ಬಿಕಿನಿ ಹಾಕಿದ್ರೆ ಬೋಲ್ಡ್​ ಆಗಲ್ಲ! ನಾವು ಮಾಡೋ ರೋಲ್ ಬೋಲ್ಡ್ ಆಗಿರಬೇಕು: ಟೀಕಿಸಿದವರಿಗೆ ಉತ್ತರ ಕೊಡ್ತೀನಿ ಅಂದ್ರು ಹಾಟ್ ಬೆಡಗಿ ಅನಿತಾ…

ಸೈಕೋ ಮೂಲಕ ಪಡ್ಡೆ ಹುಡುಗರನ್ನ ಹುಚ್ಚೆದ್ದು ಕುಣಿಸಿದ್ದ ಅಪ್ಪಟ ಕನ್ನಡತಿ ಅನಿತಾಭಟ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ನಟನೆ, ಯೋಗ, ಜರ್ನಿ ಹೀಗೆ ಸದಾ ಉತ್ಸಾಹದಿಂದಲೇ ಇರುವ ಅನಿತಾಭಟ್, ತಮ್ಮ ನಿರ್ಮಾಣದ ಇಂದಿರಾ ಮೂಲಕ ಸೈ ಎನಿಸಿಕೊಂಡಿದ್ದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, ಅವರು ಪ್ರಮುಖ ಆಕರ್ಷಣೆಯಲ್ಲಿ ನಟಿಸಿರುವ ‘ಬೆಂಗಳೂರು 69’ ಸಿನಿಮಾ ಫೆಬ್ರವರಿ 10 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸುತ್ತಿದೆ. ತಮ್ಮ ಸಿನಿಮಾ ಕುರಿತು ಭಟ್ರು ಹೇಳೋದಿಷ್ಟು

ಇದೊಂದು ಸ್ಪೆಷಲ್ ಸಿನಿಮಾ. ಶೀರ್ಷಿಕೆ ಹೇಳುವಂತೆ ಇಲ್ಲಿ ಬೆಂಗಳೂರಿನ ಸ್ಪೆಷಲ್ ಸ್ಟೋರಿ ಇದೆ. ಅದು ಏನು ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು. ಈ
ಚಿತ್ರದಲ್ಲಿ ಬರುವ ಒಂದು ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ಹಾಗಾಗಿಯೋ ಏನೋ ಅದೇ ರೀತಿಯ ಪಾತ್ರಗಳು ಹುಡುಕಿ ಬರುತ್ತಿವೆ ಅನ್ನೋದು ಭಟ್ಟರ ಮಾತು.

ಬೆಂಗಳೂರು 69’ ಸಿನಿಮಾದಲ್ಲಿ ಮೂರು ಪಾತ್ರಗಳು ಮುಖ್ಯವಾಗಿವೆ. ಕ್ರೈಂ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಅಲ್ಲಲ್ಲಿ ಹಲವು ಟ್ವಿಸ್ಟ್​ಗಳು ಎದುರಾಗುತ್ತವೆ. ‘ಇಬ್ಬರು ಹುಡುಗರು ಮತ್ತು ಒಂದು ಹುಡುಗಿ ನಡುವೆ ನಡೆಯುವ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಹಾಗಂತ ಇಲ್ಲಿ ತ್ರಿಕೋನ ಪ್ರೇಮಕಥೆ ಇದೆ ಅಂದುಕೊಳ್ಳುವಂತಿಲ್ಲ. ಚಿತ್ರದಲ್ಲಿ ಅಪಹರಣವಾಗುತ್ತೆ ಯಾಕೆ ಆಗುತ್ತೆ ಅನ್ನೋದು ಸಿನಿಮಾದ ಕಥೆ. ಸಿನಿಮಾಗೆ ಶೀರ್ಷಿಕೆ ಇಡಲು ಒಂದು ಕಾರಣ ಇದೆ. ಅದನ್ನು ಸಿನಿಮಾದಲ್ಲಿ ನೋಡಬೇಕು ಎಂಬುದು ಭಟ್ಟರ ಮಾತು.

‘ಸಿನಿಮಾದಲ್ಲಿ ನಟಿಸಿರುವ ಶಫಿ ಹಾಗೂ ಪವನ್ ಶೆಟ್ಟಿ ಇಬ್ಬರೂ ನನಗೆ ಕ್ಲೋಸ್ ಫ್ರೆಂಡ್ಸ್. ಗೆಳೆಯರ ಜತೆ ನಟಿಸಿದ ಖುಷಿ ಇದೆ. ನನ್ನ ಮೇಲೆಯೇ ಕಥೆ ಸಾಗುತ್ತದೆ. ಸಿನಿಮಾದಲ್ಲಿ ಭಯಾನಕ ದೃಶ್ಯಗಳಿವೆ. ಆ ದೃಶ್ಯಗಳಲ್ಲಿ ನಟಿಸಿದ್ದು ಚಾಲೆಂಜ್ ಆಗಿತ್ತು.

ಈ ಚಿತ್ರದ ಹಾಡೊಂದರಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೇನೆ. ‘ಚಿತ್ರದ ಒಂದು ಹಾಡು ರಿಲೀಸ್ ಆಗಿದೆ. ಈ ಹಾಡು ರಿಲೀಸ್ ಆದ ಬಳಿಕ ಬೋಲ್ಡ್ ಪಾತ್ರಗಳೇ ಹುಡುಕಿ ಬಂದಿವೆ. ಬಟ್ಟೆ ಕಡಿಮೆ ಹಾಕಿ ಬೋಲ್ಡ್ ಎನ್ನಿಸಿಕೊಳ್ಳಬಾರದು. ಪಾತ್ರವೇ ಬೋಲ್ಡ್ ಆಗಿರಬೇಕು ಎಂಬುದು ಅನಿತಾ ಮಾತು.

Related Posts

error: Content is protected !!