ದಿನ ಕಳೆದಂತೆ ಹೊಸ ಬಗೆಯ ಚಿತ್ರಗಳು ರಿಲೀಸ್ ಆಗುತ್ತಲೇ ಇವೆ. ಆ ಸಾಲಿಗೆ ಈಗ ಪ್ರೇಕ್ಷಕರ ಮುಂದೆ ಬರಲು ಪಂಖುರಿ ಚಿತ್ರ ರೆಡಿಯಾಗುತ್ತಿದೆ.
ಅದಕ್ಕೂ ಮುನ್ನ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಇನ್ನು ಚಿತ್ರದ ನಾಯಕಿ ಕುಂದನಾ ರೆಡ್ಡಿ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಬೆತೆಲ್ ಚೈಲ್ಡ್ ಕೇರ್ ಸೆಂಟರ್ ನ ಮಕ್ಕಳ ಜೊತೆ ಅರ್ಥಪೂರ್ಣವಾಗಿ ಆಚರಿಸಿಕೊಂಡರು. A2Music ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ.
ಕುಂದನಾ ನಟಿಸಿರುವ ಪಂಖುರಿ ಸಿನಿಮಾ ಮಹಿಳಾ ದೌರ್ಜನ್ಯದ ವಿರುದ್ಧದ ಕಥಾಹಂದರವಿದೆ. ಒಂಟಿ ಹೆಣ್ಣಿಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳೇನು ಎಂಬ ಅಂಶವನ್ನು ಇಲ್ಲಿ ತೋರಿಸಲಾಗಿದೆ. ಕುಂದನಾ ಜತೆ ಶಶಿಶೇಖರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಕುರಿತು ಹೇಳುವ ಕುಂದನಾ, ಉತ್ತಮ ಪಾತ್ರದ ನಿರೀಕ್ಷೆಯಲ್ಲಿದ್ದ ನನಗೆ ಉತ್ತಮ ಅವಕಾಶ ಸಿಕ್ಕಿದೆ ಎನ್ನುತ್ತಾರೆ.
ಅಂದಹಾಗೆ, ಪ್ರಕೃತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ , ಅಫ್ಜಲ್ ಅವರ ಸಹಯೋಗದೊಂದಿಗೆ ಸಿನಿಮಾ ನಿರ್ಮಾಣದ ಮೂಲಕ ಯುವ ನಿರ್ಮಾಪಕಿ ಆಗಿಯೂ ಪಂಖುರಿ ಚಿತ್ರದ ನಟಿ ಕುಂದನಾ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ಶಾರದ ಪಾತ್ರದಲ್ಲಿ ಕುಂದನಾ ಕಾಣಿಸಿಕೊಳ್ಳುತ್ತಿದ್ದಾರೆ.
ಅದೇನೆ ಇರಲಿ, ಚಿಕ್ಕಂದಿನಲ್ಲೇ ಸೆಲೆಬ್ರಿಟಿಯಾಗುವ ಆಸೆ ಕಂಡಿದ್ದ ಕುಂದನಾ, ತಮ್ಮ ಆಸೆ ಈಡೇರಿಸಿಕೊಳ್ಳಲು ಹಗಲಿರಳು ಶ್ರಮಿಸಿ ಇಂದು ಕಂಡ ಕನಸನ್ನು ಈಡೇರಿಸಿಕೊಂಡಿದ್ದಾರೆ. ಬಾಲ್ಯದ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದರು . ಇದೀಗ ‘ಪಂಖುರಿ’ ಚಿತ್ರದ ಮೂಲಕ ಕನ್ನಡ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಮೂಲತಃ ಆಂಧ್ರದವರಾದ ಕುಂದನಾ, ಬೆಂಗಳೂರಿನಲ್ಲಿ. ಬದುಕು ಕಟ್ಟಿಕೊಂಡಿದ್ದು , ಕನ್ನಡವನ್ನು ಲೀಲಾಜಾಲವಾಗಿ ಮಾತನಾಡುವ ಮೂಲಕ ಇಲ್ಲಿಯೇ ಗಟ್ಟಿ ನೆಲೆ ಕಾಣುವ ಆಸೆ ಹೊಂದಿದ್ದಾರೆ. ಇ ಕಾಮರ್ಸ್ ನಲ್ಲಿ ಸ್ನಾಕೋತ್ತರ ಪದವಿ ಪಡೆದಿರುವ ಅವರು, ಎಂಎನ್ ಸಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ, ಕನ್ನಡ ಚಿತ್ರರಂಗದ ಮೇಲಿರುವ ಆಸಕ್ತಿ ಪಂಖುರಿ ಚಿತ್ರದ ಮೂಲಕ ತೆರೆಗೆ ಬರುತ್ತಿದ್ದಾರೆ.
ಈ ಚಿತ್ರಕ್ಕೆ ದೋಸ್ತಿ ವಿ ಆನಂದ ನಿರ್ದೇಶಕರು. ಇನ್ನೂ ಹೆಸರಿಡದ ಎರಡು ಸಿನಿಮಾಊ ಇವರು ಕಾಣಿಸಿಕೊಳ್ಳಲಿದ್ದಾರೆ.
ಕುಂದನ ಕೇವಲ ನಟನೆ ಮಾತ್ರವಲ್ಲದೆ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಶಾಲಾ ದಿನಗಳು ಮತ್ತು ಕೆಲಸದಲ್ಲಿದ್ದಾಗ ಸಂಸ್ಥೆಯ ಕಾರ್ಯಕ್ರಮಗಳಲ್ಲಿಯೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮಾಡಿದ ಅನುಭವ ಇದೆ.