ಅಭಿರಾಮಚಂದ್ರ ನಿಗೆ ಶಿವಣ್ಣ ಸಾಥ್: ಇದು ರಥ ಕಿರಣ್, ಸಿದ್ದು ಮೂಲಿಮನಿ ಚಿತ್ರ- ಟೀಸರ್ ನೋಡಿ ಸೆಂಚುರಿ ಸ್ಟಾರ್ ಹೇಳಿದ್ದು ಹೀಗೆ

ಅಭಿರಾಮಚಂದ್ರ ಟೀಸರ್ ಬಗ್ಗೆ ಶಿವಣ್ಣ ಹೇಳಿದ್ದೇನು?
ಅಭಿರಾಮಚಂದ್ರ ಟೀಸರ್ ರಿಲೀಸ್ ಮಾಡಿದ್ದು ಬಹಳ ಖುಷಿಯಾಯ್ತು. ನಾಗೇಂದ್ರ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ತುಂಬಾ ಬ್ಯೂಟಿಫುಲ್ ವಿಷ್ಯೂವಲ್ಸ್ ಇತ್ತು. ಬರೀ ಮಕ್ಕಳ ಕಥೆ ಇದೆ. ಸ್ಟೋರಿಯಲ್ಲಿ ಬೇರೆ ಬೇರೆ ತಿರುವು ಕಾಣುತ್ತಿದೆ. ಅದನ್ನು ನಾವು ಹೇಳೋದಿಕ್ಕಿಂತ ಡೈರೆಕ್ಟರ್ ಹೇಳಿದರೆ ಒಳ್ಳೆಯದು. ಟೀಸರ್ ನೋಡ್ತಿದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆನಪಾಯ್ತು. ಆ ಸಿನಿಮಾ ತರ ಹಿಟ್ ಆಗಲಿ..ಟೈಟಲ್ ತುಂಬಾ ಪಾಸಿಟಿವ್ ಆಗಿದೆ. ಸಿನಿಮಾ ಮೇ ನಲ್ಲಿ ರಿಲೀಸ್ ಆಗ್ತಿದ್ದು, ನಾನು ನೋಡ್ತೇನೆ. ನೀವು ನೋಡಿ.. ರವಿಬಸ್ರೂರ್ ಮ್ಯೂಸಿಕ್ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದಿದ್ದಾರೆ.

ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹ ಸುಂದರ ನೋಟ ಅಭಿರಾಮಚಂದ್ರ ಟೀಸರ್ ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ.ರಥ ಕಿರಣ ಸಿದ್ದು ಮೂಲಿಮನಿ, ನಾಟ್ಯರಂಗ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಾನಿ ರೈ ನಾಯಕಿ ಆಗಿ ಅಭಿನಯಿಸಿದ್ದಾರೆ.

ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಶೂಟಿಂಗ್ ನಡೆಸಲಾಗಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಸಿನಿಮಾಕ್ಕಿದೆ. ರವಿ ಬಸ್ರೂರು ಮೂವೀಸ್ ನಡಿ ಸಿನಿಮಾವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್ ವೀಣಾ, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಎ.ಜಿ. ಎಸ್ ಎಂಟಟೈನ್ಮೆಂಟ್ ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್ ನಡಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ನಾ ಕೊನೆ ಹಂತದಲ್ಲಿರುವ ಅಭಿರಾಮಚಂದ್ರ ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

Related Posts

error: Content is protected !!