ಅಮರಾವತಿಯಲ್ಲಿ ಭಯಾನಕ ದೆವ್ವ! ಹೀಗೊಂದು ವಿಚಿತ್ರ ಹಾರರ್ ಕಥೆ

ಭಯಪಡಿಸೋ ಸಿನಿಮಾಗಳು ಕನ್ನಡಕ್ಕೆ ಹೊಸದಲ್ಲ. ಅದರಲ್ಲೂ ಹಾರರ್ ಸಿನಿಮಾಗಳಿಗೆ ಇಲ್ಲಿ ಬರವಿಲ್ಲ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಯಶಸ್ಸು ಕಂಡಿವೆ. ಅಂತಹ ಸಿನಿಮಾಗಳ ಸಾಲಿಗೆ ಸೇರಲು ಈಗ ಅಮರಾವತಿ ಚಿತ್ರ ರೆಡಿಯಾಗುತ್ತಿದೆ.

ಸದ್ಉ ಹಾರರ್ ಸಿನಿಮಾಗಳು ಸಕ್ಸಸ್‌ ಸೂತ್ರದಂತೆ ಬಳಕೆಯಾಗುತ್ತಿವೆ. ಇದರಲ್ಲಿ ಒಂದಷ್ಟು ನವೀನ ಪ್ರಯೋಗಗಳು ಆಗುತ್ತಿದ್ದಾವಾದರೂ ಮತ್ತೆ ಕೆಲ ಚಿತ್ರಗಳು ನಿಜಕ್ಕೂ ಭೂತದರ್ಶನ ಮಾಡಿಸುವಂತಿರುತ್ತವೆ. ಸಧ್ಯ ಕನ್ನಡದಲ್ಲಿ ಈ ವರೆಗೂ ಬಂದ ಎಲ್ಲಾ ಹಾರರ್‌ ಸಿನಿಮಾಗಳನ್ನೂ ಮೀರಿಸುವ ಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಅದು ಅಮರಾವತಿ.


ಬ್ರಾಡ್‌ ವೇ ಪಿಚ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಾಸು ರವರ ಸಾರಥ್ಯವಿದೆ. ಪ್ರಿಯಾ, ರಮ್ಯ ಮತ್ತು ಕೃಷ್ಣ ಪ್ರಮುಖ ಪಾತ್ರದಲ್ಲಿರಿತ್ತಾರೆ. ಮೊದಲಹಂತದ ಚಿತ್ರೀಕರಣ ನಡೆಯುತ್ತಿದೆ.. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

ಇಡೀ ಚಿತ್ರತಂಡ ಚಿತ್ರ ರಸಿಕರನ್ನು ಸೆಳೆಯುವ ಭರವಸೆ ಹೊಂದಿರುತ್ತದೆ. ಈಗ ತಯಾರಾಗುತ್ತಿರುವ ಅಮರಾವತಿ ಚಿತ್ರ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದಲ್ಲಿ ಸಂಚಲನ ಸೃಷ್ಠಿಸುವಂತಹ ಕಥಾವಸ್ತು ಮತ್ತು ಮೇಕಿಂಗ್‌ ನಿಂದ ಕೂಡಿದೆಯಂತೆ.

Related Posts

error: Content is protected !!