ತರಂಗ ವಿಶ್ವನ ಹೊಸ ರಂಗು: ಜುಲೈ 8ಕ್ಕೆಗಿರ್ಕಿ ಗ್ರ್ಯಾಂಡ್ ಎಂಟ್ರಿ…

ಹಾಸ್ಯ ನಟ ತರಂಗ ವಿಶ್ವ ನಟನೆಯೊಂದಿಗೆ ನಿರ್ಮಾಣ ಕೂಡ ಮಾಡಿರುವ “ಗಿರ್ಕಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಎಂಟರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಾಸುಕಿ ಭುವನ್, ವಿಶ್ವ ಅವರಿಗೆ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ವೀರೇಶ್ ಪಿ.ಎಂ ನಿರ್ದೇಶನ ಮಾಡಿದ್ದಾರೆ

ನಾನು ಕಲಾವಿದನಾಗಿ ಬಂದ ದಿನದಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಅಪಾರ. ಈಗ ನಿರ್ಮಾಪಕನಾಗಿ “ಗಿರ್ಕಿ” ಚಿತ್ರ ನಿರ್ಮಿಸಿದ್ದೇನೆ. ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿದೆ. ಎಲ್ಲರಿಗೂ ಮಚ್ವುಗೆಯಾಗಿದೆ. ಚಿತ್ರ ಇದೇ ಎಂಟರಂದು ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲವಿರಲಿ. ಒಂದೊಳ್ಳೆಯ ಕಥೆ ಇಲ್ಲಿದೆ. ಗೆಳೆತನ, ಪ್ರೀತಿ, ಒಂದಷ್ಟು ಥ್ರಿಲ್ಲಿಂಗ್ ಅಂಶಗಳಿವೆ ಎಂದರು ವಿಶ್ವ.

ವಿಶ್ವ ಅವರನ್ನು ನಾನು ಬಹಳ ದಿನಗಳಿಂದ ಬಲ್ಲೆ. ಒಂದು ದಿನ ಅವರು ನನ್ನ ಬಳಿ ಬಂದು, ನಾನು ಒಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾನು ಹಾಗೂ ವಿಲೋಕ್ ರಾಜ್ ಪ್ರಮುಖಪಾತ್ರದಲ್ಲಿ ನಟಿಸುತ್ತೇವೆ. ನೀವು ನಿರ್ದೇಶನ ಮಾಡಬೇಕೆಂದರು. ಆಗ “ಗಿರ್ಕಿ” ಚಿತ್ರ ಆರಂಭವಾಯಿತು. ಮೊದಲ ನಿರ್ದೇಶನಕ್ಕೆ ಅವಕಾಶ ನೀಡಿದ್ದ ವಿಶ್ವ ಹಾಗೂ ವಾಸುಕಿ ಭುವನ್ ಅವರಿಗೆ ಧನ್ಯವಾದ.

“ಗಿರ್ಕಿ” ಎಂದರೆ ಸುತ್ತಾಟ. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನನಗೆ ಸಹಕಾರ ನೀಡಿದ ಚಿತ್ರತಂಡವನ್ನು ನೆನೆಯುತ್ತೇನೆ. ನಮ್ಮ ಚಿತ್ರಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಕೇಳುತ್ತೇನೆ ಎಂದರು ನಿರ್ದೇಶಕ ವೀರೇಶ್ ಪಿ.ಎಂ.

ನಾನು ಈ ಹಿಂದೆ “ಮಾಸ್ಟರ್ ಪೀಸ್” ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ವಿಶ್ವ ನನ್ನ ಮಿತ್ರರು. ಅವರು ನಾನು ಈ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದೇವೆ. ಒಳ್ಳೆಯ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹ ನೀಡಿ ಎಂದರು ನಟ ವಿಲೋಕ್ ರಾಜ್.

“ಗಿರ್ಕಿ” ಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ನಟಿ ದಿವ್ಯ ಉರುಡಗ, ಮನೋರಂಜನೆಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ನೋಡಿ ಹಾರೈಸಿ ಎಂದರು.

ಸಂಗೀತ ನಿರ್ದೇಶಕ ವೀರಸಮರ್ಥ್ “ಗಿರ್ಕಿ” ಹಾಡುಗಳ ಬಗ್ಗೆ ಮಾತನಾಡಿ, ಇದೊಂದು ವಿಭಿಮ್ನ ಕಥಾಹಂದರ ಹೊಂದಿರುವ ಸಿನಿಮಾ. ಹಾಡುಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದೆ. ವಿಶ್ವ‌ ಅವರ ಸಾಹಸ ಮೆಚ್ಚಬೇಕು. ಅವರು ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಸಿನಿಮಾ ಮಾಡಿದ್ದಾರೆ ಎಂದರು ವೀರ್ ಸಮರ್ಥ್.

Related Posts

error: Content is protected !!