ಸೆಪ್ಟೆಂಬರ್ 7 ಕ್ಕೆ ಜವಾನ್ ಆಗಮನ; ಇಂದು ಪ್ರಿವ್ಯೂ ರಿಲೀಸ್: ಇದು ಶಾರುಖ್ ಖಾನ್ ನಿರ್ಮಾಣದ, ಆಟ್ಲಿ ನಿರ್ದೇಶನದ ‌ಸಿನಿಮಾ

ಶಾರುಖ್ ಖಾನ್ ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಶಾರುಖ್ ಅಭಿನಯದ ‘ಜವಾನ್’ ಚಿತ್ರದ ಪ್ರಿವ್ಯೂ ಸೋಮವಾರ (ಜುಲೈ 10)ಇಂದು ಬೆಳಿಗ್ಗೆ 10:30ಕ್ಕೆ ಬಿಡುಗಡೆಯಾಗಲಿದೆ .


ಯಾವಾಗ ‘ಕಿಂಗ್’ ಖಾನ್, ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ಜೊತೆಗೆ ಒಂದು ಚಿತ್ರ ಮಾಡುತ್ತಾರೆ ಎಂಬ ಎರಡು ವರ್ಷಗಳ ಹಿಂದೆ ಸುದ್ದಿಯಾಯಿತೋ, ಆಗಿನಿಂದಲೇ ‘ಜವಾನ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದವು. ಒಬ್ಬರು ದೇಶದ ಸೂಪರ್ಸ್ಟಾರ್ ನಟ. ಇನ್ನೊಬ್ಬರು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರಿಬ್ಬರೂ ಒಂದು ಸಿನಿಮಾಗೆ ಕೈಜೋಡಿಸಿದಾಗ, ಸಹಜವಾಗಿಯೇ ಬೆಟ್ಟದಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಅಭಿಮಾನಿಗಳ ವಲಯದಲ್ಲಿತ್ತು.


ಆದರೆ, ಚಿತ್ರತಂಡದವರು ಒಂದೆರೆಡು ಪೋಸ್ಟರ್ಸ್ ಬಿಡುಗಡೆ ಮಾಡಿದ್ದು ಬಿಟ್ಟರೆ, ಮಿಕ್ಕಂತೆ ಚಿತ್ರದ ಬಗ್ಗೆ ರಹಸ್ಯ ಕಾಪಾಡಿಕೊಂಡಿದ್ದರು. ಈಗ ಚಿತ್ರದ ಬಿಡುಗಡೆ ಹತ್ತಿರ ಬರುತ್ತಿದ್ದಂತೆಯೇ, ಚಿತ್ರದ ಪ್ರಿವ್ಯೂ ಬಿಡುಗಡೆಯಾಗುವುದಕ್ಕೆ ವೇದಿಕೆ ಸಜ್ಜಾಗಿದೆ. ಈ ಪ್ರಿವ್ಯೂನಲ್ಲಿ ಚಿತ್ರದಲ್ಲಿನ ಶಾರುಖ್ ಅವರ ಫಸ್ಟ್ ಲುಕ್ ಹೊರ ಬೀಳಲಿದೆ.
ಬರೀ ಅಭಿಮಾನಿಗಳ ವಲಯದಲ್ಲಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಈ ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಾಗಿದೆ.

‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ

‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲಿಯವರ ನಿರ್ದೇಶನದಲ್ಲಿ ಮೂಡಿಬಂದಿದೆ

Related Posts

error: Content is protected !!