ಇದು ಇವರ ಸೆಕೆಂಡ್ ಲೈಫ್‌ ಸ್ಟೋರಿ! ಇಲ್ಲಿ ಏನೇನು ಆಗುತ್ತೆ ಅನ್ನೋದೇ‌ ಸಸ್ಪೆನ್ಸ್

ಯಾರಾದರೂ ದೊಡ್ಡ ಅನಾಹುತದಿಂದ ಪಾರಾದಾಗ ಆಡುವ ಮಾತು ನನಗೆ ಇದು “2nd ಲೈಫ್” ಅಂತ. ಈಗ ಅದೇ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ.

ಜಯಣ್ಣ ಫಿಲಂಸ್ ಹಾಗೂ ಶುಕ್ರ ಫಿಲಂಸ್ ನಿರ್ಮಿಸಿರುವ “2nd ಲೈಫ್” ಚಿತ್ರವನ್ನು ರಾಜು ದೇವಸಂದ್ರ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು “ಅಕ್ಷತೆ” ಸೇರಿದಂತೆ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದು ನಾಲ್ಕನೇ ಚಿತ್ರ. ಈ ಚಿತ್ರದ ಬಗ್ಗೆ ಅವರು ಹೇಳಿದ್ದಿಷ್ಟು…

ಇದು ನನ್ನ ನಾಲ್ಕನೇ ನಿರ್ದೇಶನದ ಚಿತ್ರ. ಥ್ರಿಲ್ಲರ್ ಕಥಾಹಂದರ ಹೊಂದಿದೆ ಈ ಚಿತ್ರ. ಮಂಜುಳ ರಮೇಶ್ ಅವರು ಕಥೆ, ಚಿತ್ರಕಥೆ ಬರೆದಿದ್ದಾರೆ. ನಾನು ನಿರ್ದೇಶನ ಮಾಡಿದ್ದೇನೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಚಿತ್ರ ಇದಾಗಿದೆ ಎಂದು ನಿರ್ದೇಶಕ ರಾಜು ದೇವಸಂದ್ರ ತಿಳಿಸಿದರು.

ನಾನು ಈ ಹಿಂದೆ “ಸ್ವಾರ್ಥ ರತ್ನ” ಎಂಬ ಚಿತ್ರದಲ್ಲಿ ‌ಅಭನಯಸಿದ್ದೆ. ಈಗ “2 nd ಲೈಫ್” ಚಿತ್ರದಲ್ಲಿ ನಟಿಸಿದ್ದೇನೆ. ವಿಭಿನ್ನ ಕಥೆಯಿರುವ ಚಿತ್ರ ನಮ್ಮದು. ಮಗು ಹುಟ್ಟಿದ ಕೆಲವೆ ದಿನಗಳಲ್ಲಿ ಕರಳು ಬಳ್ಳಿ(ಹೊಕ್ಕಳ ಬಳ್ಳಿ) ಬೀಳುತ್ತದೆ. ಇದನ್ನು ಶೇಖರಿಸಿಡುವ ಕಾರ್ಯ ಈಗ ಭರದಿಂದ ಸಾಗಿದೆ. ಇದನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿದೆ. ಅಂತಹ ಕಥಾವಸ್ತು ಆಧರಿಸಿ ನಮ್ಮ ಚಿತ್ರ ನಿರ್ಮಾಣವಾಗಿದೆ. ಒಂದು ಬೇಜಾರಿನ ಸಂಗತಿ ಅಂದರೆ, ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುವ ಪುನೀತ್ ರಾಜಕುಮಾರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಬೇಕಿತ್ತು.

ಈ ಸಲುವಾಗಿ ಚರ್ಚಿಸಲು ಅವರು ನಮಗೆ ಸ್ನೇಹಿತರೊಬ್ಬರ ಮೂಲಕ ಸಮಯವನ್ನು ನೀಡಿದ್ದರು. ಆದರೆ ವಿಧಿಬರಹವೇ ಬೇರೆಯಾಗಿತ್ತು. ಈಗ ನಮ್ಮ ಚಿತ್ರದ ಹಾಡು ಪಿ.ಆರ್.ಕೆ ಮೂಲಕವೇ ಬಿಡುಗಡೆಯಾಗಿರುವುದು ಖುಷಿಯ ವಿಚಾರವೆಂದು ನಾಯಕ ಆದರ್ಶ್ ಗುಂಡುರಾಜ್ ತಿಳಿಸಿದರು.

ಈ‌ ಚಿತ್ರದಲ್ಲಿ ನನ್ನದು ಅಂಧ ಪಾತ್ರ. ಡೈರೆಕ್ಟರ್ ನನಗೆ ಕಥೆ ಬಗ್ಗೆ ಏನು ಹೇಳಿಲ್ಲ. ಪಾತ್ರದ ಕುರಿತು ಮಾತ್ರ ಹೇಳಿದ್ದಾರೆ ಎಂದರು ನಾಯಕಿ ಸಿಂಧೂ ರಾವ್.

ಸಂಗೀತ ನಿರ್ದೇಶಕ ಆರವ್ ಕೌಶಿಕ್, ಛಾಯಾಗ್ರಹಕ ರಮೇಶ್ ಕೊಯಿರ ಹಾಗೂ ನಟ ಶಿವಪ್ರದೀಪ್, ನವೀನ್ ಶಕ್ತಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Related Posts

error: Content is protected !!