ಅನ್ನ ಹಾಕುವ ಕೈಗೆ ಜೈ ಅನ್ನಿ! ಇದು ದಣಿವ ಮನಸ್ಸಿನ ಚಿತ್ರಣ : ಶ್ರೀಮಂತ ಚಿತ್ರ: ಮೇ 19ಕ್ಕೆ ಜನರ ಹತ್ರ

ಈಗ ಎಲ್ಲೆಲ್ಲೂ ಎಲೆಕ್ಷನ್ ಜ್ವರ. ಚುನಾವಣೆ ಕಾವು ಜೋರಾಗಿಯೇ ಇದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಸಿನಿಮಾ ಜಪ ಸುಳ್ಳಲ್ಲ. ಹೌದು, ಎಲೆಕ್ಷನ್ ಸಲುವಗಿ ಕನ್ನಡ‌ ಸಿನಿಮಾಗಳ ಬಿಡುಗಡೆ ಪರ್ವ ಮುಂದೆ ಹೋಗಿತ್ತು. ಈಗ ಚುನಾವಣೆ ಮುಗಿಯೋ ಸಮಯ. ಮೇ 10 ಕ್ಕೆ ಎಲೆಕ್ಷನ್, ಮೇ 13 ಕ್ಕೆ ಕೌಂಟ್. ಇದಾದ ಬಳಿಕ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ.

ಹಾಗೆ ಸಾಲುಗಟ್ಟಿ ನಿಂತಿರುವ ಸಿನಿಮಾಗಳು ಸಾಕಷ್ಟಿವೆ. ಆದರೆ,ಆ ಪೈಕಿ ಕೊಂಚ ಗಮನ ಸೆಳೆದಿರುವ ಮತ್ತು ಕುತೂಹಲ ಕೆರಳಿಸಿರುವ ಸಿನಿಮಾ ‘ಶ್ರೀಮಂತ. ಈ’ ಶೀರ್ಷಿಕೆ ಕೇಳಿದೊಡನೆ ಇದ್ಯಾವುದೋ ಪಕ್ಕಾ‌ ಅದ್ಧೂರಿಯ ಮಾಸ್ ಸಿನಿಮಾ ಎನಿಸಬಹುದು. ಆದರೆ, ಇದು ಅದ್ಧೂರಿ ಸಿನಿಮಾ‌ವಂತೂ ಹೌದು, ಅದಕ್ಕೆ ತಕ್ಕಂತೆ ಕ್ಲಾಸ್ ಸಿನಿಮಾ ಕೂಡ. ಶ್ರೀಮಂತ ಒಂದು ರೈತರ ಹಿನ್ನೆಲೆ ಇರುವ ಸಿನಿಮಾ. ಈ ಚಿತ್ರ ಮೇ.19ಕ್ಕೆ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ.

ಚಿತ್ರದ ಮುಖ್ಯ ಆಕರ್ಷಣೆ ಹಂಸಲೇಖ ಹಾಗು ಎಸ್ ಪಿ ಬಿ ಕಾಂಬಿನೇಷನ್ ಹಾಡುಗಳು. ಈ ಸಿನಿಮಾಗೆ ಹಂಸಲೇಖ ಅವರ ಸಂಗೀತವಿದೆ.

ಹಂಸಲೇಖ ಹಾಗು ಎಸ್ ಪಿ ಬಿ ಜೊತೆಗಿನ ಕಾಂಬಿನೇಷನ್ ಹಾಡುಗಳನ್ನು ಮರೆಯೋಕೆ ಸಾಧ್ಯವಿಲ್ಲ. ಎಸ್ ಪಿ ಬಿ ಹಾಡಿದ ಕೊನೆಯ ಗೀತೆ ಶ್ರೀಮಂತ ಸಿನಿಮಾದಲ್ಲಿದೆ ಎಂಬುದು ವಿಶೇಷ.

ಇನ್ನು ನಿರ್ದೇಶಕ ಹಾಸನ ರಮೇಶ್ ತಮ್ಮ ‘ಶ್ರೀಮಂತ’ ಸಿನಿಮಾ ಮೂಲಕ ರೈತನೇ ನಿಜವಾದ ಶ್ರೀಮಂತ ಎಂದು ತೋರಿಸಿದ್ದಾರೆ.

ಈಗಾಗಲೇ ಸಿನಿಮಾ ತಂಡ ಬಿಡುಗಡೆಗೂ ಮುನ್ನ ಭರ್ಜರಿ ಪ್ರಚಾರ ಮಾಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಶ್ರೀಮಂತ ರೈತನಿಗೆ ಭರಪೂರ ಹೊಗಳಿಕೆ ಸಿಕ್ಕಿದೆ.

ಚಿತ್ರದ ಮತ್ತೊಂದು ವಿಶೇಷ ಅಂದರೆ, ರಿಯಲ್ ಹೀರೋ ಸೋನುಸೂದ್ ಅವರು ರೈತರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೊಸ ಕಲಾವಿದರ ಸಮ್ಮಿಲನ ಚಿತ್ರದಲ್ಲಿದೆ.

ದೇಶದಲ್ಲಿ ಶೇ.80ರಷ್ಟು ರೈತರಿದ್ದಾರೆ. ಈ ಥಾಟ್ ಇಟ್ಟುಕೊಂಡು ಮಾಡಿರುವ ಸಂಗೀತಮಯ ಚಿತ್ರವಿದು. ಚಿತ್ರದಲ್ಲಿ ಮನರಂಜನಾತ್ಮಕ ಅಂಶಗಳಿವೆ.

ನಾರಾಯಣಪ್ಪ, ಸಂಜಯ್‌ಬಾಬು ಹಾಗೂ ಹಾಸನ್ ರಮೇಶ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಇನ್ನು, ಯುವ ನಟ ಕ್ರಾಂತಿ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ನಾಯಕಿಯರಾಗಿ ಮುಂಬೈ ಬೆಡಗಿ ವೈಷ್ಣವಿ ಪಟುವರ್ಧನ್ , ವೈಷ್ಣವಿ ಚಂದ್ರನ್ ಮೆನನ್ ಇದ್ದಾರೆ. ಅಲ್ಲದೆ ನಟ ಚರಣರಾಜ್ ಇಲ್ಲೊಂದು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ.

ನಟಿ ಕಲ್ಯಾಣಿ ಇಲ್ಲಿ ನಾಯಕನ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ಕುರಿ ರಂಗ ಇತರರು ಇದ್ದಾರೆ. ಕೆ.ಎಂ.ವಿಷ್ಣುವರ್ಧನ್ ಹಾಗೂ ರವಿಕುಮಾರ್ ಸನಾ ಅವರು ಕ್ಯಾಮೆರಾ ಹಿಡಿದಿದ್ದಾರೆ. ಮಾಸ್ ಮಾದ ಸಾಹಸವಿದೆ. ಮದನ್ ಹರಿಣಿ, ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ.

ಒಂದೊಳ್ಳೆಯ ಕಥಾ ಹಂದರದ ಈ ಸಿನಿಮಾ ನೋಡಲು ರೈತಾಪಿ ವರ್ಗ ಕೂಡ ಕಾದಿದೆ. ಮೇ 19 ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸಲಿದ್ದು, ಶ್ರೀಮಂತನನ್ನು ಕಣ್ತುಂಬಿಕೊಳ್ಳುವ ಸರದಿ ಪ್ರೇಕ್ಷಕರದ್ದು.

Related Posts

error: Content is protected !!