ನ್ಯಾನೋ ನಾರಾಯಣಪ್ಪ ಜುಲೈ 7ಕ್ಕೆ ರಿಲೀಸ್: ಇದು ಕೆಜಿಎಫ್ ತಾತನ ಕೊನೆ ಚಿತ್ರ

ಕೆಮಿಸ್ಟ್ರೀ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲೊಂದು ಹೊಸ ಭರವಸೆ ಮೂಡಿಸಿದವರು ನಿರ್ದೇಶಕ ಕುಮಾರ್. ಇವರ ಸಾರಥ್ಯದ ಮಗದೊಂದು ಪ್ರಯತ್ನ ನ್ಯಾನೋ ನಾರಾಯಣಪ್ಪ. ಕೆಜಿಎಫ್ ತಾತಾ ಖ್ಯಾತಿಯ ನಟ ದಿವಂಗತ ಕೃಷ್ಣೋಜಿ ರಾವ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಜುಲೈ 7ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹಾಸ್ಯದ ಜೊತೆಗೆ ಭಾವಾನತ್ಮಕ ಅಂಶವನ್ನು ಹದವಾಗಿ ಬೆರೆಸಿ ಕುಮಾರ್ ನ್ಯಾನೋ ನಾರಾಯಣಪ್ಪ ಕಥೆ ಹೆಣೆದಿದ್ದಾರೆ.

ಮನಿ ಹಂಟರ್’ ಹಾಡು ಸೂಪರ್
ಬಿಡುಗಡೆ ಹೊಸ್ತಿಲಿನಲ್ಲಿರುವ ‘ನ್ಯಾನೋ ನಾರಾಯಣಪ್ಪ’ ಸಿನಿಮಾದ ಮನಿ ಹಂಟರ್ ಹಾಡು ಬಿಡುಗಡೆಯಾಗಿದೆ. ನಿರ್ದೇಶಕ ಕುಮಾರ್ ಸಾಹಿತ್ಯದ ಸಿಂಗಿಂಗ್ ಗೆ ಅಂಕಿತಾ ಕುಂಡು ಧ್ವನಿಯಾಗಿದ್ದು, ಆಕಾಶ್ ಪರ್ವ ಟ್ಯೂನ್ ಹಾಕಿದ್ದಾರೆ. ಹಾಟ್ ಅಂಡ್ ಸ್ಪೈ ನಂಬರ್ ಗೆ ಗಿರಿ ಶಿವಣ್ಣ, ಕಾಕ್ರೋಚ್ ಸುಧಿ ಸೇರಿದಂತೆ ಹಲವರು ಹೆಜ್ಜೆ ಹಾಕಿದ್ದಾರೆ.

ಕೇಸರಿ ಫಿಲ್ಮಂ ಕ್ಯಾಪ್ಚರ್ ಬ್ಯಾನರ್ ನಡಿ ಕುಮಾರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಅನಂತು, ಅಪೂರ್ವಾ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ದೀಪು ಮತ್ತು ಸಿದ್ದಾರ್ಥ್ ನಾಯಕ ಸಂಕಲನ ಚಿತ್ರಕ್ಕಿದೆ. ಕಾಮಿಡಿ, ಕಾಡುವ ಕಥೆ, ಮನೆ ಮಂದಿಯೆಲ್ಲಾ ಕುಳಿತು ಕಣ್ತುಂಬಿಕೊಳ್ಳುವ ನ್ಯಾನೋ ನಾರಾಯಣಪ್ಪ ಜುಲೈ 7ಕ್ಕೆ ಥಿಯೇಟರ್ ಪ್ರವೇಶಿಸಲಿದೆ.

Related Posts

error: Content is protected !!