ಉಸಿರೇ ಉಸಿರೇ ನೀ ಉಸಿರ ಕೊಲ್ಲಬೇಡ… ಇದು ಕಿಚ್ಚ ಸುದೀಪ್ ಸಿನಿಮಾದ ಫೇಮಸ್ ಹಾಡು. ಈ ಹಾಡು ಕೇಳದವರೇ ಇಲ್ಲ. ಈಗ ಈಹಾಡಿಗೂ ಸಂಬಂಧ ಹೇಗಿದೆಯೋ ಈಗ ಹೇಳುತ್ತಿರುವ ಹೊಸ ಸಿನಿಮಾಗೂ ಸುದೀಪ್ ಅವರಿಗೂ ಸಂಬಂಧವಿದೆ.
ಹೌದು, ಹೊಸ ಸಿನಿಮಾಗೆ ಸುದೀಪ್ ಸಾಥ್ ಕೊಡುತ್ತಿದ್ದಾರೆ. ಅದು ಅವರ ಆಪ್ತ ರಾಜೀವ್ ಸಿನಿಮಾಮೂಲಕ. ಎನ್. ಗೊಂಬೆ ಬ್ಯಾನರ್ ನಲ್ಕಿ ಪ್ರದೀಪ್ ಯಾದವ್ ನಿರ್ಮಿಸುತಗತಿರು ಉಸಿರೇ ಉಸಿರೇ ಸಿನಿಮಾಗೆ ಸಿ ಎಂ ವಿಜಯ್ ನಿರ್ದೇಶನವಿದೆ. ಈ “ಉಸಿರೇ ಉಸಿರೇ” ಚಿತ್ರಕ್ಕೆ ಕಿಚ್ಚ ಸುದೀಪ್ ಎಂಟ್ರಿಯಾಗುತ್ತಿದ್ದಾರೆ ಅನ್ನೋದೇ ವಿಶೇಷ.
ಸದ್ಯ ಈಗಾಗಲೇ “ಉಸಿರೇ ಉಸಿರೇ” ಚಿತ್ರವು ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಇಷ್ಟರಲ್ಲೇ ಅವರು ಚಿತ್ರತಂಡದಲ್ಲಿ ಪಾಲ್ಗೊಳ್ಳ ಲಿದ್ದಾರೆ. ಈಗಾಗಲೇ ಚಿತ್ರತಂಡ ಅಭಿನಯ ಚಕ್ರವರ್ತಿ ಯನ್ನು ಭೇಟಿಯಾಗಿದ್ದು ಕಿಚ್ಚ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
“ಬಿಗ್ ಬಾಸ್” ಖ್ಯಾತಿಯ ರಾಜೀವ್ ಈ ಚಿತ್ರದ ನಾಯಕರಾಗಿದ್ದು, ಶ್ರೀಜಿತ ನಾಯಕಿಯಾಗಿದ್ದಾರೆ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ,ಬ್ರಹ್ಮಾನಂದಮ್,ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಇತರರು ಚಿತ್ರದಲ್ಲಿದ್ದಾರೆ.
ಸಿ.ಎಂ.ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ ವಿವೇಕ್ ಚಕ್ರವರ್ತಿಯ ಸಂಗೀತವಿದೆ.