ಅನಿತಾ ಭಟ್ ನಿರ್ಮಾಣದ ಇಂದಿರಾ ವೂಟ್ ಸೆಲೆಕ್ಟ್ ನಲ್ಲಿ ದರ್ಶನ: ಭಟ್ಟರ ಮೊದಲ ನಿರ್ಮಾಣದ ಸಿನಿಮಾಗೆ ಸಿಕ್ತು ಭರ್ಜರಿ ಮೆಚ್ಚುಗೆ…

ನಟಿ ಅನಿತಾ ಭಟ್ ಅಂದಾಕ್ಷಣ ನೆನಪಾಗೋದೇ ಹಾಟ್ ಬೆಡಗಿ ಲುಕ್. ಹೌದು ಅನಿತಾಭಟ್ ನಟಿಯಾಗಿ ಈಗಾಗಲೇ ಸಾಕಷ್ಟು ಸುದ್ದಿಯಾಗಿದ್ದಾರೆ. ಅದು ಹಳೇ ಸುದ್ದಿ. ಆದರೆ ಅವರು‌ ನಿರ್ಮಾಪಕಿಯಾಗಿಯೂ ಎಂಟ್ರಿಯಾಗಿದ್ದಾರೆ ಅನ್ನೋದು ಹೊಸ ಸುದ್ದಿಯಂತೂ ಅಲ್ಲ‌ ಬಿಡಿ. ಅವರು ಈಗಾಗಲೇ ತಮ್ಮ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂದು ಸಿನಿಮಾ ನಿರ್ಮಿಸುವ ಮೂಲಕ ನಿರ್ಮಾಪಕಿಯಾಗಿದ್ದಾರೆ. ಅವರು ಸದ್ದಿಲ್ಲದೆಯೇ ಇಂದಿರಾ ಎಂಬ ಸಿನಿಮಾ ಮಾಡಿದ್ದಾರೆ.

ಅದೀಗ ರಿಲೀಸ್ ಆಗುತ್ತಿದೆ ಅನ್ನೋದೇ ವಿಶೇಷ. ಹೌದು.
ಅನಿತಾ ಭಟ್ ನಿರ್ಮಾಣದ ಮೊದಲ‌ ಸಿನಿಮಾ ಮೊದಲನೇ ಸಿನಿಮಾ “ಇಂದಿರಾ”. ಈ ಚಿತ್ರ ಜುಲೈ 8ಕ್ಕೆ ರಿಲೀಸ್ ಅಗುತ್ತಿದೆ. ಅದು ವೂಟ್ ಸೆಲೆಕ್ಟ್ ನಲ್ಲಿ. ಇಂದಿರಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ.

ವಿಶೇಷವೆಂದರೆ, ಇಂದಿರಾ ಸಿನಿಮಾದ ಕಂಟೆಂಟ್ ಹಾಗು ಗುಣಮಟ್ಟವೇ ವೂಟ್ ಸೆಲೆಕ್ಟ್ ನಲ್ಲಿ ಸಿನಿಮಾ ಬಿಡುಗಡೆಗೆ ಕಾರಣ ಅನ್ನೋದು ನಿರ್ಮಾಪಕಿ ಅನಿತಾಭಟ್ ಅವರ ಮಾತು.

ಈಗಾಗಲೇ ಇಂದಿರಾ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ‌ ಕೂಡ ವೂಟ್ ಸೆಲೆಕ್ಟ್ ನಲ್ಲಿ ತೆರೆ ಕಾಣುತ್ತಿದೆ.
ಅಂದಹಾಗೆ, ಇಂದಿರಾ ಸೈಕಲಾಜಿಕಲ್ ಥ್ರಿಲ್ಲರ್. ಇದು‌ ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗಿದೆ. ರಿಷಿಕೇಶ್ ಚಿತ್ರದ ನಿರ್ದೇಶಕರು. ನಿರ್ದೇಶಕರೇ ಇಲ್ಲಿ ಛಾಯಾಗ್ರಹಣ ಮತಗತು ಸಂಕಲನ‌ ಕೆಲಸ‌ ಮಾಡಿದ್ದಾರೆ.

ಇಲ್ಲಿ ಅನಿತಾಭಟ್ ಜೊತೆಯಲ್ಲಿ ಷಫಿ, ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್, ನೀತು ಇತರರು ನಟಿಸಿದ್ದಾರೆ.
ಲೋಹಿತ್ ಎಲ್. ನಾಯಕ್ ಸಂಗೀತವಿದೆ. ಅಭಿಷೇಕ್ ಮಠದ್ ಅವರ ನೃತ್ಯವಿದೆ.


ಅನಿತಾಭಟ್ ಅವರೊಂದಿಗೆ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ್ ಸೊರಬ್ ಅವರು ಸಾಥ್ ನೀಡಿದ್ದಾರೆ.

ಅದೇನೆ ಇರಲಿ, ನಟಿಯಾಗಿ ಗೆದ್ದಿರುವ ಅನಿತಾಭಟ್ ಈಗ ನಿರ್ಮಾಣದಲ್ಲೂ ಗೆಲುವಿನ ನಗೆ ಬೀರಿದ್ದಾರೆ. ಅವರ ಇಂದಿರಾ ಅವರಿಗೆ ಖುಷಿ ಕೊಟ್ಟಿದೆ ಅನ್ನೋದೆ ಅವರ ಮತ್ತೊಂದು ಹೊಸ ಪ್ರಾಜೆಕ್ಟ್ ಗೆ ಕಾರಣವಾಗಿದೆ.

Related Posts

error: Content is protected !!