ಜನಪದ ಸಂತ ಹಂಸಲೇಖ! ಎಸ್ ಪಿ ಬಿ ಹಾಡು ಶ್ರೀಮಂತ: ಇದು ಶ್ರೀಮಂತ ರೈತನ ವಿಷಯ…

ಹಂಸಲೇಖ ಹಾಗು ಎಸ್ ಪಿ ಬಿ ಕಾಂಬಿನೇಷನ್ ಹಾಡುಗಳು ಯಾರಿಗೆ ಗೊತ್ತಿಲ್ಲ ಹೇಳಿ? ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ ಹಾಡುಗಳು ಎವರ್ ಗ್ರೀನ್ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸದಾ ಗುನುಗುವಂತಹ ಸುಪರ್ ಹಿಟ್ ಹಾಡು ಕೊಟ್ಟ ಈ ಜೋಡಿ ಮತ್ತೊಂದು ಅದ್ಬುತ ಗೀತೆಗೆ ಸಾಕ್ಷಿಯಾಗಿದೆ. ಅದುವೇ ಶ್ರೀಮಂತ ಸಿನಿಮಾ ಹಾಡು. ಎಸ್ ಪಿ ಬಿ ಕೊನೆಯದಾಗಿ ಹಾಡಿದ ಕನ್ನಡದ ಶ್ರೀಮಂತ ಸಿನಿಮಾ ಗೀತೆ ಎಂಬುದು ವಿಶೇಷ.

ಹೌದು, ಎಸ್ ಪಿ ಬಿ ಈಗ ನಮ್ಮೊಂದಿಗಿಲ್ಲ. ಆದರೂ ಅವರು ಬಿಟ್ಟು ಹೋದ ಸಾವಿರಾರು ಹಾಡುಗಳು ರಿಂಗಣಿಸುತ್ತಲೇ ಇವೆ. ಅದರಲ್ಲೂ ಹಂಸಲೇಖ ಜೊತೆಗಿನ ಕಾಂಬಿನೇಷನ್ ಹಾಡುಗಳನ್ನು ಮರೆಯೋಕೆ ಸಾಧ್ಯವಿಲ್ಲ. ಈಗ ಈ ಜೋಡಿ ಅಂಥದ್ದೇ ಮರೆಯದ ಹಾಡೊಂದನ್ನು‌ ನೀಡಿದೆ. ಎಸ್ ಪಿ ಬಿ ಹಾಡಿದ ಕೊನೆಯ ಗೀತೆ ಶ್ರೀಮಂತ ಸಿನಿಮಾದಲ್ಲಿದೆ.

ರೈತನೇ ಜಗತ್ತಿನ ಅತಿದೊಡ್ಡ ಶ್ರೀಮಂತ. ಅಂತ ಎಲ್ಲರೂ ಹೇಳುವುದು ಗೊತ್ತು. ಅದು ಹೇಗೆ ಎಂಬುದನ್ನು ನಿರ್ದೇಶಕ ಹಾಸನ ರಮೇಶ್ ತಮ್ಮ ‘ಶ್ರೀಮಂತ’ ಸಿನಿಮಾ ಮೂಲಕ ತೋರಿಸಿದ್ದಾರೆ. ರೈತನೇ ನಿಜವಾದ ಶ್ರೀಮಂತ ಎಂಬ ಸತ್ಯವನ್ನು ಈ ಅದ್ದೂರಿ ಸಿನಿಮಾ ಮೂಲಕ ಜನರಿಗೆ ಹೇಳೋಕೆ ತಂಡ ಸಜ್ಜಾಗಿದೆ.

ಈ ಸಿನಿಮಾಗೆ ಹಂಸಲೇಖ ಸಂಗಿತ ನೀಡಿದ್ದಾರೆ. ಇಲ್ಲಿನ ವಿಶೇಷ ಅಂದರೆ, ಎಸ್ ಪಿ ಬಿ ವಿಶೇಷ ಗೀತೆಯೊಂದಕ್ಕೆ ಧ್ವನಿಯಾಗಿದ್ದಾರೆ. ಚಿತ್ರದ ‘ಜನಪದ ಸಂತ’ ಎಂಬ ಗೀತೆ ಹಾಡುವ ಮೂಲಕ ಸಿನಿಮಾದ ಶ್ರೀಂಮತಿಕೆ ಹೆಚ್ಚಿಸಿದ್ದಾರೆ.

ಈಗಾಗಲೇ ಸಿನಿಮಾ ತಂಡ ಬಿಡುಗಡೆಗೂ ಮುನ್ನ ಭರ್ಜರಿ ಪ್ರಚಾರ ಮಾಡುತ್ತಿದೆ. ಇಲ್ಲಿ ಇನ್ನೊಂದು ವಿಶೇಷ ಅಂದರೆ, ರಿಯಲ್ ಹೀರೋ ಸೋನುಸೂದ್ ಅವರು ರೈತರಾಗಿಯೇ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹೊಸ ಕಲಾವಿದರ ಸಮ್ಮಿಲನ ಚಿತ್ರದಲ್ಲಿದೆ.

ಹಂಸಲೇಖ ಅವರ ಸಂಗೀತದ ಹಾಡುಗಳು ಬಿಡುಗಡೆ ಆಗಿದ್ದು ಕೇಳುಗರ ಮನಗೆದ್ದಿವೆ. ಸದ್ಯ ಮೇ ನಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ರಾಜ್ಯದ ರೈತರು ಕೂಡ ಈ ಶ್ರೀಮಂತನಿಗಾಗಿ ಎದುರು ನೋಡುತ್ತಿದ್ದಾರೆ. ಅಂದಹಾಗೆ ಮೇ 19 ಕ್ಕೆ ಶ್ರೀಮಂತ ರಿಲೀಸ್ ಆಗಲಿದೆ.

Related Posts

error: Content is protected !!