ಉಂಡೆನಾಮ ಹಾಕೋಕೆ ಬರ್ತಾರೆ ಕೋಮಲ್! ಮತ್ತೊಮ್ಮೆ ನಕ್ಕು ನಗಿಸೋಕೆ ರೆಡಿಯಾದ್ರು ಸೆನ್ಸೇಷನಲ್ ಸ್ಟಾರ್….

ತುಂಬಾ ದಿನಗಳ ನಂತರ ನಗುವಿನ ಕಚುಗುಳಿ ಇಡೋಕೆ ಕೋಮಲ್ ಕುಮಾರ್ ಉಂಡೆನಾಮ ಹಾಕ್ಕೊಂಡು ಬರ್ತಾ ಇದ್ದಾರೆ. ಚಿತ್ರದ ಶೀರ್ಷಿಕೆ ಯನ್ನು ಸ್ಯಾಂಡಲ್ ವುಡ್ ನ ಸೆಲೆಬ್ರಿಟಿ ಗಳು ಹೇಳುವುದರ ಮುಖಾಂತರ ವಿನೂತನವಾಗಿ ಅನಾವರಣ ಗೊಳಿಸಿದ್ದಾರೆ.


ಹೆಸರಿನಲ್ಲೇ ಹಾಸ್ಯ ಹೊಂದಿರುವ ಉಂಡೆನಾಮ ಏಪ್ರಿಲ್ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕೋಮಲ್ ಅವರ ಜೊತೆ ಹರೀಶ್ ರಾಜ್,ಧನ್ಯ

ಲಕೃಷ್ಣ,ತಬಲಾನಾಣಿ,ಅಪೂರ್ವ,ವೈಷ್ಣವಿ,ತನಿಷ ಕುಪ್ಪಂಡ,ಬ್ಯಾಕ್ ಜನಾರ್ಧನ್ ಮುಂತಾದವರು ನಟಿಸಿದ್ದಾರೆ.


ಈ ಚಿತ್ರವು ಎನ್.ಕೆ. ಸ್ಟುಡಿಯೋಸ್ ನ ಅಡಿಯಲ್ಲಿ ಸಿ.ನಂದ ಕಿಶೋರ್ ಅವರು ನಿರ್ಮಿಸಿದ್ದಾರೆ.
ಮಜಾಟಾಕೀಸ್,ರಾಬರ್ಟ,ಖ್ಯಾ ತಿಯ ಸಂಭಾಷಾಣೆಗಾರ ಕೆ.ಎಲ್.ರಾಜಶೇಖರ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.


ಇನ್ನುಳಿದಂತೆ ಶ್ರೀಧರ್ ಸಂಭ್ರಮ ಅವರ ಸಂಗೀತ,ನವೀನ್ಕುಮಾರ್ ಛಾಯಾಗ್ರಾಹಣ,ಕೆ.ಎಮ್.ಪ್ರಕಾಶ್ ಸಂಕಲನ ಚಿತ್ರಕ್ಕಿದೆ

Related Posts

error: Content is protected !!