ಇದು ಭಾವನೆಗಳ ಮೆಲೋಡಿ: ಸುಂದರ ಪ್ರೀತಿಯ ಪಯಣ ಜೊತೆ ಸ್ಪೆಷಲ್ ಡ್ರಾಮ:

ಪ್ರೈಮ್ ಸ್ಟಾರ್ ಸ್ಟುಡಿಯೋ ಲಾಂಛನದಲ್ಲಿ ಎಂ.ನಂಜುಂಡ ರೆಡ್ಡಿ ಅವರು ನಿರ್ಮಿಸಿರುವ, ಮಂಜು ಕಾರ್ತಿಕ್ ನಿರ್ದೇಶನದ ” ಮೆಲೋಡಿ ಡ್ರಾಮ” ಚಿತ್ರದ ಹಾಡು ಬಿಡುಗಡೆಯಾಗಿದೆ.

“ಮೊಲೋಡಿ ಡ್ರಾಮ” ಮೂಲಕ ಪ್ರೀತಿ ಭಾವನೆಗಳ ಜೊತೆಗೆ ಸಂಬಂಧ ಹೇಗೆ ನಡೆದುಕೊಂಡು ಹೋಗಬೇಕು ಹಾಗೂ ಜೀವನದಲ್ಲಿ ಪ್ರತಿಯೊಬ್ಬರು ತಪ್ಪು ಮಾಡುತ್ತಾರೆ. ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಪ್ರತಿಯೊಬ್ಬರಿಗೂ ಇರುತ್ತದೆ. ನಾವು ತಿದ್ದಿಕೊಳ್ಳಬೇಕು ಎಂಬ ವಿಷಯವನ್ನು ಹೇಳ ಹೊರಟ್ಟಿದ್ದೇವೆ.

“ಮೆಲೋಡಿ ಡ್ರಾಮ” ಚಿತ್ರಕ್ಕೆ “ನಿನ್ನ ಕಥೆ ನನ್ನ ಜೊತೆ” ಎಂಬ ಅಡಿಬರಹವಿದೆ‌. ಚಿತ್ರದಲ್ಲಿ ಏಳು ಸುಮಧುರ ಹಾಡುಗಳಿವೆ. ಸೋನು ನಿಗಮ್ , ಕೈಲಾಶ್ ಖೇರ್, ಪಲಾಕ್ ಮುಚ್ವಲ್, ಮುಂತಾದ ಖ್ಯಾತ ಗಾಯಕರು ಹಾಡಿದ್ದಾರೆ. ಮನು ಡಿ ಬಿ ಹಳ್ಳಿ ಅವರ ಛಾಯಾಗ್ರಹಣ ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. “ದ್ವಿಪಾತ್ರ” ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಸತ್ಯ ಈ ಚಿತ್ರದ ನಾಯಕನಾಗಿ, “ಸೀತಾವಲ್ಲಭ” ಹಾಗೂ “ಸರಸು” ಧಾರಾವಾಹಿ ಮೂಲಕ ಮನೆಮಾತಾಗಿರುವ ಸುಪ್ರೀತ ಸತ್ಯನಾರಾಯಣ ಅವರು ನಾಯಕಿಯಾಗಿ ನಟಿಸಿದ್ದಾರೆ.

ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಾಲು ರಾಜವಾಡಿ, ಲಕ್ಷ್ಮೀ ಸಿದ್ದಯ್ಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಚಿತ್ರವನ್ನು ಸೆನ್ಸಾರ್ ಮಂಡಳಿ ನೋಡಿ ಮೆಚ್ಚುಕೊಂಡಿದ್ದು, ಜೂನ್ ನಲ್ಲಿ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಹದಿನೈದು ವರ್ಷಗಳಿಂದ ವಿವಿಧ ನಿರ್ದೇಶಕರ ಬಳಿ ಕೆಲಸ ಮಾಡಿರುವ ನನ್ನ ನಿರ್ದೇಶನದ ಮೊದಲ ಚಿತ್ರವಿದು ಎಂದು ಮಂಜು ಕಾರ್ತಿಕ್ ತಿಳಿಸಿದರು.

“ದಿಪಾತ್ರ” ನನ್ನ ಮೊದಲ ಚಿತ್ರ. ಇದು ಎರಡನೆಯದು. ಕಾರ್ತಿಕ್ ನನ್ನ ಪಾತ್ರದ ಹೆಸರು. ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ ಎಂದರು ನಾಯಕ ಸತ್ಯ.

ಈ ಹಿಂದೆ ಕೆಲವು ಜನಪ್ರಿಯ ಧಾರಾವಾಹಿ ಹಾಗೂ ಕೆಲವು ಚಿತ್ರಗಳಲ್ಲಿ ನಟಿಸಿದ್ದೇನೆ. “ಮೆಲೋಡಿ ಡ್ರಾಮ” ದಲ್ಲಿ ಹಿತ ಎಂಬುದು ನನ್ನ ಪಾತ್ರದ ಹೆಸರು. ಬ್ಯಾಂಕ್ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿರುತ್ತೇನೆ ಎಂದು ತಮ್ಮ ಪಾತ್ರದ ಬಗ್ಗೆ ನಾಯಕಿ ಸುಪ್ರೀತ ಸತ್ಯನಾರಾಯಣ ತಿಳಿಸಿದರು.

ನನಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹವ್ಯಾಸ. ಮೂವತ್ತೈದು ವರ್ಷಗಳಿಂದ ತಪ್ಪದೆ ವಾರಕ್ಕೊಂದು ಸಿನಿಮಾ ನೊಡಿಕೊಂಡು ಬರುತ್ತಿದ್ದೇನೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಒಳ್ಳೆಯ ಚಿತ್ರ ಮಾಡಿದ ಖುಷಿಯಿದೆ ಎಂದರು ನಿರ್ಮಾಪಕ ನಂಜುಂಡ ರೆಡ್ಡಿ.

ಚಿತ್ರದಲ್ಲಿ ಏಳು ಹಾಡುಗಳಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರ ಪ್ರಸಾದ್, ಧನಂಜಯ್ ರಂಜನ್ ಹಾಡುಗಳನ್ನು ಬರೆದಿದ್ದಾರೆ ಎಂದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಮಾಹಿತಿ ನೀಡಿದರು‌.
ಛಾಯಾಗ್ರಹಕ ಮನು ಡಿ.ಬಿ ಹಳ್ಳಿ, ಸಂಕಲನಕಾರ ಆರ್ ಮಂಜು ಹಾಗೂ ಚಿತ್ರದಲ್ಲಿ ನಟಿಸಿರುವ ಅಶ್ವಿನ್ ಹಾಸನ್, ವೈಭವ್ ನಾಗರಾಜ್, ವಿನೋದ್ ಗೊಬ್ಬರಗಾಲ ಮುಂತಾದವರು “ಮೆಲೋಡಿ ಡ್ರಾಮ” ಬಗ್ಗೆ ಮಾತನಾಡಿದರು.

Related Posts

error: Content is protected !!