ಈ ಸಿನಿಮಾ ಪ್ರೀತಿಯೇ ಹಾಗೆ. ಇಲ್ಲಿಗೆ ಒಮ್ಮೆ ಎಂಟ್ರಿ ಕೊಟ್ಟರೆ ಸಾಕು. ಸೋಲಿರಲಿ, ಗೆಲುವಿರಲಿ ಆ ಸೆಳೆತ ಬಿಡೋದೇ ಇಲ್ಲ. ಇಲ್ಲೆ ಅದೆಷ್ಟೋ ಒಳ್ಳೆಯ ಪ್ರತಿಭಬೆಗಳು ಬಂದು ನೆಲೆ ಕಂಡಿವೆ. ಒಂದಷ್ಟು ಪ್ರತಿಭಾವಂತರು ನೆಲೆ ಕಾಣಲು ಹರಸಾಹಸ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಹೊಸ ಬಗೆಯ ಕಥೆಗಳನ್ನಿಟ್ಟುಕೊಂಡು ಇಲ್ಲಿಗೆ ಬರುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಆ ಸಾಲಿಗೆ ಈಗ ‘ಕೆರೆಬೇಟೆ’ ಸಿನಿಮಾ ಕೂಡ ಸೇರಿದೆ
ಹೌದು, ಇದು ಹೊಸ ಬಗೆಯ ಕಥೆ ಇಟ್ಟುಕೊಂಡು ಬರುತ್ತಿರುವ ಸಿನಿಮಾ. ಅಂದಹಾಗೆ, ಈ ಹಿಂದೆ ‘ರಾಜಹಂಸ’ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡು ಒಂದಷ್ಟು ಸುದ್ದಿಯಾಗಿದ್ದ, ಗೌರಿಶಂಕರ್ ಈಗ ಲೇಟೆಸ್ಟ್ ಕಥೆಯೊಂದಿಗೆ ಎಂಟ್ರಿಯಾಗುತ್ತಿದ್ದಾರೆ. ಇನ್ನು
‘ಕೆರೆಬೇಟೆ’ ಚಿತ್ರದ ಮುಹೂರ್ತ ಶಿವಮೊಗ್ಗ ಜಿಲ್ಲೆಯ ಹೊಗೆವಡ್ಡಿ ಹಾಲುರಾಮೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿದೆ.
ಜನಮನ ಸಿನಿಮಾಸ್ ಬ್ಯಾನರ್ ಮೂಲಕ ಜೈ ಶಂಕರ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗುರುಶಿವ ಹಿತೈಶಿ ಕಥೆ ಜೊತೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರಕಥೆಯಲ್ಲಿ ಗೌರಿಶಂಕರ್ ಕೂಡ ನಿರ್ದೇಶಕರ ಜೊತೆ ಕೈ ಜೋಡಿಸಿದ್ದಾರೆ. ವಿಶೇವೆಂದರೆ, ಹೀರೋ ಗೌರಿಶಂಕರ್ ಅವರೇ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರೇ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು ಗುರುಶಿವ ಹಿತೈಶಿ ಅವರು ಕಳೆದ ಹತ್ತು ವರ್ಷಗಳಿಂದಲೂ ಪವನ್ ಒಡೆಯರ್ ಜೊತೆ ಕೆಲಸ ಮಾಡಿದ್ದಾರೆ. ಆ ಅನುಭವ ಮೇಲೆ ಕೆರೆಬೇಟೆ ನಿರ್ದೇಶಿಸುತ್ತಿದ್ದಾರೆ.
ಕೆರೆಬೇಟೆ ಒಂದು ಹಳ್ಳಿ ಸೊಗಡಿನಲ್ಲಿ ನಡೆಯೋ ಕಥೆ. ಅದರಲ್ಲೊಂದು ಮುದ್ದಾದ ಪ್ರೇಮ ಕಥೆಯೂ ಇದೆ. ಮಲೆನಾಡ ಭಾಗದಲ್ಲಿ ನಡೆಐವ ಕೆರೆಬೇಟೆ ಎಂಬ ವಿಶೇಷ ಆಚರಣೆ ಈ ಚಿತ್ರದ ಆಕರ್ಷಣೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಸಿಗಂಧೂರು, ಕೋಗಾರ್ ಘಾಟ್ ಮತ್ತು ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.
ಚಿತ್ರಕ್ಕೆ ಬಿಂದು ಶಿವರಾಮ್ ನಾಯಕಿ, ಉಳಿದಂತೆ ಚಿತ್ರದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್, ಹರಿಣಿ, ರಘುರಾಜನಂದ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್ ಸೇರಿದಂತೆ ಶಿವಮೊಗ್ಗ ಭಾಗದ ಅನೇಕ ಕಲಾವಿದರು ಚಿತಗರದಲ್ಲಿ ನಟಿಸುತ್ತಿದ್ದಾರೆ.
ಕೀರ್ತನ್ ಪೂಜಾರಿ ಕ್ಯಾಮೆರಾ ಹಿಡಿದರೆ, ಗಗನ್ ಬಡೇರಿಯಾ ಅವರ ಸಂಗೀತವಿದೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಮತ್ತು ಜ್ಞಾನೇಶ್ ಅವರ ಸಂಕಲನವಿದೆ. ಕಂಬಿರಾಜು ಅವರ ನೃತ್ಯ ನಿರ್ದೇಶನವಿದೆ.
ಅದೇನೆ ಇರಲಿ ಮಲೆನಾಡ ಭಾಗದ ವಿಶೇಷ ಕಥೆಯೊಂದು ಚಿತ್ರವಾಗುತ್ತಿದೆ. ಪಕ್ಕಾ ದೇಸಿ ಕಥೆಯ ಈ ಚಿತ್ರ ಕುತೂಹಲವಂತೂ ಮೂಡಿಸಿದೆ.