ಈಗಾಗಲೇ ನಾನಾ ಭಾಷೆಯಲ್ಲಿ ಹಲವು ಪ್ರಮುಖ ವ್ಯಕ್ತಿಗಳ, ಸಾಧಕರ ಜೀವನ ಚರಿತ್ರೆ ಕುರಿತು ಸಿನಿಮಾಗಳು ಬಂದಿವೆ. ಬಯೋಪಿಕ್ ಸಿನಿಮಾಗಳು ಸುಮ್ಮನೆ ಆಗುವುದಿಲ್ಲ. ಅದರಲ್ಲೂ ಸಾಧನೆ ಮಾಡಿ ಸಾವಿರಾರು ಮಂದಿ ಬದುಕನ್ನ ಹಸನು ಮಾಡಿದವರ ಸಿನಿಮಾಗಳೇ ಹೆಚ್ಚು. ಈಗ ಕನ್ನಡದಲ್ಲೂ ಅಂತಹ ಸಾದಕರೊಬ್ಬರ ಬಯೋಪಿಕ್ ಸಿನಿಮಾವೊಂದು ಶುರುವಾಗಿದೆ.ಅದು ಬೇರಾರೂ ಅಲ್ಲ, ಸಾರಿಗೆ ಕ್ಷೇತ್ರ ಮತ್ತು ಮಾಧ್ಯಮ ರಂಗದಲ್ಲಿ ಛಾಪು ಮೂಡಿಸಿರುವ ಯಶಸ್ವಿ ಉದ್ಯಮಿ ವಿಜಯ ಸಂಕೇಶ್ವರ ಅವರದು.ಅವರ ಬಯೋಪಿಕ್ ಸಿನಿಮಾಗೆ ಇಟ್ಟ ಹೆಸರು ವಿಜಯಾನಂದ….
ಪ್ರತಿಷ್ಠಿತ ವಿ ಆರ್ ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಆದ ಡಾ. ಆನಂದ ಸಂಕೇಶ್ವರ ಅವರು ಇದೀಗ ವಿ ಆರ್ ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ “ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿ, ಅವರ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ “ವಿಜಯಾನಂದ ನಿರ್ಮಿಸಿದ್ದಾರೆ.
ಇದು ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ. 1976 ರಲ್ಲಿ ಒಂದೇ ಟ್ರಕ್‌ನೊಂದಿಗೆ ತನ್ನ ಪ್ರಯಾಣ ಶುರುಮಾಡಿ , ಇಂದು ಭಾರತದ ಅತಿದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆ ಇಲ್ಲಿದೆ. ಈ ಕಥೆ ವಿಜಯ ಸಂಕೇಶ್ವರ ಮತ್ತು ಅವರ ಪುತ್ರ ಆನಂದ ಸಂಕೇಶ್ವರ ಅವರ ಯಶಸ್ಸಿನ ಕಥೆ ಒಳಗೊಂಡಿದೆ.
“ವಿಜಯಾನಂದ” ಚಿತ್ರದ ಮೊದಲ ಅಧಿಕೃತ ಟೀಸರ್ ಈಗ ರಿಲೀಸ್ ಆಗಿದ್ದು, ಎಲ್ಲೆಡೆ ಮೆಚ್ಚುಗೆ ಪಡೆದು ಲಕ್ಷಗಟ್ಟಲೆ ವೀಕ್ಷಣೆ ಪಡದಿದೆ.
ಇದು ತಮಿಳು, ತೆಲುಗು ಮತ್ತು ಮಳಯಾಳಂ ಭಾಷೆಗಳಲ್ಲೂ ತೆರೆ ಕಾಣಲಿದೆ. ಇನ್ನು ಈ ಹಿಂದೆ “ಟ್ರಂಕ್” ಸಿನಿಮಾ ನಿರ್ದೇಶಿಸಿದ್ದ ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕರು.”ವಿಜಯಾನಂದ” ಸಿನಿಮಾಗೆ ವಿಜಯ ಸಂಕೇಶ್ವರ ಅವರ ಪಾತ್ರಕ್ಕೆ “ಟ್ರಂಕ್” ಚಿತ್ರದಲ್ಲಿ ನಾಯಕರಾಗಿದ್ದ ನಿಹಾಲ್ ಬಣ್ಣ ಹಚ್ಚಿದ್ದಾರೆ.
ಪ್ರಮುಖ ಪಾತ್ರಗಳಲ್ಲಿ ಅನಂತನಾಗ್, ವಿನಯಾ ಪ್ರಸಾದ್, ರವಿಚಂದ್ರನ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ಮತ್ತು ಭರತ್ ಬೋಪಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರ ರಂಗದ ಗೋಪಿ ಸುಂದರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ರವಿ ವರ್ಮಾ ಸಾಹಸವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ಹಿಡಿದಿದ್ದಾರೆ. ಕುಮಾರ್ ಸಂಕಲನವಿದೆ.