ಕನ್ನಡದಲ್ಲಿ ಈಗ ಸದ್ಯಕ್ಕೆ ಸುದ್ದಿಯಾಗುತ್ತಿರೋ ಚಿತ್ರ ಮಾನ್ಸೂನ್ ರಾಗ. ಹೌದು ಚಿತ್ರ ಶುರುವಾದಾಗಿಂದಲೂ ಒಂದೊಂದೇ ವಿಷಯದಲ್ಲಿ ಸದ್ದು ಮಾಡುತ್ತಲೇ ಇದೆ. ಈಗ ಸಿನಿಮಾ ರಿಲೀಸ್ ಆಗೋಕೆ ತಯಾರಿ ನಡೆಸುತ್ತಿದೆ. ಆಗಸ್ಟ್ 19ಕ್ಕೆ ರಾಜ್ಯಾದ್ಯಂತ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದೆ.
ಈಗ ಹೊಸ ಸುದ್ದಿ ಅಂದರೆ, ಮಾನ್ಸೂನ್ ರಾಗಕ್ಕಾಗಿಯೇ ಹೀರೋ ಡಾಲಿ ಧನಂಜಯ್ ಅಭಿಮಾನಿಗಳು ಫೀಲ್ಡಿಗಿಳಿದಿದ್ದಾರೆ.
ಡಾಲಿ ಧನಂಜಯ ಫ್ಯಾನ್ಸ್
ಕಟೌಟ್ಸ್ ಮಾಡಲು ಮುಂದಾಗಿರೋದೇ ಈ ಹೊತ್ತಿನ ಸುದ್ದಿ. ಡಾಲಿ ಫ್ಯಾನ್ಸ್ ಫ್ಯಾನ್ ಕಾನ್ಸೆಪ್ಟ್ ನಲ್ಲಿ ಮಾನ್ಸೂನ್ ರಾಗ ಕಟೌಟ್ಸ್ ಆಗುತ್ತಿದೆ.
ಡಾಲಿ ರಚಿತಾ ಕಾಂಬಿನೇಷನ್ ಇರುವ ಸ್ಪೆಷಲ್ ಕಟೌಟ್ಸ್ ಈಗ ತಲೆ ಎತ್ತಲು ತಯಾರಾಗುತ್ತಿವೆ ಅನ್ನೋದು ವಿಶೇಷ.
ಈ ಚಿತ್ರದ ವಿಶೇಷ ಅಂದರೆ, ಮಾನ್ಸೂನ್ ರಾಗ ಪ್ರದರ್ಶನವಾಗುವ ರಾಜ್ಯದ ಪ್ರತಿ ಚಿತ್ರಮಂದಿರಗಳ್ಲೂ ಡಾಲಿ ಹಾಗು ಧನಂಜಯ್ ಅವರ ಸ್ಪೆಷಲ್ ಕಟೌಟ್ಸ್ ನಿಲ್ಲಲಿವೆ. ಇದಕ್ಕಾಗಿ ಈಗಾಗಲೇ ಡಾಲಿ ಫ್ಯಾನ್ಸ್ ಸ್ವತಃ ಕಾಳಜಿವಹಿಸಿ ಕಟೌಟ್ಸ್ ಕಾನ್ಸೆಪ್ಟ್ ಕೈಗೆತ್ತಿಕೊಂಡಿದ್ದಾರೆ.
ಆಗಸ್ಟ್ 19ಕ್ಕೆ ರಿಲೀಸ್ ಆಗುತಗತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಕಟೌಟ್ಸ್ ತಯಾರಿ ಭರ್ಜರಿಯಾಗಿಯೇ ನಡೆಯುತ್ತಿದೆ.
ಅದೇನೆ ಇರಲಿ, ಅಭಿಮಾನಿಗಳ ಅಭಿಮಾನವೇ ಅಂಥದ್ದು. ತಮ್ಮ ಪ್ರೀತಿಯ ಹಿರೋ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಅಂತ ಗೊತ್ತಾದರೆ, ಮೊದಲು ಸಂಭ್ರಮಿಸೋದು ಕೂಡ ಅವರೇ. ಬರೀ ಕಟೌಟ್ ನಿಲ್ಲಿಸೋದಷ್ಟೇ ಅಲ್ಲ, ಹಾರ ಹಾಕಿ, ಹಾಲಿನ ಅಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂತಸ ಪಡುತ್ತಾರೆ. ಈ ಮಾನ್ಸೂನ್ ರಾಗ ಚಿತ್ರದ ವಿಷಯದಲ್ಲೂ ಡಾಲಿ ಫ್ಯಾನ್ಸ್ ಅದನ್ನೇ ಮಾಡುತ್ತಿದ್ದಾರೆ.
ಇನ್ನು ಈ ಚಿತ್ರಕ್ಕೆ ರಮೇಶ್ ಅರವಿಂದ್ ಅಭಿನಯದ
ಪುಷ್ಪಕ ವಿಮಾನ ಸಿನಿಮಾ ನಿರ್ದೇಶಿಸಿದ್ದ ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ.
ವಿಖ್ಯಾತ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಖ್ಯಾತ್ ನಿರ್ಮಾಣಕ್ಕೆ ಏನೆಲ್ಲ ಬೇಕೋ ಎಲ್ಲವನ್ನೂ ಒದಗಿಸಿದ್ದರಿಂದ ಸಿನಿಮಾ ಅಂದುಕೊಂಡಿದ್ದಕ್ಕಿಂತಲೂ ಸೊಗಸಾಗಿ ಮೂಡಿ ಬಂದಿದೆ. ಪ್ರಚಾರದ ವಿಚಾರದಲ್ಲೂ ಅವರು ಹಿಂದಿಲ್ಲ, ತಮ್ಮ ಸಿನಿಮಾವನ್ನು ಸಾಕಷ್ಟು ಕಡೆ ತಲುಪುವಲ್ಲಿಯೂ ಅವರು ತಮ್ಮದೇ ತಂಡದ ಜೊತೆ ಕೆಲಸ ನಿರ್ವಹಿಸುತ್ತಿದ್ದಾರೆ.
ಇನ್ನು ಈ ಚಿತ್ರದ ಹೈಲೆಟ್ ಇರೋದೇ ಸಂಗೀತದಲ್ಲಿ. ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಅವರ ಸಂಗೀತ ಹಾಡು ಈಗಾಗಲೇ ಎಲ್ಲೆಡೆ ಸದ್ದು ಮಾಡಿದೆ.