ಜಯಂ ರವಿ ಹೊಸ ಸಿನಿಮಾ ಶುರು: ಜೀನಿ ಚಿತ್ರಕ್ಕೆ ಅದ್ಧೂರಿ ಮುಹೂರ್ತ

ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಈಗ ಪ್ಯಾನ್ ಇಂಡಿಯಾ ಸ್ಟಾರ್..ಇತ್ತೀಚೆಗೆಷ್ಟೇ ಇರೈವನ್ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಅವರ 32ನೇ ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವೆಲ್ಸ್ ಫಿಲಂಸ್ ಇಂಟರ್‌ನ್ಯಾಶನಲ್‌ನಡಿ ಡಾ.ಇಶಾರಿ ಕೆ ಗಣೇಶ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದು, ಚೆನ್ನೈನಲ್ಲಿಂದು ಸೆಟ್ಟೇರಿರುವ ಈ ಸಿನಿಮಾಗೆ ಜೀನಿ ಎಂಬ ಟೈಟಲ್ ಇಡಲಾಗಿದೆ.

ಯುವ ನಿರ್ದೇಶಕ ಅರ್ಜುನನ್ ಜೆ ಆರ್ ನಿರ್ದೇಶನದಲ್ಲಿ ಜಯಂ ರವಿ ನಾಯಕನಾಗಿ ನಟಿಸುತ್ತಿದ್ದು, ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್, ವಾಮಿಕಾ ಗಬ್ಬಿ ಮತ್ತು ದೇವಯಾನಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹೇಶ್ ಮುತ್ತುಸಾಮಿ ಛಾಯಾಗ್ರಹಣ, ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ, ಪ್ರದೀಪ್ ಇ ರಾಘವ್ ಸಂಕಲನ, ಹಾಲಿವುಡ್ ಮತ್ತು ಅಂತರಾಷ್ಟ್ರೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ಸ್ಟಂಟ್ ಕೊರಿಯೋಗ್ರಾಫರ್‌ಗಳಲ್ಲಿ ಒಬ್ಬರಾದ ಯಾನಿಕ್ ಬೆನ್ ಈ ಚಿತ್ರಕ್ಕೆ ಆಕ್ಷನ್ ಸೀಕ್ವೆನ್ಸ್ ಖದರ್ ಚಿತ್ರದಲ್ಲಿರಲಿದೆ.

ಜೀನಿ ವೆಲ್ಸ್ ಫಿಲ್ಮ್ ಇಂಟರ್‌ನ್ಯಾಶನಲ್‌ನ 25 ನೇ ಚಿತ್ರವಾಗಿದ್ದು, ದುಬಾರಿ ಬಜೆಟ್‌ನಲ್ಲಿ ತಯಾರಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿರುವ ಜೀನಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

Related Posts

error: Content is protected !!