ದಿಢೀರನೇ ಬಿಜೆಪಿ ಪ್ರಚಾರಕ್ಕೆ ಬ್ರೇಕ್‌ ಹಾಕಿದ ಕಿಚ್ಚ! ಡಿಕೆಶಿ ಹೇಳಿಕೆಗೂ ಪ್ರಚಾರ ನಿಲ್ಲಿಸಿದ್ದಕ್ಕೂ ಸಂಬಂಧವೇನು?

ಕಿಚ್ಚ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದು ಗೊತ್ತೇ ಇದೆ. ಆದರೆ, ಅದೇಕೋ ಇದ್ದಕ್ಕಿದ್ದಂತೆ ಪ್ರಚಾರ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ ಸುದೀಪ್‌. ಬಿಜೆಪಿ ಕಿಚ್ಚನಿಗೆ ಕೊಟ್ಟ ಮಾತೇನಾದರೂ ತಪ್ಪಿತಾ? ಡಿಕೆ ಶಿವಕುಮಾರ್‌ ಹೇಳಿಕೆಗೂ ಈ ಸ್ಥಗಿತಕ್ಕೂ ಸಂಬಂಧವೇನು? ಹಾಗಾದರೆ, ಸುದೀಪ್ ಕಾಂಗ್ರೆಸ್‌ ಪರ ಪ್ರಚಾರ ಮಾಡ್ತಾರಾ?

ಅದೆಲ್ಲಾ‌ಸರಿ, ಸುದೀಪ್ ಸದಾ
ಮಾತಿಗೆ ಬದದ್ದರಾದವರು. ಆದರೆ ದಿಢೀರನೆ ಪ್ರಚಾರ ನಿಲ್ಲಿಸಿದ್ದೇಕೆ. ಅದಕ್ಕೆ ಉತ್ತರವಿಲ್ಲ. ಆದರೆ
ಸುದೀಪ್ ಮನಸ್ಸಿಗೆ ಬಿಜೆಪಿ ಏನಾದರೂ ನೋವುಂಟು ಮಾಡಿತಾ?

ದಿನಕ್ಕೆ ಐದಾರು ಕ್ಷೇತ್ರಗಳಲ್ಲಿ ಬಿಡುವಿಲ್ಲದೆಯೇ ಪ್ರಚಾರ ಮಾಡುತ್ತಿದ್ದ ಕಿಚ್ಚ ಸುದೀಪ್, ದಿಢೀರನೆ ಪ್ರಚಾರ ನಿಲ್ಲಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ.

ನಾನು ಬೊಮ್ಮಾಯಿ ಮಾಮನ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದಂತೆ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ನಿಂತರು. ಶಿಗ್ಗಾವಿ ಸೇರಿದಂತೆ 18 ಕ್ಷೇತ್ರ ಸುತ್ತಾಡಿ ಲಕ್ಷಾಂತರ ಅಭಿಮಾನಿಗಳ ನಡುವೆ ಹಗಲು ರಾತ್ರಿ ಪ್ರಚಾರ ಮಾಡಿದರು.
ಆದರೆ ಬಿಜೆಪಿ ಪಕ್ಷ ಎಡವಿದ್ದು ಎಲ್ಲಿ? ಸುದೀಪ್ ಅವರ ಮನಸ್ಸನ್ನು ಬಿಜೆಪಿ ನೋಯಿಸಿತಾ?


ಖುದ್ದಾಗಿ ಕಾಂಗ್ರೆಸ್ ಅಭ್ಯರ್ಥಿ ಗಳೇ ನಮ್ಮ ಭಾಗಕ್ಕೆ ಬಂದು ಬಿಜೆಪಿ ಪರ ಪ್ರಚಾರ ಮಾಡಬೇಡಿ ಎಂದು ಕೇಳಿದ್ದುಂಟು. ಹಾಗಾಗಿಯೇ ಕಿಚ್ಚ ನವಲಗುಂದ, ಗದಗಕ್ಕೆ ಪ್ರಚಾರ ಮಾಡಲು ಹೋಗದೆ ಹಿಂದಿರುಗಿದರು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಡಿ.ಕೆ.ಶಿವಕುಮಾರ್ ಪಕ್ಷ‌ ಪರ ಕಿಚ್ಚ ಪ್ರಚಾರಕ್ಕೇನಾದರೂ ಇಳಿಯುತ್ತಾರಾ ಕಾದು ನೋಡಬೇಕು.

Related Posts

error: Content is protected !!