂಗ, ರವಿ ಶಂಕರ ಗೌಡ, ಸುಜಯ್ ಶಾಸ್ತ್ರಿ,
ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ ಇದ್ದಾರೆ.


ಎನ್ ವಿನಾಯಕ ನಿರ್ದೇಶನದ ಈ ಚಿತ್ರಕ್ಕೆ, ಮನೋಹರ್ ಜೋಷಿ ಛಾಯಾಗ್ರಹಣವಿದೆ. ಹರೀಶ ರಾಜಣ್ಣ ಸಂಭಾಷಣೆ ಬರೆದಿದ್ದಾರೆ. ದೀಪು ಎಸ್ ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲೆ, ಗುರು ಕಿರಣ್ ಸಂಗೀತ ಫುಲ್ ಮೀಲ್ಸ್ ಚಿತ್ರಕ್ಕಿದೆ.

Related Posts

error: Content is protected !!