ಒಬ್ಬ ನಿರ್ದೇಶಕನಿಗೆ ತನ್ನ ಸಿನಿಮಾ ಹೀಗೇ ಮೂಡಿಬರಬೇಕೆಂಬ ಕನಸಿರುತ್ತದೆ. ಆತ ತನ್ನ ಕಲ್ಪನೆಯ ಪ್ರಕಾರವೇ ಚಿತ್ರವನ್ನು ತೆರೆಯಮೇಲೆ ತರಬೇಕಾದರೆ ಅದಕ್ಕೆ ನಿರ್ಮಾಪಕ ನೀಡುವ ಸಹಕಾರ ಬಹು
ಮುಖ್ಯ. ಯಾವುದೇ ಒಂದು ಚಿತ್ರಕ್ಕೆ ಅದರ ನಿರ್ಮಾಪಕ ಹಾಗೂ ನಿರ್ದೇಶಕ ಎರಡು ಕಣ್ಣುಗಳಿದ್ದಂತೆ. ಆರಂಭದಿಂದ ಕೊನೆಯವರೆಗೂ ಇಬ್ಬರಲ್ಲಿ ಪರಸ್ಪರ ಹೊಂದಾಣಿಕೆಯಿದ್ದು, ಅಷ್ಟೇ ಪ್ರೀತಿಯಿಂದ ಚಿತ್ರವನ್ನು ಹೊರತಂದಾಗ ಅದು ಖಂಡಿತ ಉತ್ತಮ ಚಿತ್ರವಾಗಿರುತ್ತದೆ. ಹಾಗೆ ಮೂಡಿಬಂದಿರುವ ಚಿತ್ರವೇ ಓ ಮೈ ಲವ್. ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲಕೇರಿ ಅಭಿನಯಿಸಿದ ಈ ಚಿತ್ರಕ್ಕೆ ಸ್ಮೈಲ್ ಶ್ರೀನು ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಮಾಂಜಿನಿ ಅವರು ತಮ್ಮದೇ ಕಥೆಗೆ ಬಂಡವಾಳ ಹೂಡಿದ್ದಾರೆ.
ಈಗ ರಾಜ್ಯದೆಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿರುವ, ಪ್ರೇಕ್ಷಕರಿಂದ ಪ್ರಶಂಸೆ ಪಡೆದಿರುವ ಈ ಚಿತ್ರದ ಪ್ರಾರಂಭದಿಂದಲೂ ನಿರ್ದೇಶಕರ ಮೇಲೆ
ನಂಬಿಕೆಯಿಟ್ಟಿದ್ದ ಜಿ. ರಾಮಾಂಜಿನಿ ಅವರು ಬಿಗ್ ಬಜೆಟ್ ನಲ್ಲಿ ಭರ್ಜರಿಯಾಗಿ ಈ ಸಿನಿಮಾ ನಿರ್ಮಿಸಿದ್ದಾರೆ. ಅದರ ಫಲವಾಗಿ ಇಡೀ ಚಿತ್ರವನ್ನು ಪ್ರೇಕ್ಷಕ ಎಂಜಾಯ್ ಮಾಡುತ್ತಿದ್ದಾರೆ.
ಚಿತ್ರದ ಈ ಯಶಸ್ಸಿನ ಕುರಿತಂತೆ ಖುಷಿಯಿಂದ ಮಾತನಾಡಿರುವ ನಿರ್ದೇಶಕ ಸ್ಮೈಲ್ ಶ್ರೀನು, ಚಿತ್ರ ನೋಡಿದ ಪ್ರತಿಯೊಬ್ಬರಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬರುತ್ತಿರುವುದು ನಿರ್ಮಾಪಕರೂ ಸೇರಿದಂತೆ ಇಡೀ ಚಿತ್ರತಂಡಕ್ಕೆ ಖುಷಿ ನೀಡಿದೆ. ಚಿತ್ರದ ಪ್ರತಿ ಫ್ರೇಮ್ ಬಗ್ಗೆ ಜನ ನೀಡುತ್ತಿರುವ ಪ್ರತಿಕ್ರಿಯೆ, ಪ್ರಶಂಸೆ ವ್ಯಕ್ತಪಡಿಸುತ್ತಿರುವುದಕ್ಕೆ ನನ್ನ ಜೊತೆ ಕೆಲಸ ಮಾಡಿದ ಇಡೀ ಟೀಮ್ ಹಾಕಿದ ಎಫರ್ಟ್ ಕಾರಣ.ಮೆಲೋಡಿ ಹಾಡುಗಳನ್ನು ಮಾಡಿಕೊಟ್ಟ ಚರಣ್ ಅರ್ಜುನ್, ಇಡೀ ಚಿತ್ರವನ್ನು ಸುಂದರವಾಗಿ ಕಟ್ಟಿಕೊಟ್ಟಿರುವ ಛಾಯಾಗ್ರಾಹಕ ಎಸ್.ಹಾಲೇಶ್, ಸಂಕಲನಕಾರ ಡಿ.ಮಲ್ಲಿ, ಸಾಹಸ ನಿರ್ದೇಶಕ ರಿಯಲ್ ಸತೀಶ್,ಕೊರಿಯೋಗ್ರಾಫರ್‌ಗಳಾದ ವಿ.ಮುರುಳಿ, ಸಂತೋಷ್, ಸೇರಿದಂತೆ ಸಹಕಾರ ಎಲ್ಲರಿಗೂ ಧನ್ಯವಾದ.
ಎಲ್ಲರೂ ನನ್ನ ಆಲೋಚನೆಗಳಿಗೆ ಜೀವ ತುಂಬಿದವರು, ನಾನು ಏನೇ ಸೌಲಭ್ಯ ಕೇಳಿದರೂ ಯಾಕೆ ಎಂದು ಕೇಳದೆ ಎಲ್ಲವನ್ನೂ ಒದಗಿಸಿಕೊಟ್ಟ ನಿರ್ಮಾಪಕ ರಾಮಾಂಜಿನಿ ಅವರು ಈ ಯಶಸ್ಸು ಪ್ರಶಂಸೆಗೆ ಕಾರಣ ಎಂದಿದ್ದಾರೆ ಶ್ರೀನು. ನಾನೇನು ಅಂದುಕೊಂಡು ಸನ್ನಿವೇಶಗಳನ್ನು ಬರೆದಿದ್ದೆನೋ ಅದೇ ರೀತಿ ಪ್ರೇಕ್ಷಕರು ಪ್ರತಿಕ್ರಯಿಸುತ್ತಿದ್ದಾರೆ, ನಟ ಶಶಿಕುಮಾರ್ ಕೂಡ
ಕಾಲ್ ಮಾಡಿ ಸೂಪರ್ ಆಗಿ ಸಿನಿಮಾ ಮಾಡಿದ್ದೀಯ, ಇಷ್ಟು ಚೆನ್ನಾಗಿ ಬಂದಿರುತ್ತೆ ಅಂದ್ಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಥೇಟರ್ ಆಪರೇಟರ್‌ಗಳು ಸಹ ಕಾಲ್ ಮಾಡಿ ಇತ್ತೀಚೆಗೆ ಸ್ಟಾರ್ ಸಿನಿಮಾ ಬಿಟ್ಟರೆ ಬೇರೆ ಚಿತ್ರಗಳಿಗೆ ಜನ ಬರೋದೇ ಕಡಿಮೆಯಾಗಿತ್ತು. ನಿಮ್ಮ ಚಿತ್ರದಿಂದ ಮತ್ತೆ ಥೇಟರ್ ಜನರಿಂದ ತುಂಬುವಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ತೆಲುಗಿನ ಅನೇಕ ನಿರ್ಮಾಪಕರು ಫೋನ್ ಮಾಡಿ ರೀಮೇಕ್, ಡಬ್ಬಿಂಗ್ ಮಾಡಲು ಕೇಳುತ್ತಿದ್ದಾರೆ. ಜೊತೆಗೆ ಒಂದೊಳ್ಳೆ ಕಥೆ ತನ್ನಿ, ಚಿತ್ರ ಮಾಡೋಣ ಎಂದು ಆಫರ್ ನೀಡುತ್ತಿದ್ದಾರೆ. ಇದಕ್ಕೆಲ್ಲ ಓ ಮೈ ಲವ್ ಚಿತ್ರವೇ ಕಾರಣ ಎಂದು ಹೇಳಿದ್ದಾರೆ.
ನಿರ್ಮಾಪಕರಿಗೆ ಯಾವುದೇ ಬರ್ಡನ್ ಹಾಕದೆ ಚಿತ್ರದ ವೈಭವಕ್ಕೆ ಏನು ಬೇಕೋ ಅಷ್ಟನ್ನು ಮಾತ್ರ ಖರ್ಚು ಮಾಡಿಸುವ ಸ್ಮೈಲ್ ಶ್ರೀನು ಅವರು ನಿಜವಾಗಿಯೂ ನಿರ್ಮಾಪಕರ ನಿರ್ದೇಶಕ.