ಜನಮನ್ನಣೆ ಪಡೆಯುತ್ತಿರುವ ಟಾಕೀಸ್ ಆಪ್: ಕನ್ನಡ ನಿರ್ಮಾಪಕರಿಗೆ ಮೂಡಿಸಿದ ಭರವಸೆ…

ಇತ್ತೀಚೆಗಷ್ಟೇ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ರಿಲೀಸ್ ಮಾಡಿದ್ದ ಟಾಕೀಸ್‌ ಆ್ಯಪ್‌ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಚ್ಚ ಕನ್ನಡದ ಅತ್ಯುತ್ತಮ ಗುಣಮಟ್ಟದ ಓಟಿಟಿ ವೇದಿಕೆ ಇದಾಗಿದ್ದು ಕನ್ನಡ ನಿರ್ಮಾಪಕರಿಗೆ ಹೊಸ ಭರವಸೆ ಮೂಡಿಸಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಈ ಆ್ಯಪ್‌ನಲ್ಲಿ ಕಳೆದ ಮೂರ್ನಾಲ್ಕು ತಿಂಗಳಲ್ಲಿ ನೂರಾರು ಸಿನಿಮಾ, ಹತ್ತಾರು ವೆಬ್‌ ಸೀರೀಸ್‌, ಮಕ್ಕಳ ಕಥೆಗಳು ಸೇರಿದಂತೆ ಸಾಕಷ್ಟು ಕಂಟೆಂಟ್‌ಗಳು ಇಲ್ಲಿ ಲಭ್ಯವಿದ್ದು, ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ, ನಾಟಕ, ಯಕ್ಷಗಾನ, ಮಕ್ಕಳ ಕಥೆ, ಕಾರ್ಟೂನ್‌ಗಳು ಸೇರಿದಂತೆ ಮನರಂಜನೆಗೆ ಹೆಚ್ಚು ಒತ್ತು ಕೊಡುವಲ್ಲಿ ನಮ್ಮ ತಂಡ ಉತ್ಸುಕವಾಗಿದೆ ಎಂದು ಸಂಸ್ಥೆಯ ಚೇರ್ಮನ್‌ ರತ್ನಾಕರ್‌ ಕಾಮತ್‌ ಅವರ ಮಾತು.

ಸ್ವಯಂಪ್ರಭಾ ಎಂಟರ್‌ಟೈನ್‌ಮೆಂಟ್‌ ಮತ್ತು ಪ್ರೊಡಕ್ಷನ್ಸ್‌ ಹೊರತಂದಿರುವ ಟಾಕೀಸ್‌ ಆ್ಯಪ್‌, ಈಗಾಗಲೇ ನಿರೀಕ್ಷೆ ಮೀರಿ ದಾದಾರರನ್ನು ಹೊಂದಿದೆ. 1200ಕ್ಕೂ ಅಧಿಕ ಕಲಾವಿದರು, 700ಕ್ಕೂ ಹೆಚ್ಚು ತಂತ್ರಜ್ಞರ ಪ್ರಯತ್ನದ ಫಲವಾದ`ಟಾಕೀಸ್‌ ಆಪ್ ಪ್ರತೀ ತಿಂಗಳು ಎಂಟು ಸಂಚಿಕೆಗಳ ಒಂದು ಹೊಸ ವೆಬ್‌ ಸೀರೀಸ್‌ ಹಾಗೂ ಪ್ರತಿ ವಾರ ಎರಡು ಹೊಸ ಕಂಟೆಂಟ್‌ಗಳನ್ನು ಹೊರತರುತ್ತಿದೆ.

ವಿಜಯ ರಾಘವೇಂದ್ರ, ಪ್ರಮೋದ್‌ ಶೆಟ್ಟಿ, ರಂಜನಿ ರಾಘವನ್‌, ದಿವ್ಯ ಉರುಡುಗ, ಮಂಜು ಪಾವಗಡ, ವೈಷ್ಣವಿ, ಭೂಮಿ ಶೆಟ್ಟಿ, ನಾಗೇಂದ್ರ ಶಾ, ನಿವೇದಿತಾ ಗೌಡ, ಚಂದನ್‌ ಶೆಟ್ಟಿ, ದೀಪಿಕಾ, ಚಂದನಾ ಮುಂತಾದವರು`ಟಾಕೀಸ್‌’ ಸಿನಿಮಾ, ವೆಬ್‌ ಸೀರೀಸ್‌ನ ಭಾಗವಾಗಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಹಕೂನ ಮಟಟ, ವನಜಾ, ಗರಂ ಮಸಾಲಾ, ಕರ್ಮ ರಿಟರ್ನ್‌, ವಿಟಮಿನ್‌ ಎಂ ಅಲ್ಲದೆ ಮುಂದಿನ ದಿನಗಳಲ್ಲಿ ಪೊಲೀಸ್‌ ಫೈಲ್ಸ್, ಜಾಲಿ ಬ್ಯಾಚುಲರ್ಸ್, ಲವ್‌ ಬರ್ಡ್ಸ್ ಹಾಗೂ ನಿವೃತ್ತ ಎಸ್‌.ಪಿ ಎಸ್‌.ಕೆ.ಉಮೇಶ್‌ ಅವರ ಕಥಾಸಂಕಲನ ಸೇರಿದಂತೆ ಸಾಕಷ್ಟು ವೆಬ್‌ ಸೀರೀಸ್‌, ಕಿರುಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

Related Posts

error: Content is protected !!