ಸೆಪ್ಟೆಂಬರ್ 9 ಕ್ಕೆ ದೇವರ ದರ್ಶನ! ಅಪ್ಪು ನಟನೆಯ ಲಕ್ಕಿಮ್ಯಾನ್ ಬಿಡುಗಡೆಗೆ ರೆಡಿ…

ಕನ್ನಡ ಚಿತ್ರರಂಗದಲ್ಲೀಗ ಹೊಸ ಬಗೆಯ ಸಿನಿಮಾ ಬಿಡುಗಡೆಯ ಪರ್ವ. ಹೌದು, ಸ್ಯಾಂಡಲ್ ವುಡ್ ಈಗ ಭಾರತೀಯ ಚಿತ್ರರಂಗದಲ್ಲೇ ನ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ರಿಲೀಸ್ ಆದ ಒಂದಷ್ಟು ಸಿನಿಮಾಗಳು ದೊಡ್ಡ ಮಟ್ಟದ ಯಸಸ್ಸು ಕಾಣಿಸಿಕೊಂಡಿವೆ. ಈಗಲೂ ಬಿಡುಗಡೆಗೆ ನಿರೀಕ್ಷೆ ಸಿನಿಮಾಗಳು ಸೇರಿವೆ. ಅ ಸಾಲಿಗೆ “ಲಕ್ಕಿ ಮ್ಯಾನ್” ಕೂಡ ಸೇರಿದೆ. ಈ ನಿರೀಕ್ಷೆಗೆ ಕಾರಣ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿರುವುದು. ಇಡೀ ಚಿತ್ರದ ಹೈಲೆಟ್ ಅವರ ಪಾತ್ರ ಈ ಚಿತ್ರದಲ್ಲಿ ಅವರದು ವಿಶೇಷ ಪಾತ್ರ. ಅದನ್ನು ತೆರೆಯ ಮೇಲೆ ನೋಡಬೇಕು. ಈಗಾಗಲೇ “ಲಕ್ಕಿ ಮ್ಯಾನ್” ಚಿತ್ರವನ್ನ ಅದ್ದೂರಿಯಾಗಿ ತೆರೆಮೇಲೆ ತರಲು ಚಿತ್ರತಂಡ ಜೋರು ತಯಾರಿ ನಡೆಸಿದೆ.

ನಿರ್ದೇಶಕ ನಾಗೇಂದ್ರ ಪ್ರಸಾದ್ ಹೇಳುವಂತೆ, ನಾನು ನನ್ನ ಮಾತೃಭಾಷೆಯಲ್ಲಿ ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರವಿದು. ಈ ಚಿತ್ರದ ಕಥೆಯೇ ನಾನು ಸಿನಿಮಾ ಮಾಡಲು ಕಾರಣ. ಚಿತ್ರದಲ್ಲಿ ಸೆಂಟಿಮೆಂಟ್ , ಲವ್ ಮತ್ತು ಎಮೋಷನಲ್ ಇದೆ. ಭರಪೂರ ಮನೋರಂಜನೆಯೂ ಇದೆ. ಈ ಚಿತ್ರಕ್ಕೆ ಭಗವಂತ, ಭಾಗ್ಯವಂತ ಹಾಗೂ ಲಕ್ಕಿ ಮ್ಯಾನ್ ಎಂಬ ಶೀರ್ಷಿಕೆ ಆಯ್ಕೆ ಮಾಡಿದ್ದೆವು. ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯಿಸಬೇಕು ಎಂಬ ಉದ್ದೇಶದಿಂದ ಅವರನ್ನು ಭೇಟಿ ಮಾಡಲು ಹೋದಾಗ ಅವರೇ ಕಥೆ ಕೇಳಿ ತ ಲಕ್ಕಿ ಮ್ಯಾನ್ ಟೈಟಲ್ ತುಂಬಾ ಸೂಕ್ತ ಎಂದು ಸೂಚಿಸಿದರು. ಈಗ ನಾನೊಬ್ಬ ನಿರ್ದೇಶಕನಾಗಿ ಇಲ್ಲಿ ಮಾತನಾಡಲು ಅಪ್ಪು ಅವರೇ ಕಾರಣ. ನನ್ನ ಮೊದಲ ನಿರ್ದೇಶನದ ಚಿತ್ರವನ್ನು ಕನ್ನಡದಲ್ಲಿ ಮಾಡಿದ್ದು, ಅದರಲ್ಲಿ ಅಪ್ಪು ಅವರ ಜೊತೆ ಕೆಲಸ ಮಾಡಿದ್ದು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ.

ಅವರು ತೋರಿಸಿದ ಪ್ರೀತಿ, ಕಾನ್ಫಿಡೆಂಟ್, ಸ್ಟ್ರೆಂಥ್ ಇವತ್ತು ನಾನಿಲ್ಲಿ ನಿಲ್ಲಲು ಕಾರಣ. ಅಪ್ಪು ಅವರು ತುಂಬಾ ಅರ್ಥಗರ್ಭಿತವಾದ ಪಾತ್ರವನ್ನು ಮಾಡಿದ್ದು, ಅವರು ಚಿತ್ರದಲ್ಲಿ 45 ನಿಮಿಷಕ್ಕೂ ಹೆಚ್ಚು ಇರಲಿದ್ದಾರೆ. ಅಲ್ಲದೆ ವರನಟ ಡಾ.ರಾಜ್‌ಕುಮಾರ್ ಅವರ ಮೇಲೆ ರಚಿಸಲಾಗಿರುವ ಹಾಡೊಂದರಲ್ಲಿ ಪುನೀತ್ ಜೊತೆ ನಮ್ಮ ಸೋದರ ಪ್ರಭುದೇವಾ ಕೂಡ ಹೆಜ್ಜೆ ಹಾಕಿದ್ದಾರೆ. ಒಂದು ಫ್ಯಾಂಟಸಿ ಡ್ರಾಮಾವನ್ನು ಲಕ್ಕಿಮ್ಯಾನ್ ಚಿತ್ರದಲ್ಲಿ ತರುತ್ತಿದೇವೆ. ಲಕ್ಕಿ ಮ್ಯಾನ್ ಚಿತ್ರವನ್ನ ಎಲ್ಲರೂ ಬೆಂಬಲಿಸಿ ಎಂದರು.

ಹೀರೋ ಕೃಷ್ಣ, ಪುನೀತ್ ಅವರ ಜೊತೆಗಿನ ಅನುಭವ ಹಂಚಿಕಕೊಂಡು, ನಾನು ಅಪ್ಪು ಸರ್ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಅವರೊಟ್ಟಿಗೆ ಅಭಿನಯಿಸಿದ್ದೀನಿ ಕೂಡ. ಈ ಚಿತ್ರ ನನಗೆ ಬಹಳ ವಿಶೇಷ. ನಾನು ಹಾಗೂ ನನ್ನ ನಾಯಕ ನಟಿಯರು ಅಪ್ಪು ಸರ್ ಹಾಗೂ ಪ್ರಭುದೇವ ಸಾರ್ ಜೊತೆ ಡ್ಯಾನ್ಸ್ ನಲ್ಲಿ ಕುಣಿಯಬೇಕಿತ್ತು. ನನಗೆ ಡ್ಯಾನ್ಸ್ ಅಷ್ಟಾಗಿ ಬರದ ಕಾರಣ ನಾನು ನಿರ್ದೇಶಕರ ಬಳಿ ರಿಕ್ವೆಸ್ಟ್ ಮಾಡಿ ಹೊರ ಉಳಿದೆ. ಒಟ್ಟಾರೆ ಈ ಚಿತ್ರ ಬಹಳ ಉತ್ತಮವಾಗಿ ಮೂಡಿಬಂದೆ ಎಂದರು.

ನಾಯಕಿ ಸಂಗೀತಾ ಶೃಂಗೇರಿ, ಚಿತ್ರದಲ್ಲಿ ಅನು ಎಂಬ ಬೋಲ್ಡ್ ಹುಡುಗಿಯ ಪಾತ್ರ ಮಾಡಿದ್ದಾರಂತೆ. ಮಿಡಲ್‌ಕ್ಲಾಸ್ ಹುಡುಗಿ, ಮ್ಯಾರೇಜ್ ಬಗ್ಗೆ ಕನ್‌ಪ್ಯೂಸ್ ಇರುವ ಪಾತ್ರವಂತೆ.
ಮತ್ತೊಬ್ಬ ನಾಯಕಿ ರೋಷನಿ ಪ್ರಕಾಶ್ ಅವರಿಲ್ಲಿ ಮೀರಾ ಎನ್ನುವ ಪಾತ್ರದಲ್ಲಿ ನಟಿಸಿದ್ದೇನೆ. ಕವಲುದಾರಿ ಚಿತ್ರದ ನಂತರ ಇಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ರಂಗಾಯಣ ರಘ, ಸಾಧುಕೋಕಿಲ ಮುಂತಾದವರು ಅಭಿನಯಿಸಿದ್ದಾರೆ. ಧನಂಜಯ ಅವರು ಈ ಚಿತ್ರದಲ್ಲಿ ಅಪ್ಪು, ಪ್ರಭುದೇವಾ ಅಭಿನಯದ ಬಾರೋ ರಾಜಾ ಹಾಡೋಣ ಬಾರೋ ಎನ್ನುವ ಹಾಡೂ ಸೇರಿದಂತೆ 6 ಹಾಡುಗಳನ್ನೂ ರಚಿಸಿದ್ದಾರೆ. ಜೀವಾಶಂಕರ್ ಛಾಯಾಗ್ರಹಣವಿದೆ. ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ಪಿ.ಆರ್. ಮೀನಾಕ್ಷಿ ಸುಂದರಂ ಹಾಗೂ ಸುಂದರ ಕಾಮರಾಜ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ವಿ2 ವಿಜಯ್ ಮತ್ತು ವಿಕ್ಕಿ ಅವರ ಸಂಗೀತವಿದೆ

.

Related Posts

error: Content is protected !!