ಫೆಬ್ರವರಿ 10 ರಿಂದ ರಂಗಿನ ರಾಟೆ ಆಟ ಶುರು…

ಕಮಲ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಕವಿತಾ ಅರುಣ್ ಕುಮಾರ್ ನಿರ್ಮಿಸಿರುವ ” ರಂಗಿನ ರಾಟೆ” ಚಿತ್ರ ಫೆಬ್ರವರಿ 10 ರಂದು ಬಿಡುಗಡೆಯಾಗುತ್ತಿದೆ.

ಇದೇ ಹತ್ತರಂದು ನಮ್ಮ ಚಿತ್ರ ತೆರೆಗೆ ಬರುತ್ತಿದೆ. ರಿಲಯನ್ಸ್ ಎಂಟರ್ ಟೈನ್ ಮೆಂಟ್ ಮೂಲಕ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಾನು ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಜೀವನ ಕೂಡ ರಾಟೆಯ ತರಹ ಸುತ್ತಿಸುತ್ತಿ ಮತ್ತೇ ಅಲ್ಲೇ ಬಂದು ನಿಲ್ಲುತ್ತದೆ. ಹಾಗಾಗಿ ಚಿತ್ರಕ್ಕೆ “ರಂಗಿನ ರಾಟೆ” ಎಂದು ಶೀರ್ಷಿಕೆ ಇಡಲಾಗಿದೆ ಎಂದರು ನಾಯಕ ರಾಜೀವ್ ರಾಥೋಡ್.

ನಾನು ಸಹ ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿರುವುದಾಗಿ ಭವ್ಯ ತಿಳಿಸಿದರು.

ಇದೊಂದು ಉತ್ತಮ ಕಂಟೆಂಟ್ ವುಳ್ಳ ಚಿತ್ರ. ಜನ ಮುಚ್ಚಿಕೊಳ್ಳುವ ಭರವಸೆಯಿದೆ. ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ ತಿಳಿಸಿದರು ನಿರ್ದೇಶಕ ಆರ್ಮುಗಂ.

ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಈಗ ಚಿತ್ರ ಬಿಡುಗಡೆ ಹಂತ ತಲುಪಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್.

ಸಂತೋಷ್ ಮಳವಳ್ಳಿ ಗೀತರಚನೆ, ಚಂದ್ರು ಓಬ್ಬಯ್ಯ ಸಂಗೀತ ನಿರ್ದೇಶನ, ರವಿ ಸುವರ್ಣ ಛಾಯಾಗ್ರಹಣ ಮತ್ತು ದಾಮೋದರ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ.

ರಾಜೀವ್ ರಾಥೋಡ್, ದುನಿಯಾ ರಶ್ಮಿ, ಸಂತೋಷ್ ಮಳವಳ್ಳಿ, ಭವ್ಯ, ರಾಂಗ್ ಕಾಲ್ ಚಂದ್ರು, ಮುರಳಿ ಮೋಹನ್, ಸ್ವಪ್ನ ಮುಂತಾದವರು “ರಂಗಿನ ರಾಟೆ” ಚಿತ್ರದಲ್ಲಿ ಅಭಿನಯಿಸಿದ್ದಾರೆ.

Related Posts

error: Content is protected !!