ಕೆ ಆರ್ ಜಿ ಸ್ಟುಡಿಯೋಸ್ ಮಾಡಿಕೊಂಡ ಕಿರಿಕ್! ಇದು ಕ್ರಿಕೆಟ್ ಗೇಮ್ ಪ್ಲಾನಾ? ಬ್ಯಾಟ್ ಹಿಡಿತಾರೆ ದಾನಿಶ್ ಸೇಠ್

ಕನ್ನಡದಲ್ಲಿ ಕೆ ಆರ್ ಜಿ ಸ್ಟುಡಿಯೋಸ್ ಸಾಕಷ್ಟು ಉತ್ತಮ ಚಿತ್ರಗಳನ್ನು ಕೊಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆ. ಈ ನಿರ್ಮಾಣ ಸಂಸ್ಥೆಯ ಮೂಲಕ ಈಗಾಗಲೇ ಒಂದಷ್ಟು ಯಶಸ್ವಿ ಸಿನಿಮಾಗಳು ಮೂಡಿಬಂದಿವೆ. ಆ ಸಾಲಿಗೆ ಈಗ ಕಿರಿಕ್ et 11 ಸಿನಿಮಾ ಕೂಡ ಸೇರಿದೆ. ಶೀರ್ಷಿಕೆಯೇ ವಿಭಿನ್ನವಾಗಿದೆ. ಕಥೆ ಕೂಡ ವಿಶೇಷವಾಗಿದೆ ಎಂಬುದು ಸಿನಿಮಾ ನಿರ್ಮಾಣ ಸಂಸ್ಥೆಯ ಮಾತು.

ಬಹಳ ದಿನಗಳ ಬಳಿಕ ನಟ ದಾನಿಶ್ ಸೇಠ್ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನವೀನ್ ಶಂಕರ್ ಕೂಡ ಇದ್ದಾರೆ.

ಕಿರಿಕ್ ‘et’ 11 ಚಿತ್ರ ಒಂದು ನಗೆ ಹಬ್ಬವಾಗಿ ತಯಾರಾಗಲಿದೆ. ಒಂದಷ್ಟು ಯುವಕರು ಯಾವುದೇ ರೀತಿಯಲ್ಲೂ ಅದೃಷ್ಟ ದೇವತೆ ಒಲಿಯದೆ ಇದ್ದಾಗ ಇಡೀ ದೇಶ ಅತ್ಯಂತ ಹುಮ್ಮಸ್ಸಿನಿಂದ ಆಡುವ, ನೋಡುವ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ.


ನವೀನ್ ಶಂಕರ್ ಮತ್ತು ದಾನಿಶ್ ಸೇಠ್ ನಟನೆಯ ಈ ಚಿತ್ರವನ್ನು ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದರೆ , ಸುಮನ್ ಕುಮಾರ್ ಅವರು ನಿರ್ದೇಶಿಸಲಿದ್ದಾರೆ.
ಸುಮನ್ ಕುಮಾರ್ ಅವರು ಈ ಹಿಂದೆ ರಘುತಾತ ಚಿತ್ರವನ್ನು ನಿರ್ದೇಶಿಸಿದ್ದು , ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯ ಆಗಿರುವ The Family Man ಮತ್ತು Farzi ಯ ಕಥೆಯನ್ನು ಹೆಣೆದಿದ್ದಾರೆ.


ಈ ಚಿತ್ರಕ್ಕೆ ಸಂಗೀತವನ್ನು ಬಡವ ರಾಸ್ಕಲ್ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರು ನೀಡಲಿದ್ದಾರೆ.
ಈ ಚಿತ್ರವನ್ನು ಕಾರ್ತಿಕ್ , ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ ರಾಜ್ ಅವರು ನಿರ್ಮಿಸಲಿದ್ದಾರೆ.


ಕೆ ಆರ್ ಜಿ ಸ್ಟುಡಿಯೋಸ್ ನ 6 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದು 4 ನೇ ಚಿತ್ರ ನಿರ್ಮಾಣವಾಗಲಿದೆ.
ಕಿರಿಕ್ et 11 ಚಿತ್ರದ ಚಿತ್ರೀಕರಣ ಈ ವರ್ಷ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಶುರುವಾಗಲಿದೆ.

Related Posts

error: Content is protected !!