ಪ್ರಜ್ವಲ್ ಅಬ್ಬರ ಜೋರು! ಅಪ್ಪ ಮಗನ ಅಪರೂಪದ ಕಥೆ ನವೆಂಬರ್ 18ಕ್ಕೆ ಅನಾವರಣ…

ಕೆ.ರಾಮ್‌ ನಾರಾಯಣ್ ಅವರ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಚಿತ್ರ ಅಬ್ಬರ
ನವೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟೈಸನ್, ಕ್ರ‍್ಯಾಕ್ ನಂತರ ರಾಮ್‌ನಾರಾಯಣ್ ನಿರ್ದೇಶಿಸಿರುವ ಚಿತ್ರವಿದು. ಸಿ. ಅಂಡ್ ಎಂ.ಮೂವೀಸ್ ಬ್ಯಾನರ್ ನಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ.


ಆಕ್ನ್ , ಫ್ಯಾಮಿಲಿ ಬಾಂಡಿಂಗ್, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ತಂದೆ ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಅದರ ಮಹತ್ವದ ಕುರಿತು ಹೇಳಲಾಗಿದೆ. ಪ್ರಜ್ವಲ್ ಜೊತೆ ರಾಜಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ.

ನಾಯಕ ತನ್ನ ಫ್ಯಾಮಿಲಿಗೋಸ್ಕರ ಏನೆಲ್ಲ ಮಾಡುತ್ತಾನೆ ಅನ್ನೋದನ್ನು ಪ್ರೇಕ್ಷಕರ ಮನಮುಟ್ಟುವ ಹಾಗೆ ನಿರೂಪಿಸಲಾಗಿದೆ. ತಂದೆ ಒಂದು ಒಂದು ತಪ್ಪು ಮಾಡ್ತಾನೆ, ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡ್ತಾನೆ. ನಂತರ ಮಗ ಅದನ್ನು ಹೇಗೆ ಸರಿಪಡಿಸ್ತಾನೆ ಅನ್ನೋದೇ ಈ ಚಿತ್ರದ ಎಳೆ.

ತಾನು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿದ್ದರೂ ಅದು ಹೋಗ್ತಾ ಹೋಗ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಅಬ್ಬರ ಚಿತ್ರದ ಸಂದೇಶ.

ನಾಯಕ ಪ್ರಜ್ವಲ್ ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ ಎರಡು ಡ್ಯುಯೆಟ್ ಹಾಡುಗಳನ್ನು ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ.


ಶೋಭರಾಜ್, ರವಿಶಂಕರ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ರವಿ ಬಸ್ರೂರು ಅವರ ಅದ್ಭುತ ಮ್ಯೂಸಿಕ್, ಜೆ.ಕೆ.ಗಣೇಶ್ ಅವರ ಕ್ಯಾಮೆರಾವರ್ಕ್ ಚಿತ್ರಕ್ಕಿದೆ.

Related Posts

error: Content is protected !!