ನಟ ದರ್ಶನ್ ಕೊನೆಗೂ ಮಾಧ್ಯಮಕ್ಕೆ ತಲೆಬಾಗಿದ್ಧಾರಾ? ದರ್ಶನ್ ತಮ್ಮ ಮನದಾಳದ ಮಾತುಗಳನ್ನು ಪತ್ರದ ಮೂಲಕ ಹಂಚಿಕೊಂಡಿದ್ದಾರಾ? ಹೀಗೊಂದು ಸುದ್ದಿ ಹೊರಬಿದ್ದಿದೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ?
ಕನ್ನಡ ಚಿತ್ರರಂಗದಲ್ಲಿ ಮಹಾನ್ ನಟರೆಲ್ಲರೂ ಛಾಪು ಮೂಡಿಸಿ ಹೋಗಿದ್ದಾರೆ.ಅಂತಹ ನಟರಲ್ಲೊ ತೂಗುದೀಪ ಶ್ರೀನಿವಾಸ್ ಕೂಡ ಒಬ್ಬರು. ಅವರ ಕುಡಿಯಾದ ನಾನು ಮಾಧ್ಯಮಕ್ಕೆ ನೋವಾಗುವಂತೆ ಮಾತಾಡಿದ್ದೇನೆ ಹಾಗಾಗಿ ವಿಷಾಧವಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಅದೇನೆ ಇರಲಿ ರಾತ್ರಿಯಿಡೀ ಸೋಶಿಯಲ್ ಮೀಡಿಯಾದಲ್ಲಿ ಈ ಪತ್ರ ಹರಿದಾಡಿ ಚರ್ಚೆಗೆ ಗ್ರಾಸವಾಗಿದ್ದಂತೂ ನಿಜ.
ದರ್ಶನ್ ಬರೆದಿದ್ದಾರೆ ಎನ್ನಲಾದ ಪತ್ರದ ಸಾರಾಂಶ ಇದು…