ಜಮಾಲಿ ಗುಡ್ಡದ ಮೇಲೆ ಡಾಲಿ ಸ್ಮೈಲ್! ಡಿ.30ಕ್ಕೆ ಸಿನಿಮಾ ರಿಲೀಸ್…

ಕನ್ನಡದಲ್ಲಿ ಈ ವರ್ಷದ ಮೋಸ್ಟ್‌ ಬ್ಯುಸಿಯೆಸ್ಟ್‌ ನಟ ಡಾಲಿ ಧನಂಜಯ್‌ ಅಭಿನಯದ ಈ ವರ್ಷದ ಕೊನೆಯ ಸಿನಿಮಾ, ‘ಒನ್ಸ್‌ ಅಪಾನ್‌ ಏ ಟೈಮ್‌ ಇನ್‌ ಜಮಾಲಿಗುಡ್ಡ’ ಈ ವರ್ಷದ ಕೊನೆ ವಾರ, ಡಿ.30ರಂದು ತೆರೆಗೆ ಬರುತ್ತಿದೆ. ಕನ್ನಡ ಇಂಡಸ್ಟ್ರಿಯ ಮೋಸ್ಟ್‌ ಲಕ್ಕಿಯೆಸ್ಟ್‌ ವೀಕ್‌ ಅಂತಲೇ ಪಾಪ್ಯುಲರ್‌ ಆಗಿರೋ ಡಿಸೆಂಬರ್‌ ಕೊನೆಯ ವಾರದಲ್ಲಿ ರಿಲೀಸ್‌ ಆಗುತ್ತಿದೆ.

ಜಮಾಲಿಗುಡ್ಡ, ತನ್ನ ವಿಭಿನ್ನ ಮೇಕಿಂಗ್‌, ಸಾಂಗ್‌ ಎಲ್ಲದ್ದಕ್ಕೂ ಮೊದಲು ಸಿನಿಮಾದ ಟೈಟಲ್‌ ಮೂಲಕ ಸೌಂಡ್ ಆಗಿದೆ. ಬ್ಯಾಕ್‌ ಟು ಬ್ಯಾಕ್‌ ಆಕ್ಷನ್‌ , ರೊಮ್ಯಾಂಟಿಕ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ಡಾಲಿ ಧನಂಜಯ್‌, ಮೊದಲ ಬಾರಿಗೆ ಜಮಾಲಿ ಗುಡ್ಡ ಸಿನಿಮಾ‌ಮೂಲಕ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ಕನ್ನಡ ಹಾಗೂ ತೆಲುಗಿನಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಜಮಾಲಿಗುಡ್ಡ ಸಿನಿಮಾದಲ್ಲಿ ಡಾಲಿ ಧನಂಜಯ್‌ ಅವರ ಜೊತೆಗೆ ಅದಿತಿ ಪ್ರಭುದೇವ, ಬಾಲ ನಟಿ ಪ್ರಾಣ್ಯ ರಾವ್‌, ಭಾವನಾ ರಾಮಯ್ಯ ಮುಂತಾದವರು ನಟಿಸಿದ್ದಾರೆ.

ಇನ್ನು ಈ ಚಿತ್ರಕ್ಕೆ ಕನ್ನಡಕ್ಕೆ ಒಂದನ್ನು ಒತ್ತಿ ಖ್ಯಾತಿಯ ಕುಶಾಲ್‌ ಗೌಡ ನಿರ್ದೇಶಕರು. ತಮ್ಮ ಕನಸಿನ ಕಥೆ ಕಟ್ಟಿಕೊಂಡು ಮಾಡಿರುವ ಸಿನಿಮಾ ಇದು. ಸಿನಿಮಾಗೆ ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ.

ಈಗಾಗಲೇ ಸಿನಿಮಾದ ‘ಸಾಗಿದೆ ಹಾಡು’ ಸಾಕಷ್ಟು ಜನಪ್ರಿಯವಾಗಿದೆ. ಶ್ರೀಹರಿ ನಿರ್ಮಾಣ ಮಾಡಿರುವ ಸಿನಿಮಾ ಮೂಲಕ ಡಾಲಿಯ ಮತ್ತೊಂದು ಹೊಸ ಅವತಾರ ಡಿಸೆಂಬರ್ 30ಕ್ಕೆ ನೋಡಬಹುದು.

Related Posts

error: Content is protected !!