ರಾಧಿಕಾ ಕುಮಾರಸ್ವಾಮಿ ಅಭಿನಯದ ಹೊಸ ಚಿತ್ರ ಅಜಾಗ್ರತ: ವಿಭಿನ್ನ ಕಥೆ ಸಿನಿಮಾ ಮೇ 13ಕ್ಕೆ ಶುರು

ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ “ಅಜಾಗ್ರತ” ಚಿತ್ರದ ಮುಹೂರ್ತ ಸಮಾರಂಭ ಮೇ 13 ರಂದು ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆ‌.

ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ರವಿರಾಜ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ಎಂ.ಶಶಿಧರ್ ನಿರ್ದೇಶಿಸುತ್ತಿದ್ದಾರೆ.

ಎಂ.ಎಸ್.ಸಿ ಇನ್ ಫಿಲಂ ಮೇಕಿಂಗ್ ಕಲಿತಿರುವ ನಿರ್ದೇಶಕ ಶಶಿಧರ್ ವಿ, ಎಫ್ ಎಕ್ಸ್ ನಲ್ಲೂ ಪರಿಣತಿ ಹೊಂದಿದ್ದಾರೆ. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ “ಘಾರ್ಗ” ಚಿತ್ರವನ್ನು ನಿರ್ದೇಶಿಸಿರುವ ಶಶಿಧರ್ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ.

“ಅಜಾಗ್ರತ ” ಒಂದು ಸೈಕಾಲಜಿಕಲ್ ಕ್ರೈಂ ಥ್ರಿಲ್ಲೆರ್ ಕಥೆ ಹೊಂದಿರುವ ಚಿತ್ರವಾಗಿದೆ. ಏಳು ಭಾಷೆಗಳಲ್ಲಿಯೂ ನೇರ ಚಿತ್ರೀಕರಣವಾಗುತ್ತಿರುವುದು ಇದರ ವಿಶೇಷ.

ಕನ್ನಡ ಚಿತ್ರರಂಗದ ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ್ ಪ್ರಸಾದ್, ಚಿತ್ರ ಶೆಣೈ, ಮುಂತಾದವರು .
ಹಾಗೆ ತೆಲುಗು ಚಿತ್ರರಂಗದ ರಾವ್ ರಮೇಶ್, ಪುಷ್ಪ ಸುನಿಲ್, ರಾಘವೇಂದ್ರ ಶ್ರವಣ್, ಕಾಲಿವುಡ್ ನಿಂದ ಆದಿತ್ಯ ಮೆನನ್, ಸಮುದ್ರ ಕಣಿ, ಜಯ್ ಪ್ರಕಾಶ್ ಮತ್ತು ಬಾಲಿವುಡ್ ನ ಶ್ರೇಯಸ್ ತಲಪಾಡೆ ನಾಯಕ ನಟನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರ ಪ್ರೇಮಿಗಳಿಗೆ ಹೊಸ ಅನುಭವ ಕೊಡಲು ಅವರವರ ಭಾಷೆ ಯಲ್ಲಿ ಚಿತ್ರೀಕರಿಸಿ, ಅವರವರಭಾಷೆ ಯಲ್ಲೇ “ಅಜಾಗ್ರತ ” ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ..

Related Posts

error: Content is protected !!