ಅಲ್ಲಿ ಜೋರಾಗಿಯೇ ಧಿಕ್ಕಾರ, ಧಿಕ್ಕಾರ ಎಂಬ ಕೂಗು ಕೇಳಿ ಬರುತ್ತಿತ್ತು. ಒಳ ಹೊಕ್ಕರೆ ಅದು ನಟ ರಾಘವೇಂದ್ರ ಅವರ ಆಕ್ರೋಶದ ಕೂಗು. ಹೌದು , ಅದು ವಿಜಯ ರಾಘವೇಂದ್ರ ಅವರ ಕೂಗು. ಅಷ್ಟಕ್ಕೂ ಅವರು ಕೂಗುತ್ತಿದ್ದದ್ದು ಒಂದು ಕಂಪೆನಿ ವಿರುದ್ಧ. ಇದು ಕಂಡು ಬಂದದ್ದು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ.
ಕಾಸಿನ ಸರ ಚಿತ್ರಕ್ಕಾಗಿ ರಾಘವೇಂದ್ರ ಡಬ್ಬಿಂಗ್ ಮಾಡುತ್ತಿದ್ದರು. ಅದೊಂದು ಒಂದು ರೈತ ವಿರೋಧಿ ಕಂಪನಿ ಒಂದರ ವಿರುದ್ಧ ಡಬ್ ಮಾಡುತ್ತಿದ್ದರು.
ನೇಟಿವ್ ಕ್ರಿಯೇಷನ್ಸ್ ಲಾಂಚನದಲ್ಲಿ ಈ. ದೊಡ್ಡನಾಗಯ್ಯ ನಿರ್ಮಿಸಿ, ಎನ್. ಆರ್. ನಂಜುಂಡೇಗೌಡ ನಿರ್ದೇಶಕರಾಗಿರುವ ಕಾಸಿನ ಸರ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಪೋಸ್ಟ್ ಪ್ರೊಡಕ್ಷನ್ ನ ಕೆಲಸ ಪ್ರಾರಂಭ ಆಗಿದೆ.
ಚಿತ್ರದ ತಾರಾಗಣದಲ್ಲಿ ವಿಜಯ ರಾಘವೇಂದ್ರ ಜೊತೆಗೆ ನಾಯಕಿಯಾಗಿ ಹರ್ಷಿಕಾ ಪೂಣಚ ಹಾಗೂ ಉಮಾಶ್ರೀ,ನೀನಾಸಂ ಅಶ್ವಥ್, ಸಂಗೀತಾ, ಸುಧಾ ಬೆಳವಾಡಿ, ಹನುಮಂತೆಗೌಡ, ಮಂಡ್ಯ ರಮೇಶ್, ಮೀನಪ್ರಕಾಶ್ ಇದ್ದಾರೆ.
ರೈತರ ಸಾಧನೆಗೇ ಪ್ರಶಸ್ತಿ ನೀಡುವ ಅತಿಥಿಯಾಗಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಚಿತ್ರಕ್ಕೆ ಪಾತ್ರ ಮಾಡುವ ಮೂಲಕ ಚಿತ್ರಕ್ಕೆ ಶುಭಾಶಯಗಳು ಕೋರಿದ್ದಾರೆ.ಹೆಚ್. ಸಿ ವೇಣು ಛಾಯಾಗ್ರಹಣ, ಶ್ರೀಧರ್ ಸಂಭ್ರಮ್ ಸಂಗೀತವಿದೆ.
ಸುರೇಶ್ ಅರಸ್ ಸಂಕಲನ,ಸಂಭಾಷಣೆ ಎಸ್. ಜಿ. ಸಿದ್ದರಾಮಯ್ಯ,ವಸಂತ್ ರಾವ್ ಕುಲಕರ್ಣಿ ಕಲೆ, ನಾಗೇಂದ್ರ, ಬಿ. ರಾಮಮೂರ್ತಿ ಕೋಲಾರ ನಾಗೇಶ್ ಚಿತ್ರದ ತಾಂತ್ರಿಕ ವರ್ಗ ಕೆಲಸ ಮಾಡಿದೆ.