ಜಾಕ್ ರಗಳೆ! ಇದು ಹೊಸಬರ ರಂಗು

ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯೋಗಗಳ ಪರ್ವ ಕಾಲ. ಹೊಸಬರು ವಿಭಿನ್ನ ಪ್ರಯತ್ನದೊಂದಿಗೆ ಚಿತ್ರರಂಗಕ್ಕೆ ಅಡಿ ಇಡ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾ ರಂಗು ರಗಳೆ. ಅತೀವ ಕಲಾ ಪ್ರೇಮದಿಂದ ಯುವ ಪ್ರತಿಭೆ ಜಾಕ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಹೂರ್ತ ಬೆಂಗಳೂರಿನ ಪಂಚಮುಖಿ ಗಣಪತಿ ದೇಗುಲದಲ್ಲಿಂದು ನೆರವೇರಿದೆ.

ತಮಿಳು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜಾಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್ ದಳಪತಿ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಭಿದಾಸ್ ಹಾಗೂ ಮೆಟ್ರೋ ಸಾಗಾ ಮೂಲಕ ಮನೆ ಮಾತಾಗಿರುವ ಸುಘೋಷ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕ ಜಾಕ್‌ ಮಾತನಾಡಿ, ನಮ್ಮದು ಬಿಗ್ ಟೀಂ ಇದೆ. ಈ ಪಯಣ ಶುರುವಾಗಿ ಆರೇಳು ತಿಂಗಳಾಯ್ತು. ಎಲ್ಲರೂ ಡೇ ನೈಟ್ ವರ್ಕ್ ಮಾಡ್ತಾ ಇದ್ದಾರೆ. ಎಲ್ಲರಿಗೂ ಧನ್ಯವಾದ ಎಂದರು.

ಸಂಗೀತ ನಿರ್ದೇಶಕ ಪೂರ್ಣಚಂದ್ರ, ಜಾಕ್, ಎಲ್ ವಿ ಪ್ರಸಾದ್ ಅಕಾಡೆಮಿಯಲ್ಲಿ ಟ್ರೈನಿಂಗ್ ತೆಗೆದುಕೊಂಡು, ತಮಿಳು ಸಿನಿಮಾಗಳಿಗೆ ಅಸಿಸ್ಟೆಂಟ್ ಮಾಡಿಕೊಂಡು ಒಳ್ಳೆ ಅನುಭವದ ಜೊತೆಗೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ವರ್ಷದಿಂದ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾನೆ. ಇಡೀ ಸಿನಿಮಾ ಪಾತ್ರಗಳು ಎಂಟರ್ ಟೈನ್ ಮಾಡುತ್ತವೆ ಎಂದರು.

ಅಭಿಲಾಷ್ ಮಾತಾನಾಡಿ, ಕಂಪ್ಲೀಟ್ ಎಂಟರ್ ಟೈನ್ಮೆಂಟ್ ಪ್ಯಾಕೇಜ್ ಮೂಲಕ ನಾನು ಬರ್ತಿದ್ದೇವು. ಜಾಕ್ ನನಗೂ 12 ವರ್ಷದ ಪರಿಚಯ. ಪೂರ್ಣ ಅಣ್ಣನ ಬಗ್ಗೆ ಮಾತಾಡುವಷ್ಟು ದೊಡ್ಡವರಲ್ಲ. ಜಾಕ್ ನಂಬಿ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್ ನನಗೆ ದೊಡ್ಡ ಸಕ್ಸಸ್ ತಂದುಕೊಟ್ಟಿದೆ. ರಂಗು ರಗಳೆ ಮೂಲಕ ಲೀಡ್ ಆಗಿ ನಟಿಸುತ್ತಿದ್ದೇವೆ. ನಿಮ್ಮ ಬೆಂಬಲ ಇಡೀ ತಂಡದ ಮೇಲೆ ಇರಲಿ ಎಂದು ಹೇಳಿದರು.

ಅಭಿದಾಸ್ ಮಾತಾನಾಡಿ, ಸ್ಕ್ರೀಪ್ಟ್ ಕೇಳಿ ತುಂಬಾ ಇಷ್ಟವಾಯ್ತು. ಮೇ ಮೊದಲ ವಾರವೇ ಚಿತ್ರೀಕರಣ ಶುರು ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಈ ಟೀಂ ಜೊತೆ ಕೆಲಸ ಮಾಡಲು ಎಕ್ಸೈಟ್ ಆಗಿದ್ದೇನೆ. ಗಟ್ಟಿಮೇಳ ಸೀರಿಯಲ್ ನಲ್ಲಿ‌ ನೀವೆಲ್ಲಾ ನೋಡಿ ಇರ್ತಿರಾ. ಈಗ ರಂಗು ರಗಳೆ ಸಿನಿಮಾ ಮೂಲಕ ಹೀರೋ ಆಗಿ ನಟಿಸುತ್ತಿದ್ದೇನೆ ಎಂದರು.

ಸುಘೋಷ್ ಮಾತನಾಡಿ, ಜಾಕ್ ಅಣ್ಣ ನನಗೆ ಫಿಲ್ಮಂ ಇನ್ಸ್ಟಿಟ್ಯೂಟ್ ನಲ್ಲಿ ಸೀನಿಯರ್. ಒಂದು ವರ್ಷದ ಹಿಂದೆಯೇ‌ ನಾನು ಸಿನಿಮಾ ಮಾಡುತ್ತಿದ್ದೇನೆ. ನಿನಗೊಂದು ರೋಲ್ ಇದೆ ಎಂದಿದ್ದರು. ಅದು ಇವತ್ತು‌ ಮುಹೂರ್ತದವರೆಗೂ ಬಂದಿದೆ‌. ನಿಮ್ಮ ಬೆಂಬಲ ನನ್ನ ಮೇಲೆ ನನ್ನ ತಂಡದ ಮೇಲೆ ಇರಲಿ ಎಂದರು.

ಶ್ರೀ ವಿಶ್ವಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶಶಿಕಲಾ ಉಮೇಶ್ ರಂಗು ರಗಳೆ ಸಿನಿಮಾಗೆ ಬಂಡವಾಳ ಹೂಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ, ಸಾಗರ್ ಎಂಬಿ ಸಂಕಲನ, ಶೇಖರ್ ಛಾಯಾಗ್ರಹಣವಿದೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿಯೇ ಉಳಿದ ತಾರಾಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

Related Posts

error: Content is protected !!