ಕನ್ನಡ ಚಿತ್ರರಂಗದ ಸಿನಿಮಾ ಪತ್ರಕರ್ತರು ನಡೆಸುವ ನಾಲ್ಕನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಈ ಬಾರಿಯೂ ಯಶಸ್ವಿಯಾಗಿದೆ. ಕಳೆದ ಮೂರು ವರ್ಷಗಳಿಂದಲೂ ಸಿನಿಮಾರಂಗದ ದಿಗ್ಗಜರು ಕೊಟ್ಟ ಸಹಕಾರ ಮತ್ತು ಪ್ರೋತ್ಸಾಹದಿಂದ ಅವಾರ್ಡ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುವ ಮೂಲಕ ಕನ್ನಡದ ಸ್ಟಾರ್ ನಟ, ನಟಿಯರು ಹಾಗು ತಂತ್ರಜ್ಞರು, ನಿರ್ದೇಶಕ, ನಿರ್ಮಾಪಕರು ಸಿನಿಮಾ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸುತ್ತ ಬಂದಿದ್ದಾರೆ.
ಈ ಬಾರಿಯೂ ಕೂಡ ಲಲಿತ್ ಅಶೋಕ ಹೋಟೆಲ್ನಲ್ಲಿ ನಡೆದ ಕಲರ್ ಪುಲ್ ಕಾರ್ಯಕ್ರಮಕ್ಕೆ ಅಇನಿಮಾ ಗಣ್ಯರು ಭಾಗಿಯಾಗುವ ಮೂಲಕ ಸಿನಿಮಾ ಪತ್ರಕರ್ತರ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಅಥವಾ ಅರ್ಥಪೂರ್ಣವಾಗಿ ನಡೆಯಬೇಕಾದರೆ, ಕಾರ್ಯಕ್ರಮಕ್ಕೆ ಸಹಕಾರ ನೀಡುವ ಮನಸ್ಸುಗಳೂ ಮುಖ್ಯ. ಹಾಗಾಗಿ ಈ ಸಲವೂ ಸಹ, ನಿಮ್ಮ ಹಿಂದೆ ನಾವಿದ್ದೇವೆ. ಎಂದಿಗಿಂತಲೂ ಚೆನ್ನಾಗಿ ಕಾರ್ಯಕ್ರಮ ಮಾಡಬೇಕು ಎಂದು ಪ್ರೋತ್ಸಾಹಿಸುವ ಮೂಲಕ ಹಲವು ಕಂಪೆನಿಗಳು, ಉದ್ಯಮಿಗಳು ಕಾರ್ಯಕ್ರಮಕ್ಕೆ ತನು,ಮನ, ಧನ ನೀಡಿ ಬೆನ್ನು ತಟ್ಟಿದ್ದಾರೆ.
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಲ್ಲಿ ಉದ್ಯಮಿ ನರಸಿಂಹನ್ ಕೂಡ ಒಬ್ಬರು. ಅವರು ತಮ್ಮ ಹಾರ್ಸ್ ಫ್ಯಾಷನ್ಸ್ ಎಂಬ ಕಂಪೆನಿ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸ್ಪಂದಿಸಿದ್ದಾರೆ. ಅವರ ಹಾರ್ಸ್ ಫ್ಯಾಷನ್ಸ್ ಕಂಪೆನಿಯಲ್ಲಿ ಬ್ರ್ಯಾಂಡ್ ಟೀ ಶರ್ಟ್ಸ್ ಗಳು ತಯಾರಾಗುತ್ತವೆ. ಗುಣಮಟ್ಟದಿಂದ ತಯಾರಾಗುವ ಈ ಕಂಪೆನಿಯ ಟೀ ಶರ್ಟ್ಸ್ ಗಳಿಗೆ ಸದ್ಯ ಬೇಡಿಕೆ ಇದೆ.
ಹಾರ್ಸ್ ಫ್ಯಾಷನ್ಸ್ ಕಂಪೆನಿ ಮಾಲೀಕರಾದ ಉದ್ಯಮಿ ನರಸಿಂಹನ್, ಕೊಯಮತ್ತೂರು ಬಳಿ ಇರುವ ತ್ರಿಪುರ್ ನಲ್ಲಿ ಕಂಪೆನಿಯ ಫ್ಯಾಕ್ಟರಿ ಇಟ್ಟಿದ್ದಾರೆ. ಅಲ್ಲಿ ನೂರಾರು ಯುವ ಉದ್ಯೋಗಿಗಳಿಗೆ ಕೆಲಸ ನೀಡಿ ಉತ್ಸಾಹ ತುಂಬಿದ್ದಾರೆ.
ಇತ್ತೀಚೆಗೆ ನಡೆದ ಚಂದನವನ ಕ್ರಿಟಿಕ್ಸ್ ಫಿಲ್ಮ್ ಅವಾರ್ಡ್ ವೇಳೆ ನರಸಿಂಹನ್ ಅವರು ತಮ್ಮ, ಹಾರ್ಸ್ ಫ್ಯಾಷನ್ಸ್ ಬ್ರ್ಯಾಂಡ್ ಲಾಂಚ್ ಮಾಡಿದ್ದಾರೆ. ಕನ್ನಡ ನಿರ್ದೇಶಕ ಯೋಗರಾಜ ಭಟ್ ಅವರು ಈ ಬ್ರ್ಯಾಂಡ್ ಲಾಂಚ್ ಮಾಡಿ ಶುಭ ಕೋರಿದ್ದಾರೆ.