ಕನ್ನಡ ಚಿತ್ರರಂಗ ಈಗ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತಹ ಸಿನಿಮಾಗಳನ್ನು ಕಟ್ಟಿ ಕೊಡುತ್ತಿದೆ. ಸದಭಿರುಚಿಯ ಸಿನಿಮಾಗಳ ಜೊತೆಯಲ್ಲಿ ಮಾಸ್ ಸಿನಿಮಾಗಳ ಮೂಲಕ ಸಾಗರದಾಚೆಗೂ ಜೋರು ಸದ್ದು ಮಾಡುತ್ತಿದೆ.

ಈಗ ಹೊಸ ಸುದ್ದಿ ಅಂದರೆ, ಕನ್ನಡದಲ್ಲಿ ದೊಡ್ಡ ಪ್ರೊಡಕ್ಷನ್ ಕಂಪನಿ ಎನಿಸಿಕೊಂಡಿರುವ ಕೆವಿಎನ್ ಪ್ರೊಡಕ್ಷನ್ ಕೂಡ ಎಂಟ್ರಿಯಾಗಿದ್ದು, ಆ ಮೂಲಕ ಬಿಗ್ ಸ್ಟಾರ್ಸ್ ಸಿನಿಮಾಗಳ ನಿರ್ಮಾಣದ ಜೊತೆ ಜೊತೆಗೆ ಸ್ಟಾರ್ಸ್ ಸಿನಿಮಾಗಳ ವಿತರಣೆ ಮಾಡಲು ಮುಂದಾಗಿದೆ. ಈಗಾಗಲೇ ಹಲವು ಸಿನಿಮಾಗಳ ವಿತರಣೆ ಹಕ್ಕು ಪಡೆದಿರುವ ಕೆವಿಎನ್, ಈಗ ಯೋಗರಾಜ್ ಭಟ್ ನಿರ್ದೇಶನದ, ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಅಭಿನಯದ ಗಾಳಿಪಟ 2 ಸಿನಿಮಾದ ವಿತರಣೆ ಹಕ್ಕು ಪಡೆದಿದ್ದಾರೆ.

ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿಂದ ಬಹು ತಾರಾಗಣದ
ಗಾಳಿಪಟ 2 ಚಿತ್ರದ ವಿತರಣೆ ಹಕ್ಕು ಪಡೆದಿದ್ದಾರೆ. ಇತ್ತೀಚೆಗೆ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಿರ್ಮಾಪಕ ರಮೇಶ್ ರೆಡ್ಡಿ